
ಸಾಧಕರ ಸಾಧನೆಯನ್ನು ಬಿಚ್ಚಿಡುವ ಫೇಮಸ್ ರಿಯಾಲಿಟಿ ಶೋ ವೀಕೆಂಡ್ ಕಾರ್ಯಕ್ರಮಕ್ಕೆ ಈ ವಾರದ ಅತಿಥಿಗಳ ಹೆಸರು ಬಹಿರಂಗವಾಗಿದೆ.
ಐ ಪಿಎಸ್ ಅಧಿಕಾರಿ ಶಂಕರ್ ಬಿದರಿ ಹಾಗೂ ಎಸಿಪಿ ಟೈಗರ್ ಅಶೋಕ್ ಸಾಧಕರ ಸೀಟ್ ಮೇಲೆ ಕೂರಲಿದ್ದಾರೆ. ಶನಿವಾರ ರಾತ್ರಿ ಶಂಕರ್ ಬಿದರಿ ಎಪಿಸೋಡ್ ಪ್ರಸಾರವಾದರೆ ಭಾನುವಾರ ಟೈಗರ್ ಅಶೋಕ್ ಕುಮಾರ್ ಎಪಿಸೋಡ್ ಪ್ರಸಾರವಾಗಲಿದೆ.
ಶಂಕರ್ ಬಿದರಿ ಬಾಗಲಕೋಟೆ ಮೂಲದವರು. ಇವರ ಮಗಳು ವಿಜಯಲಕ್ಷ್ಮೀ ಬಿದರಿ ಐಎಎಸ್ ಟಾಪರ್. ಅಳಿಯ ಮಲ್ಲಿಕಾರ್ಜುನ ಪ್ರಸನ್ನ ಮುಂಬೈನಲ್ಲಿ ಡಿಸಿಪಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗ ವಿಜಯೇಂದ್ರ ಬಿದರಿ ತಿರುನೆಲ್ ವೆಲಿ ಯಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪತ್ನಿ ರೋಹಿಣಿ ಸೇಲಂನಲ್ಲಿ ಡಿಸಿಯಾಗಿದ್ದಾರೆ. ಶಂಕರ್ ಬಿದರಿ ಪತ್ನಿ ಉಮಾದೇವಿ ವೃತ್ತಿಯಿಂದ ವೈದ್ಯರು. ಇದು ಶಂಕರ್ ಬಿದರಿ ಫ್ಯಾಮಿಲಿಯ ವಿಶೇಷ.
ಟೈಗರ್ ಅಶೋಕ್ ಕುಮಾರ್ 1977 ರಲ್ಲಿ ಕರ್ನಾಟಕ ಪೊಲೀಸ್ ಸೇವೆಗೆ ಸೇರಿದರು. 18 ಎನ್ ಕೌಂಟರ್ ಮಾಡಿದ ಹೆಗ್ಗಳಿಕೆ ಇವರು. ಇವರು ಹಾಗೂ ಇವರ ತಂಡ ಕಮ್ಮನಹಳ್ಳಿ ಎನ್ ಕೌಂಟರ್ ಕೇಸ್ ಭಾರೀ ಸುದ್ದಿಯಾಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.