ದರ್ಶನ್’ಗೆ 41 ನೇ ಹುಟ್ಟಹಬ್ಬದ ಸಂಭ್ರಮ

Published : Feb 16, 2018, 08:55 AM ISTUpdated : Apr 11, 2018, 12:42 PM IST
ದರ್ಶನ್’ಗೆ 41 ನೇ ಹುಟ್ಟಹಬ್ಬದ ಸಂಭ್ರಮ

ಸಾರಾಂಶ

ದರ್ಶನ್ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಅದ್ಧೂರಿಯಾಗಿ ಆಚರಿಸಲಿದ್ದಾರೆ. ಡಿ ಬಾಸ್ ಹೆಸರಿನಲ್ಲಿ 300 ಪ್ಲಸ್ ವಾಟ್ಸಪ್ ಗ್ರೂಪ್ ಸೃಷ್ಟಿಯಾಗಿವೆ. ಫೇಸ್‌ಬುಕ್, ಟ್ವಿಟ್ಟರ್‌ಗಳಲ್ಲಿ ಡಿ ಬಾಸ್, ಡಿ ಫ್ಯಾಮಿಲಿ, ದರ್ಶನ್ ಹುಡುಗರು, ಡಿ ಕಂಪನಿ, ದರ್ಶನ್ ತೂಗದೀಪ ಫ್ಯಾನ್ಸ್ ಕ್ಲಬ್... ಹೀಗೆ ಹತ್ತಾರು ಹೆಸರುಗಳಲ್ಲಿ 100 ಕ್ಕೂ ಹೆಚ್ಚು ಫ್ಯಾನ್ ಪೇಜ್‌ಗಳಿವೆ. ‘ಡಿ ಉತ್ಸ ವ’ ಹೆಸರಿನಲ್ಲಿ ಅಭಿಮಾನಿಗಳು ದರ್ಶನ್ ಅವರ 41 ನೇ ಹುಟ್ಟು ಹಬ್ಬಕ್ಕೆ ಹೊಸ ಮೆರಗು ತಂದಿದ್ದಾರೆ. ಅಭಿಮಾನಿಗಳೇ ರೂಪಿಸಿರುವ ‘ಕರುನಾಡ ಪ್ರಿನ್ಸ್’ ಹೆಸರಿನ ಆಲ್ಬಂ ಬಿಡುಗಡೆ ಆಗುತ್ತಿದೆ. 

ಬೆಂಗಳೂರು (ಫೆ.16): ದರ್ಶನ್ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಅದ್ಧೂರಿಯಾಗಿ ಆಚರಿಸಲಿದ್ದಾರೆ. ಡಿ ಬಾಸ್ ಹೆಸರಿನಲ್ಲಿ 300 ಪ್ಲಸ್ ವಾಟ್ಸಪ್ ಗ್ರೂಪ್ ಸೃಷ್ಟಿಯಾಗಿವೆ. ಫೇಸ್‌ಬುಕ್, ಟ್ವಿಟ್ಟರ್‌ಗಳಲ್ಲಿ ಡಿ ಬಾಸ್, ಡಿ ಫ್ಯಾಮಿಲಿ, ದರ್ಶನ್ ಹುಡುಗರು, ಡಿ ಕಂಪನಿ, ದರ್ಶನ್ ತೂಗದೀಪ ಫ್ಯಾನ್ಸ್ ಕ್ಲಬ್... ಹೀಗೆ ಹತ್ತಾರು ಹೆಸರುಗಳಲ್ಲಿ 100 ಕ್ಕೂ ಹೆಚ್ಚು ಫ್ಯಾನ್ ಪೇಜ್‌ಗಳಿವೆ. ‘ಡಿ ಉತ್ಸ
ವ’ ಹೆಸರಿನಲ್ಲಿ ಅಭಿಮಾನಿಗಳು ದರ್ಶನ್ ಅವರ 41 ನೇ ಹುಟ್ಟು ಹಬ್ಬಕ್ಕೆ ಹೊಸ ಮೆರಗು ತಂದಿದ್ದಾರೆ. ಅಭಿಮಾನಿಗಳೇ ರೂಪಿಸಿರುವ ‘ಕರುನಾಡ ಪ್ರಿನ್ಸ್’ ಹೆಸರಿನ ಆಲ್ಬಂ ಬಿಡುಗಡೆ ಆಗುತ್ತಿದೆ. 

ವೈರಲ್ ಆದ ದುರ್ಯೋಧನ
ದರ್ಶನ್ ಗೆಟಪ್‌ಗಳ ಪೈಕಿ ಅತಿ ಹೆಚ್ಚು ಕ್ರೇಜ್ ಸೃಷ್ಟಿಸಿದ್ದು ‘ಚಕ್ರವರ್ತಿ’ ಲುಕ್. ಆದರೆ, ಅದನ್ನೂ ಮೀರಿಸಿದ್ದು‘ಕುರುಕ್ಷೇತ್ರ’ ಚಿತ್ರದ ಫೋಟೋಗಳು. ದರ್ಶನ್ ಅವರ ಎಲ್ಲಾ ಸೋಷಲ್ ಮೀಡಿಯಾ ಐಡೆಂಟಿಟಿಗೆ ಬಳಕೆಯಾಗಿರುವುದು ಇದೇ ಕೌರವ ಗೆಟಪ್.

9 ಸಿನಿಮಾಗಳ ಪೈಕಿ 4  ಪಕ್ಕಾ
ದರ್ಶನ್ ಅವರ ಮುಂದೆ 9 ಸಿನಿಮಾ ಆಫರ್‌ಗಳಿವೆ. ಅವರು ಒಪ್ಪಿಕೊಂಡಿ ರುವುದು 5 ಮಾತ್ರ. ‘ಯಜಮಾನ’ ನಂತರ ಎಂ ಡಿ ಶ್ರೀಧರ್ ನಿರ್ದೇಶನದ ಸಂದೇಶ್ ನಾಗರಾಜ್ ಸಿನಿಮಾ. ನಂತರ ಉಮಾಪತಿ ನಿರ್ಮಾಣದ ಪ್ರೇಮ್ ನಿರ್ದೇಶನದ ಚಿತ್ರ. ಇದು ಮುಗಿಸಿಕೊಂಡು ನಿರ್ಮಾಪಕ ಸಿದ್ದಾಂತ್ ಜತೆ ಒಂದು ಸಿನಿಮಾ. ಆಮೇಲೆ ಎಂಡಿ ಶ್ರೀಧರ್ ನಿರ್ದೇಶನದ ಮತ್ತೊಂದು ಸಿನಿಮಾ.

ರಾಮಮೂರ್ತಿ ಪ್ರೀತ್ಯರ್ಥ
ರಾಮಮೂರ್ತಿ ನಿರ್ಮಾಣದ ‘ಮೆಜೆಸ್ಟಿಕ್’ ದರ್ಶನ್ ಅವರ ವೃತ್ತಿ ಪಯಣಕ್ಕೆ ಹೊಸ ತಿರುವು ಕೊಟ್ಟ ಸಿನಿಮಾ. ಆ ನೆನಪಿಗೆ ರಾಮಮೂರ್ತಿ ಅವರಿಗೊಂದು ಸಿನಿಮಾ ಮಾಡಿಕೊಡಲು ದರ್ಶನ್ ನಿರ್ಧರಿಸಿದ್ದಾರೆ. ಆ ಚಿತ್ರದಲ್ಲಿ ಅವರು ನಾಯಕರೋ ಅತಿಥಿ ಪಾತ್ರಧಾರಿಯೋ ಅನ್ನುವುದು ಇನ್ನೂ ನಿರ್ಧಾರ ಆಗಿಲ್ಲ. ಆದರೆ ರಾಮಮೂರ್ತಿ ಜೊತೆ ಕೈ ಜೋಡಿಸುವುದು ಮಾತ್ರ ಖಾತ್ರಿ. 

ಬರ್ತ್‌ಡೇ ಪಾಲಿಸಿ ಏನು?
ಅಭಿಮಾನಿಗಳಿಗೆ ಆದ್ಯತೆ. ನಡುರಾತ್ರಿಯೇ ಅಭಿಮಾನಿಗಳು ಕಾದು ತಾವೇ ತಂದ ಕೇಕ್ ಕತ್ತರಿಸಿ, ದರ್ಶನ್ ಜೊತೆ ಫೋಟೋ ಹೊಡೆಸಿಕೊಂಡು ಹಬ್ಬ ಆಚರಿಸಿದ ನಂತರ ಬಂಧುಮಿತ್ರ ಪರಿವಾರದವರಿಗೆ ಅವಕಾಶ. ದೂರದ ಊರುಗಳಿಂದ ಬರುವವರನ್ನು ನಿರಾಸೆಗೊಳಿಸಬಾರದು ಅನ್ನುವುದು ದರ್ಶನ್ ನಿಯಮ. ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ಸಂಭ್ರಮ, ಉತ್ಸವ, ಹಬ್ಬ

ಕನ್ನಡ ಶಾಲೆಗೆ ಕೊಡುಗೆ
ಮಹರಾಷ್ಟ್ರದ ಸೊಲ್ಲಾಪುರದ ಬಳಿ ಇರುವ ಕನ್ನಡ ಶಾಲೆ. ತುಂಬಾ ವರ್ಷಗಳಿಂದ ಅಭಿಮಾನಿಗಳೇ ದರ್ಶನ್ ಅವರ ಹೆಸರಿನಲ್ಲಿ ಆ ಶಾಲೆಗೆ ಬೇಕಾದ ನೆರವು ನೀಡುತ್ತಿದ್ದಾರೆ. ಅಭಿಮಾನಿಗಳು ದರ್ಶನ್ ಅವರ ಬಳಿ
ಬಂದು ವಿಷಯ ತಿಳಿಸಿದಾಗ ಕನ್ನಡ ಶಾಲೆ ಉಳಿಯಬೇಕು ಎನ್ನುವ ಅಭಿಮಾನಿಗಳ ಕನಸಿಗೆ ದರ್ಶನ್ ಬೆನ್ನೆಲುಬಾಗಿ ನಿಂತಿದ್ದಾರೆ. 

ಕುರುಕ್ಷೇತ್ರ ಮರೆಯೋಕ್ಕಾಗಲ್ಲ
50 ನೇ ಚಿತ್ರವನ್ನು ಬೇರೆಯವರಿಗೆ ಪ್ಲಾನ್ ಮಾಡಿಕೊಳ್ಳಲಾಗಿತ್ತು. ಆದರೆ, ನಿರ್ಮಾಪಕ ಮುನಿರತ್ನ ಅವರು ಬಂದು ಕೇಳಿಕೊಂಡಾಗ ‘ಕುರುಕ್ಷೇತ್ರ’ ದಂತಹ ಸಿನಿಮಾ ಬಿಟ್ಟುಕೊಡಲು ಮನಸ್ಸಾಗದೆ ದರ್ಶನ್ ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರು. 90 ದಿನ ಚಿತ್ರೀಕರಣ, ಹತ್ತಾರು ಕಲಾವಿದರು. ಬಹು ಕೋಟಿ ವೆಚ್ಚ. ಪರಭಾಷೆಯಗಳಲ್ಲೂ ಮಾತನಾಡಿಕೊಳ್ಳುವಂತೆ ಮಾಡಿದ ಚಿತ್ರ, ನಿರ್ಮಾಪಕ ಪ್ಯಾಷನ್, ಕಲಾವಿದರ ಶ್ರಮ, ಅದ್ದೂರಿ ಸೆಟ್‌ಗಳು... ಈ ಎಲ್ಲ ಕಾರಣಗಳಿಗಾಗಿ ‘ಕುರುಕ್ಷೇತ್ರ’ ಸಿನಿಮಾ ದರ್ಶನ್ ಅವರ ಪಾಲಿಗೆ ಮರೆಯಲಾಗದ ಅಪರೂಪ ಸಿನಿಮಾ.

ರೂಟು ಬದಲಾಗುತ್ತಾ?
50 ಸಿನಿಮಾ ಪೂರೈಸಿರುವ ದರ್ಶನ್ ಮುಂದೆ ಬೇರೆ ರೀತಿಯ ಸಿನಿಮಾಗಳತ್ತ ಮುಖ ಮಾಡುತ್ತಾರೆಯೇ? ಅವರಿಗೆ ಆಸಕ್ತಿ ಇದೆ. ಅದಕ್ಕೇ ಅವರು ‘ಕುರುಕ್ಷೇತ್ರ’ ಒಪ್ಪಿಕೊಂಡಿದ್ದು, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಸಿನಿಮಾ ಮಾಡಿದ್ದು. ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಆಸಕ್ತಿಯಿಂದ ಮಾಡುವ ನಿರ್ಮಾಪಕರು, ನಿರ್ದೇಶಕರು ಬಂದರೆ ಒಪ್ಪಿಕೊಳ್ಳುತ್ತಾರೆ.
 

ನಂಬರ್ 1 ಓಟದಲ್ಲಿಲ್ಲ ದರ್ಶನ್
ನಟನಾಗಿ ಅರ್ಧ ಶತಕದ ಹೊಸ್ತಿನಲ್ಲಿರುವ ದರ್ಶನ್ ಅವರಿಗೆ ಏನೂ ಇಲ್ಲದೆ ಶೂನ್ಯದಂತಿರುವುದೇ ಇಷ್ಟ. ಅವರ ಜೀವನದ ಬಹು ದೊಡ್ಡ ಉಡುಗೊರೆ ಅಭಿಮಾನಿಗಳು. ಐವತ್ತು ಸಿನಿಮಾ ದಾಟಿದರೂ ತಾನು ನ.೧ ನಟ ಎನ್ನುವ ರೇಸಿನಲ್ಲಿ ದರ್ಶನ್ ಇಲ್ಲ. ಯಾಕೆಂದರೆ ಅಂಥ ರೇಸಿನಲ್ಲಿರುವುದಕ್ಕಿಂತ ಅಭಿಮಾನಿಗಳ ಅಭಿಮಾನದಲ್ಲಿರುವುದು ಮುಖ್ಯ ಎನ್ನುವುದು ಅವರ ನಂಬಿಕೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾವು ಊಟಕ್ಕಾಗೇ ಮದುವೆಗೆ ಹೋಗ್ತೇವೆ, ಕರಣ್ ಜೋಹರ್ ಮದುವೆಗೆ ಹೋದ್ರೂ ಊಟ ಮಾಡಲ್ಲ, ಕಾರಣ ?!
ಸೊಂಟಕ್ಕೆ ಸನ್‌ಗ್ಲಾಸ್‌ ಸಿಕ್ಕಿಸಿಕೊಂಡು ನಟಿಯ ಪೋಸ್‌.. ಟ್ರೋಲಿಗರ ಕಾಮೆಂಟ್ಸ್‌ಗೆ ಕಂಗಾಲಾದ ಸೀರಿಯಲ್‌ ತಾರೆ!