ವಿಜಿ ಜೈಲಲ್ಲಿ, ದರ್ಶನ್ ಆಸ್ಪತ್ರೆಯಲ್ಲಿ; ಚಿತ್ರಗಳ ಕಥೆಯೇನು?

By Kannadaprabha NewsFirst Published Sep 25, 2018, 1:41 PM IST
Highlights

ದರ್ಶನ್ ಅಪಘಾತಕ್ಕೆ ಈಡಾಗಿದ್ದಾರೆ. ಕೈ ಮೂಳೆ ಮುರಿದಿರುವುದರಿಂದ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇತ್ತ ದುನಿಯಾ ವಿಜಯ್ ಜೈಲು ಸೇರಿದ್ದಾರೆ. ದರ್ಶನ್ ಯಜಮಾನ ಮತ್ತು ಒಡೆಯ ಚಿತ್ರಗಳಲ್ಲಿ ನಟಿಸುತ್ತಿದ್ದರು. ವಿಜಯ್ ನಟನೆಯ ಕುಸ್ತಿ ಚಿತ್ರದ ಚಿತ್ರೀಕರಣ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಬೇಕಿತ್ತು. ಸಂದರ್ಭ ಹೀಗಿರುವುದರಿಂದ ಆ ಚಿತ್ರಗಳ ಸ್ಥಿತಿಗತಿ ಕೊಂಚ ಏರುಪೇರಾಗಿದೆ.

ಈ ಮೂರು ಚಿತ್ರಗಳ ಸುತ್ತ ಗಾಂಧಿನಗರ ಭವಿಷ್ಯದ ಲೆಕ್ಕಾಚಾರ ಹಾಕುತ್ತಿವೆ. ಈ ಚಿತ್ರಗಳು ಅಂದುಕೊಂಡ ಸಮಯಕ್ಕೆ ಸೆಟ್ಟೇರುತ್ತವೆಯೇ, ಬಿಡುಗಡೆ ಯಾಗು ತ್ತವೆಯೇ ಅಥವಾ ಬಿಡುಗಡೆ ಮತ್ತು ಚಿತ್ರೀಕರಣ ಎರಡನ್ನೂ ಮುಂದೂ ಡುವ
ಎದುರಾಗುತ್ತದೆಯೇ ಎಂಬುದು ಈ ಲೆಕ್ಕಾಚಾರಗಳಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿವ ಅನುಮಾನಗಳು. ಇಂಥ ಭವಿಷ್ಯದ ತರ್ಕಗಳಿಗೆ ದಾರಿ ಮಾಡಿಕೊಟ್ಟಿರುವುದು ಎರಡು ಘಟನೆಗಳು.

ಘಟನೆ 1
ದುನಿಯಾ ವಿಜಯ್ ಮತ್ತು ಬಾಡಿ ಬಿಲ್ಡರ್ ನಡುವೆ ನಡೆದಿದೆ ಎನ್ನಲಾಗುತ್ತಿರುವ ಹೊಡೆದಾಟ. ಅದರಿಂದಾಗಿ ವಿಜಯ್ ಜೈಲು ಸೇರಿದ್ದಾರೆ. ಅಲ್ಲದೇ, ಅವರ ಹಳೆಯ ಕೇಸುಗಳು ಕೆಲವು ಮತ್ತೆ ಕಾನೂನಿನ ಬಾಗಿಲು ತಟ್ಟಿವೆ. ಸದ್ಯಕ್ಕೆ ವಿಜಯ್ ಅವರಿಗೆ ಜಾಮೀನು ಸಿಕ್ಕಿಲ್ಲ. ಸೆ.26ಕ್ಕೆ ಕೋರ್ಟ್ ವಿಚಾರಣೆ ಕಾಯ್ದರಿಸಿದೆ. ಒಂದು ವೇಳೆ ವಿಜಯ್ ಮೇಲೆ ಕೇಳಿಬರುತ್ತಿರುವ ಆರೋಪಗಳು ನಿಜವಾಗಿ, ಹಲ್ಲೆಗೊಳಗಾದ ವ್ಯಕ್ತಿಯ ಪರಿಸ್ಥಿತಿ ತೀರಾ ಹದೆಗೆಟ್ಟರೆ ನಟ ವಿಜಯ್ ಜೈಲಿಗೆ ಹೋಗುವುದು ಗ್ಯಾರಂಟಿ ಎನ್ನುತ್ತಿದೆ ಕಾನೂನಿನ ಮೂಲಗಳು.
ಘಟನೆ 2
ರಸ್ತೆ ಅಪಘಾತದಿಂದ ನಟ ದರ್ಶನ್ ಅಸ್ಪತ್ರೆ ಸೇರಿದ್ದಾರೆ. ಒಂದು ಕೈ ಮೂಳೆ ಬ್ರೇಕ್ ಆಗಿದೆ. ಚಿಕಿತ್ಸೆ ಪಡೆದುಕೊಂಡು ಎಂದಿನಂತೆ ಆಗಬೇಕು ಎಂದರೆ ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಎರಡು ತಿಂಗಳ ನಂತರವೂ ಕೆಲ ಕಾಲ ತೀರಾ ಒತ್ತಡ, ದೇಹಕ್ಕೆ ಶ್ರಮ ಕೊಡುವ ದೃಶ್ಯಗಳಲ್ಲಿ ದರ್ಶನ್ ನಟಿಸಲುವುದು ಕಷ್ಟವಾಗುವ ಸಾಧ್ಯತೆಗಳಿವೆ.

ಯಜಮಾನ ರಿಲೀಸ್ ಮುಂದಕ್ಕೆ

ಈಗಷ್ಟೆ ಫಸ್ಟ್ ಲುಕ್ ಬಿಡುಗಡೆ ಮಾಡಿಕೊಂಡಿರುವ ‘ಯಜಮಾನ’ ಚಿತ್ರದ ಹಾಡುಗಳ ಚಿತ್ರೀಕರಣಕ್ಕೆ ವಿದೇಶಕ್ಕೆ ತೆರಳಬೇಕಿತ್ತು. ಹಾಡುಗಳ ಜತೆಗೆ ಕೆಲ ಮಾತಿನ ಭಾಗದ ಚಿತ್ರೀಕರಣ ಕೂಡ ಬಾಕಿ ಇತ್ತು. ಅಕ್ಟೋಬರ್‌ನಿಂದ ಯೂರೋಪ್‌ನಲ್ಲಿ ಹಾಡುಗಳ ಚಿತ್ರೀಕರಣ ನಡೆಯಬೇಕಿತ್ತು. ಆದರೆ, ಈಗ ಚಿತ್ರೀಕರಣ ಮಾಡುವ ಪರಿಸ್ಥಿತಿಯಲ್ಲಿಇಲ್ಲ ಚಿತ್ರತಂಡ. ಹೀಗಾಗಿ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ತೆರೆಗೆ ಬರಲಿದೆ ಎಂದುಕೊಂಡಿದ್ದ ಪಿ ಕುಮಾರ್ ನಿರ್ದೇಶನದ ‘ಯಜಮಾನ’ನ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗುವ ಸಾಧ್ಯತೆ ನಿಚ್ಛಳವಾಗಿದೆ. ಈ ಬಗ್ಗೆ ನಿರ್ಮಾಪಕಿ ಶೈಲಜಾ ನಾಗ್, ‘ಯಜಮಾನ ಚಿತ್ರದ ಹಾಡುಗಳ ಶೂಟಿಂಗ್‌ಗೆ ವಿದೇಶಕ್ಕೆ ಹೋಗಬೇಕಿತ್ತು. ಈಗ ದರ್ಶನ್ ಅವರು ಹುಷಾರಾಗಿ ಬರುವ ತನಕ ಶೂಟಿಂಗ್ ಮಾತಿಲ್ಲ. ಬೇರೆ ಬೇರೆ ಕೆಲಸಗಳನ್ನು ಮಾಡಿಕೊಳ್ಳುತ್ತೇವೆ. ಆದಷ್ಟು ಬೇಗ ಸರಿ ಹೋಗುತ್ತಾರೆ. ಇದರಿಂದ ಚಿತ್ರೀಕರಣ ತಡವಾಗಿ ಬಿಡುಗಡೆಯ ದಿನಾಂಕವೂ ಮುಂದಕ್ಕೆ ಹೋಗುತ್ತದೆ ಎನ್ನುವ ಬಗ್ಗೆ ನಾನು ಈಗಲೇ ಏನೂ ಹೇಳಲಾರೆ’ ಎನ್ನುತ್ತಾರೆ.

click me!