ಸದಭಿರುಚಿಯ ಶುಕ್ರವಾರ!: ಒಂದೇ ದಿನ 3 ಕನ್ನಡ ಸಿನಿಮಾ ರಿಲೀಸ್

Published : Dec 22, 2016, 10:17 PM ISTUpdated : Apr 11, 2018, 12:49 PM IST
ಸದಭಿರುಚಿಯ ಶುಕ್ರವಾರ!: ಒಂದೇ ದಿನ 3 ಕನ್ನಡ ಸಿನಿಮಾ ರಿಲೀಸ್

ಸಾರಾಂಶ

ಇಂದು ಸ್ಯಾಂಡಲ್'ವುಡ್ ಸಿನಿಪ್ರಿಯರಿಗೆ ತ್ರಿಬಲ್ ಧಮಾಕಾ. ಒಂದೇ ದಿನ ಮೂರು ದಿನ ವಿಭಿನ್ನ ಚಿತ್ರಗಳು ತೆರೆಗೆ ಬರುತ್ತಿವೆ. ಸುಂದರಾಂಗ ಜಾಣ, ನಿರುತ್ತರ, ಹಾಗೂ ನಾನು ಮತ್ತು ವರಲಕ್ಷ್ಮೀ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿವೆ. ಇನ್ನೂ ಬಾಲಿವುಡ್ ನಲ್ಲೂ ಆಮೀರ್ ಅಭಿನಯದ ದಂಗಲ್ ಸಿನಿಮಾ  ಬಿಡುಗಡೆ ಆಗುತ್ತಿದ್ದೂ ಸಿನಿ ಪ್ರಿಯರಿಗೆ ಮರನಂಜನೆಯ ಪಾಕ ನೀಡಲು ಸಿದ್ಧವಾಗಿದೆ.

ಬೆಂಗಳೂರು(ಡಿ.23): ಇಂದು ಸ್ಯಾಂಡಲ್'ವುಡ್ ಸಿನಿಪ್ರಿಯರಿಗೆ ತ್ರಿಬಲ್ ಧಮಾಕಾ. ಒಂದೇ ದಿನ ಮೂರು ದಿನ ವಿಭಿನ್ನ ಚಿತ್ರಗಳು ತೆರೆಗೆ ಬರುತ್ತಿವೆ. ಸುಂದರಾಂಗ ಜಾಣ, ನಿರುತ್ತರ, ಹಾಗೂ ನಾನು ಮತ್ತು ವರಲಕ್ಷ್ಮೀ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿವೆ. ಇನ್ನೂ ಬಾಲಿವುಡ್ ನಲ್ಲೂ ಆಮೀರ್ ಅಭಿನಯದ ದಂಗಲ್ ಸಿನಿಮಾ  ಬಿಡುಗಡೆ ಆಗುತ್ತಿದ್ದೂ ಸಿನಿ ಪ್ರಿಯರಿಗೆ ಮರನಂಜನೆಯ ಪಾಕ ನೀಡಲು ಸಿದ್ಧವಾಗಿದೆ.

ಶುಕ್ರವಾರ ಸ್ಯಾಂಡಲ್ ವುಡ್'ಗೆ ವಿಶೇಷ ದಿನ. ಕಾರಣ ಮೂರು ಸಿನಿಮಾಗಳು ತೆರೆಗೆ ಬರುತ್ತಿವೆ. ರಮೇಶ್ ಅರವಿಂದ್ ನಿರ್ದೇಶನದ ಸುಂದರಾಂಗ ಜಾಣ, ಕಾಸರವಳ್ಳಿ ಪುತ್ರ ಅಪೂರ್ವ ಕಾಸರವಳ್ಳಿ ನಿರ್ದೇಶನದ ನಿರುತ್ತರ, ಜೆ.ಕೆ.ವೆಂಕಟೇಶ್ ಮೊಮ್ಮಗ ಪೃಥ್ವಿ ಅಭಿನಯದ ನಾನು ಮತ್ತು ವರಲಕ್ಷ್ಮಿ ಚಿತ್ರ ರಿಲೀಸ್ ಆಗುತ್ತಿವೆ.

ತೆಲುಗಿನ ಭಲೇ ಭಲೇ ಮಗಾಡಿಯೋ ಚಿತ್ರವನ್ನ ರಮೇಶ್ ಅರವಿಂದ್ ಸುಂದರಾಂಗ ಜಾಣ ನಾಗಿ  ಕನ್ನಡಕ್ಕೆ ತಂದಿದ್ದಾರೆ .ಈ ಹಿಂದಿನ ರಾಮಾ ಶಾಮಾ ಭಾಮಾ ಕೂಡ ತಮಿಳಿನ ಸತಿ ಸಾವಿತ್ರಿ ಚಿತ್ರದ ರಿಮೇಕ್ ಆಗಿತ್ತು. ತಮ್ಮ ಮೊದಲ ಪ್ರಯತ್ನದಲ್ಲಿಯೇ ರಮೇಶ್ ಕನ್ನಡಿಗರಿಗೆ ಸಖತ್ ಸಿನಿಮಾನೇ ಕೊಟ್ಟಿದ್ದರು. ಸುಂದರಾಂಗ ಜಾಣವೂ ಈಗ ಅದೇ ಭರವಸೆ ಮೂಡಿಸಿದೆ. ಗೋಲ್ಡನ್ ಸ್ಟಾರ್ ಗಣೇಶ್ ಗೆ ಚಾರ್ಮಿಂಗ್ ನಟಿ ಸಾನ್ವಿ ಶ್ರೀವಾಸ್ತವ್ ಜೋಡಿಯಾಗಿದ್ದಾರೆ.

ಇನ್ನೂ  ವಿಕ್ರಮ್ ಹತ್ವಾರ್ ಬರೆದ ಕಥೆಯನ್ನ ನಿರುತ್ತರ ಮೂಲಕ ತಮ್ಮ ಪ್ರಥಮ ನಿರ್ದೇಶನದಲ್ಲಿಯೇ ಗಿರೀಶ್ ಕಾಸರವಳ್ಳಿ ಪುತ್ರ ಅಪೂರ್ವ ಕಾಸರವಳ್ಳಿ ಬೆಳ್ಳಿ ತೆರೆಗೆ ತಂದಿದ್ದಾರೆ. ನಟಿ ಭಾವನಾ ರಾಮಣ್ಣ, ಬಾಲಿವುಡ್ ನಟ ರಾಹುಲ್ ಬೋಸ್,ಹಾಗೆ ಸುಮ್ಮನೆ ಚಿತ್ರದ ನಾಯಕ ಕಿರಣ್ ಶ್ರೀನಿವಾಸ್, ಐಂದ್ರಿತಾ ರೇ ಈ ವಿಶೇಷ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಾಜ್ಯದ ನೂರಕ್ಕೂ ಹೆಚ್ಚು ಥಿಯೇಟರ್​'ನಲ್ಲಿ ನಿರುತ್ತರ ತೆರೆ ಕಾಣುತ್ತಿದೆ.

ಇನ್ನೊಂದೆಡೆ  ಯುವ ನಿರ್ದೇಶಕ ಪ್ರೀತಂ ಗುಬ್ಬಿ ವಿನೂತನ ಕಲ್ಪನೆಯನ್ನ ನಾನು ಮತ್ತು ವರಲಕ್ಷ್ಮಿ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ತರುತ್ತಿದ್ದಾರೆ. ಮೋಟೋಕ್ರಾಸ್ ಎಂಬ ರೋಚಕ ರೈಡಿಂಗ್ ಕಥೆಯ ಸುತ್ತವೇ ಚಿತ್ರ ಇದೆ. ಮಹಾನ್ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಮೊಮ್ಮಗ ಪೃಥ್ವಿ ಈ ಚಿತ್ರದಿಂದಲೇ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ನಾಯಕನಿಗೆ ಮಾಳ್ವಿಕಾ ಮೋಹನನ್ ಜೊತೆಯಾಗಿದ್ದಾರೆ.

ಇನ್ನೂ ಬಾಲಿವುಡ್'ನ ಮತ್ತೊಂದು ವಿಶೇಷವಾದ ಸಿನಿಮಾ ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ರಿಲೀಸ್ ಆಗುತ್ತಿದೆ. ಎಲ್ಲಡೆ ಬಿಡುಗಡೆ ಆಗುತ್ತಿರೋ ದಂಗಲ್ ಚಿತ್ರ ಕ್ರೀಡಾ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಚಿತ್ರವೂ ಹೌದು. ಕುಸ್ತಿ ಪಟು ಮಹಾವೀರ್ ಪೋಗಟ್ ಜೀವನಾಧಾರಿತ ಈ ಚಿತ್ರಕ್ಕೆ ಆಮೀರ್ ಮಾಡಿದ ಕಸರತ್ತು ಅಷ್ಟಿಷ್ಟಲ್ಲ. ಆ ಶ್ರಮ ತೆರೆ ಮೇಲೂ ಕಾಣಿಸುತ್ತದೆ.

ಒಟ್ಟಿನಲ್ಲಿ ಒಂದೇ ದಿನ ಕನ್ನಡದ 3 ಸಿನಿಮಾಗಳು, ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಆಮೀರ್ ಸಿನಿಮಾ ರಿಲೀಸ್ ಆಗುತ್ತಿದ್ದು ಸಿನಿ ಪ್ರಿಯರಿಗೆ ಇಂದು ಮನರಂಜನೆಯ ರಸಪಾಕ ಸಿಗುವುದರಲ್ಲಿ ಅನುಮಾನವಿಲ್ಲ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದಳಪತಿ ವಿಜಯ್ 'ಜನ ನಾಯಗನ್' ಚಿತ್ರದ ಕಥೆ ಇದೇನಾ? ಲೀಕ್ ಆದ ಸ್ಟೋರಿ.. ಶಾಕ್ ಆಯ್ತು ಚಿತ್ರತಂಡ!
ನಾನು ಅವಳಲ್ಲ.. ಕಾಳ್ಗಿಚ್ಚಿನಂತೆ ಹರಡಿದ ಎಐ ಫೋಟೋ: ರಶ್ಮಿಕಾ, ಶ್ರೀಲೀಲಾ ಬಳಿಕ ಸಿಟ್ಟಾದ ನಿವೇತಾ ಥಾಮಸ್