
ಬಹುಭಾಷಾ ನಟಿ ಶುಭ್ರ ಅಯ್ಯಪ್ಪ ಎಲ್ಲಿಗೆ ಹೋದ್ರು? ‘ವಜ್ರಕಾಯ’ ಬಂದು ಹೋಗಿದ್ದೇ ಆಯ್ತು, ಶುಭ್ರ ಅಯ್ಯಪ್ಪ ಬಹುತೇಕ ಕಾಣೆಯಾದಂತೇ ಆಗಿದೆ. ಕನ್ನಡ ಮಾತ್ರವಲ್ಲ, ತೆಲುಗು, ತಮಿಳು ಯಾವುದೇ ಸಿನಿಮಾಕ್ಕೂ ಅವರು ಅನಂತರ ಬಣ್ಣ ಹಚ್ಚಿಲ್ಲ. ಹೊಸ ಪಾತ್ರದೊಂದಿಗೆ ತೆರೆ ಮೇಲೂ ಕಾಣಿಸಿಕೊಂಡಿಲ್ಲ. ಹೀಗಿರುವಾಗಲೇ ಈಗವರು, ಹೆವಿ ಜಿಮ್ ವರ್ಕೌಟ್ ಲುಕ್‌ನೊಂದಿಗೆ ಸುದ್ದಿ ಮಾಡಿದ್ದಾರೆ.
ಅವರು 30 ಕೆ.ಜಿ ಸೂಟ್‌ಕೇಸ್ ಎತ್ತುವ ಜಿಮ್ ವರ್ಕೌಟ್‌ನ ವಿಡಿಯೋವೊಂದು ಅವರ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಸೇರಿಕೊಂಡಿದೆ. ಈ ಜಿಮ್ ವರ್ಕೌಟ್ ನ ರಹಸ್ಯವೇನು? ಹೊಸದೊಂದು ಸಿನಿಮಾದ ಸಿದ್ಧತೆಯೇ? ‘ಹಾಗೇನು ಇಲ್ಲ. ವರ್ಕೌಟ್ ಮಾಡೋದು ಮಾಮೂಲು. ಹೊಸ ಸಿನಿಮಾಕ್ಕೆ ಅಂತೇನು ಇಲ್ಲ. ಆರೋಗ್ಯದ ದೃಷ್ಟಿಯಿಂದಲೂ ನಾನು ನಿರಂತರವಾಗಿ ಜಿಮ್‌ಗೆ ಹೋಗುತ್ತಿದ್ದೇನೆ. ಕಳೆದ ದಿನ ಜಿಮ್‌ಗೆ ಹೋಗಿರಲಿಲ್ಲ. ಪ್ರಯಾಣದ ಕಾರಣದಿಂದ ಜಿಮ್‌ಗೆ ಹೋಗುವುದು ಮಿಸ್ ಆಗಿತ್ತು. ಅದನ್ನೇ ಫುಲ್‌ಫಿಲ್ ಮಾಡೋದಕ್ಕೆ ವಾಸ್ತವ್ಯ ಹೂಡಿದ್ದ ಕಡೆಯೇ 30 ಕೆ.ಜಿ. ಸೂಟ್‌ಕೇಸ್ ಎತ್ತುವ ಹಾಗೆ ಒಂದು ಜಿಮ್ ವರ್ಕೌಟ್ ಲುಕ್ ಕೊಟ್ಟೆ ಅಷ್ಟೇ’ ಅಂತಾರೆ ನಟಿ ಶುಭ್ರ ಅಯ್ಯಪ್ಪ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.