
ಹೈದರಾಬಾದ್ (ಆಗಸ್ಟ್ 21): ಕುಡಿತದ ಅಮಲೋ? ನಟನ ದುರಹಂಕಾರವೋ? ಅಥವಾ ಇನ್ಪ್ಲುಯೆನ್ಸ್ ನಡೆಯುತ್ತದೆ ಅನ್ನುವ ಭಾವನೆಯೋ ಗೊತ್ತಿಲ್ಲ. ಆದರೆ ಸಿಸಿಟಿವಿಗೆ ಮಾತ್ರ ಯಾರೋ ಯಾಮಾರಿಸೋಕೆ ಆಗೋಲ್ಲ ನೋಡಿ!
ಮಂಗಳವಾರ ಮಧ್ಯರಾತ್ರಿ ಅಂದರೆ ಆಗಸ್ಟ್ 20 ರಂದು ಹೈದರಾಬಾದ್ ನ ಅಲ್ಕಾಪುರ ಟೌನ್ ವೃತ್ತದ ಬಳಿ ನಡೆದ ಕಾರು ಅಪಘಾತ ಟಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ. ಟಾಲಿವುಡ್ ಚಾರ್ಮಿಂಗ್ ನಟ ರಾಜ್ ತರುಣ್ ಡಿವೈಡರ್ ಗೆ ಡಿಕ್ಕಿ ಹೊಡೆದು ಆ ನಂತರ ಕಾರಿನಿಂದ ಇಳಿದು ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ.
ಘಟನೆ ನಡೆದು 24 ಗಂಟೆಗಳ ಬಳಿಕ ಟ್ಟಿಟರ್ ಖಾತೆಯಲ್ಲಿ ರಾಜ್ ತರುಣ್ ‘ನನ್ನ ಬಗ್ಗೆ ಕಾಳಜಿ ವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಮನೆಯಿಂದ ನರ್ಸಿಂಗ್ ಸರ್ಕಲ್ ಬಳಿ ಸಾಗುವಾಗ ಈ ಘಟನೆ ನಡೆದಿದೆ. ಇಲ್ಲಿ ಕಳೆದ 3 ತಿಂಗಳಿಂದ ಅಪಘಾತ ಹೆಚ್ಚಾಗುತ್ತಿದ್ದು ಇದೊಂದು ಅಪಘಾತ ವಲಯ’ವಾಗಿದೆ.ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ‘ತಕ್ಷಣಕ್ಕೆ ಏನಾಯಿತೋ ಏನೋ, ಕಾರಿನ ಕಂಟ್ರೋಲ್ ತಪ್ಪಿ ರೋಡಿನ ಡಿವೈಡರ್ ಗೆ ಹೊಡೆದೆ. ಆ ಸೌಂಡಿನಿಂದ ನನ್ನ ಕಿವಿ ಕೆಂಪಾಯಿತು. ಕಣ್ಣು ಮಂಜಾಯಿತು. ಹೃದಯ ಬಡಿತ ಹೆಚ್ಚಾಯಿತು. ಸೀಟ್ ಬೆಲ್ಟ್ ಹಾಕಿಕೊಂಡಿದ್ದ ಕಾರಣ ಯಾವ ತೊಂದರೆಯೂ ಆಗಲಿಲ್ಲ. ಸಹಾಯಬೇಕೆಂದು ತಕ್ಷಣ ಮನೆ ಕಡೆ ಓಡಿ ಹೋದೆ’ ಎಂದು ಘಟನೆ ಬಗ್ಗೆ ರಾಜ್ ತರುಣ್ ಸ್ಪಷ್ಟನೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.