ಸದ್ಯದಲ್ಲೇ ತೆರೆಗೆ ಬರಲಿದೆ ’ದಿ ವಿಲನ್’

Published : May 03, 2018, 12:53 PM IST
ಸದ್ಯದಲ್ಲೇ ತೆರೆಗೆ ಬರಲಿದೆ ’ದಿ ವಿಲನ್’

ಸಾರಾಂಶ

ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರ ಬಿಡುಗಡೆಯಾಗಿದ್ದು ಫೆಬ್ರವರಿ ೨೩, ೨೦೧೭ರಂದು. ಆ ಲೆಕ್ಕ ನೋಡಿದರೆ ಸುದೀಪ್ ನಾಯಕನಾಗಿ ನಟಿಸಿದ ಚಿತ್ರ ಬಿಡುಗಡೆಯಾಗದೆ ಒಂದು ವರ್ಷ ಎರಡು ತಿಂಗಳು ಕಳೆದಿದೆ.

ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರ ಬಿಡುಗಡೆಯಾಗಿದ್ದು ಫೆಬ್ರವರಿ 23, 2017 ರಂದು. ಆ ಲೆಕ್ಕ ನೋಡಿದರೆ ಸುದೀಪ್ ನಾಯಕನಾಗಿ ನಟಿಸಿದ ಚಿತ್ರ ಬಿಡುಗಡೆಯಾಗದೆ ಒಂದು ವರ್ಷ ಎರಡು ತಿಂಗಳು ಕಳೆದಿದೆ.

ಮುಂದಿನ ಕೆಲವು ತಿಂಗಳೂ ಸುದೀಪ್ ಚಿತ್ರ ಬಿಡುಗಡೆಯಾಗುವ ಲಕ್ಷಣವಿಲ್ಲ. ಹಾಗಾಗಿ ಸುದೀಪ್ ಅಭಿಮಾನಿಗಳು ಸ್ವಲ್ಪ ಬೇಸರದಲ್ಲಿರಬಹುದು. ಈ ಮಧ್ಯೆ ಭರ್ಜರಿಯಾಗಿ ಶುರು  ಮಾಡಿದ ‘ದಿ ವಿಲನ್’ ತಡವಾಗುತ್ತಲೇ ಇದೆ. ನಿರ್ದೇಶಕ ಪ್ರೇಮ್ ಲೇಟ್ ಆದರೂ ಲೇಟೆಸ್ಟ್ ಆಗಿ ಬರುತ್ತೇವೆ ಅಂತ ಹೇಳುತ್ತಲೇ ಇದ್ದಾರೆ. ಆದರೆ ಆ ಮಾತಿನ ಮೇಲೆ ನಂಬಿಕೆ  ಇಲ್ಲದವರಿಗೆ ನಂಬಿಕೆ ಹುಟ್ಟಿಸುವ ಸಂಗತಿಯೊಂದು ಜರುಗಿ ಹೋಗಿದೆ. ಅದು ‘ದಿ ವಿಲನ್’ ಚಿತ್ರದ ಡಬ್ಬಿಂಗ್.

ಈಗಾಗಲೇ ‘ದಿ ವಿಲನ್’ ಚಿತ್ರದ ಡಬ್ಬಿಂಗ್ ಶುರುವಾಗಿದೆ. ಬೆಂಗಳೂರಿನ ಶಿವಾನಂದ ವೃತ್ತದ ಬಳಿಯಿರುವ ಆಕಾಶ್ ಆಡಿಯೋದಲ್ಲಿ ನಿರ್ದೇಶಕ ಪ್ರೇಮ್ ಡಬ್ಬಿಂಗ್ ಕೆಲಸ ಶುರುವಿಟ್ಟುಕೊಂಡಿದ್ದಾರೆ.
ಸದ್ಯಕ್ಕೀಗ ಡಬ್ಬಿಂಗ್‌ನಲ್ಲಿ ಸುದೀಪ್ ಪಾಲ್ಗೊಂಡಿದ್ದಾರೆ. ಹೆಚ್ಚು ಕಡಿಮೆ ಹತ್ತಿಪ್ಪತ್ತು ದಿವಸಗಳಲ್ಲಿ ಡಬ್ಬಿಂಗ್  ಮುಗಿಸಲು ಚಿತ್ರ ತಂಡ ಪ್ಲ್ಯಾನ್ ಮಾಡಿಕೊಂಡಿದೆ ಎನ್ನುತ್ತಿವೆ ಮೂಲಗಳು. ಈ ಸಂದರ್ಭದಲ್ಲಿ ತೆಗೆದ ಪ್ರೇಮ್ ಜೊತೆಗೆ ಸುದೀಪ್ ತೆಗೆದ ಸೆಲ್ಫೀ ನೋಡಿದ ಅಭಿಮಾನಿ ಬಂಧುಗಳು ಭಾರಿ ಖುಷಿಯಾಗಿದ್ದಾರೆ.

ಇನ್ನೇನು ಅಣ್ಣನ ಸಿನಿಮಾ ಬಂದೇ ಬಿಡ್ತು ಅನ್ನೋ ರೇಂಜಿಗೆ ಸಂತೋಷ ಪಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಪ್ರೇಮ್ ಕೂಡ ಒಂದು ಸಂತೋಷದ ಸಂಗತಿಯನ್ನು ಹರಿಬಿಟ್ಟಿದ್ದಾರೆ. ಅಂದುಕೊಂಡಂತೆ  ನಡೆದರೆ ‘ದಿ ವಿಲನ್’ ಚಿತ್ರ ಆಗಸ್ಟ್ 24 ರಂದು ಬಿಡುಗಡೆಯಾಗಲಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಕನ್ನಡ ನಾಡಿಗೆ ಕೊಡುಗೆ ನೀಡಬೇಕು ಅನ್ನುವುದು ಪ್ರೇಮ್ ಆಸೆ. ಜೂನ್‌ನಲ್ಲಿ ಆಡಿಯೋ ರಿಲೀಸ್ ಮಾಡುವ ಯೋಚನೆ ನಿರ್ದೇಶಕ ಪ್ರೇಮ್‌ಗಿದೆ. ಈ ಚಿತ್ರದಲ್ಲಿ ಆ್ಯಮಿ ಜಾಕ್ಸನ್ ನಾಯಕಿಯಾಗಿ ನಟಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?
Bigg Boss Kannada: ಚಾಮುಂಡಿ ದೇವಿ ಮುಂದೆ ಮಾತು ಕೊಟ್ಟು ತಪ್ಪಿದ ಗಿಲ್ಲಿ ನಟ; ಇಂಥ ಮಹಾಪ್ರಮಾದ ಯಾಕೆ?