ಕೇರಳ ಚಿತ್ರರಂಗದ ಲೈಂಗಿಕ ಕಿರುಕುಳ ಪ್ರಕರಣಗಳ ನಿಗೂಢ ಮುಕ್ತಾಯ

Published : Jun 05, 2025, 07:57 AM IST
Minu muneer

ಸಾರಾಂಶ

ಕಳೆದ ವರ್ಷ ಕೇರಳ ಚಿತ್ರರಂಗದಲ್ಲಿ ಸದ್ದು ಮಾಡಿದ್ದ 35 ಲೈಂಗಿಕ ಕಿರುಕುಳ ಪ್ರಕರಣಗಳನ್ನು ಮುಚ್ಚಲಾಗಿದೆ. ಸಂತ್ರಸ್ತರು ಮತ್ತು ಸಾಕ್ಷಿಗಳು ತನಿಖೆಗೆ ಸಹಕರಿಸದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. 

ಕೊಚ್ಚಿ: ಕಳೆದ ವರ್ಷ ಕೇರಳ ಚಿತ್ರರಂಗದಲ್ಲಿ ಸದ್ದು ಮಾಡಿದ್ದ ಪ್ರಮುಖ ವ್ಯಕ್ತಿಗಳ ವಿರುದ್ಧದ ಲೈಂಗಿಕ ಕಿರುಕುಳದ ಎಲ್ಲಾ 35 ಪ್ರಕರಣಗಳನ್ನು ಶೀಘ್ರ ಮುಚ್ಚಲಾಗಿವುದು ಎಂದು ತನಿಖಾ ತಂಡಗಳ ಮೂಲಗಳು ತಿಳಿಸಿವೆ. ಸಂತ್ರಸ್ತರು ಮತ್ತು ಸಾಕ್ಷಿಗಳು ತನಿಖೆಗೆ ಸಹಕರಿಸಲು ನಿರಾಕರಿಸಿರುವ ಕಾರಣ ಅನಿವಾರ್ಯವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೊತ್ತಾಗಿದೆ.

ಈ ಬಗ್ಗೆ ಸಂತ್ರಸ್ತೆಯರಲ್ಲಿ ಒಬ್ಬರಾದ ನಟಿ ಮೀನು ಮುನೀರ್‌ ಮಾತನಾಡಿ, ‘ನಾನು ಮೊದಲು ಚಿತ್ರರಂಗದ ಕೆಲವರ ವಿರುದ್ಧದ ಲೈಂಗಿಕ ಕಿರುಕುಳದ ಪ್ರಕರಣವನ್ನು ಸಾರ್ವಜನಿಕರ ಎದುರು ತೆರೆದಿಟ್ಟಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ನನ್ನ ವಿರುದ್ಧವೇ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದರು. ಇದರಿಂದ ಅನ್ಯ ಸಂತ್ರಸ್ತರು ಹೆದರಿದರು. ಹೀಗಾಗಿ ಸಂತ್ರಸ್ತರು ಹಾಗೂ ಸಾಕ್ಷಿಗಳು ಪ್ರಕರಣದಲ್ಲಿ ಹೇಳಿಕೆ ನೀಡಲು ಮುಂದೆ ಬರುತ್ತಿಲ್ಲ’ ಎಂದಿದ್ದಾರೆ.

ತಾವು ನಿರ್ದೇಶಕ ಬಾಲಚಂದ್ರನ್‌ ಮೆನನ್‌ ಅವರ ವಿರುದ್ಧದ ಸತ್ಯವನ್ನು ಬಹಿರಂಗಪಡಿಸಿದ ಬಳಿಕವೇ ಇದೆಲ್ಲಾ ಶುರುವಾಯಿತು ಎಂದಿರುವ ಮುನೀರ್‌, ‘ಮೊದಲು ನಟರಾದ ಎಂ. ಮುಖೇಶ್‌, ಇಡವೇಲಾ ಬಾಬು ಅವರ ಬಗ್ಗೆ ಮಾತನಾಡಿದಾಗ ಏನೂ ಸಮಸ್ಯೆಯಾಗಿರಲಿಲ್ಲ. ಆದರೆ ಪ್ರಮುಖ ನಟರು ಮತ್ತು ಮೆನನ್‌ ಬಗ್ಗೆ ಮಾತನಾಡುತ್ತಿದ್ದಂತೆ ಕೊಲೆ ಬೆದರಿಕೆಗಳು ಶುರುವಾದವು. ಅವು ನನ್ನ ವಿರುದ್ಧ ಸುಳ್ಳು ಪೋಕ್ಸೋ ಮತ್ತು ಮಾನಹಾನಿ ಕೇಸ್‌ ಕೂಡ ದಾಖಲಿಸಿದರು. ನನಗೆ ಮಧ್ಯಂತರ ಜಾಮೀನನ್ನೂ ನಿರಾಕರಿಸಲಾಗಿದೆ. ಇದು ರಾಜಕೀಯ ಷಡ್ಯಂತ್ರದ ಭಾಗ’ ಎಂದು ಆರೋಪಿಸಿದರು.

‘ನಾನು ಮಾಡಿದ ತಪ್ಪಾದರೂ ಏನು? ನಾನು ಸತ್ಯವನ್ನು ಬಹಿರಂಗಪಡಿಸಿದೆನಷ್ಟೇ. ಆದರೆ ಅದಾದ ಬಳಿಕನನಗಾದ ಅನುಭವವನ್ನು ನೋಡಿ ಸಂತ್ರಸ್ತರು ತಮಗಾದ ಅನ್ಯಾಯದ ಬಗ್ಗೆ ಮಾತನಾಡಲು ಹೇಗೆ ಮುಂದೆ ಬರುತ್ತಾರೆ?’ ಎಂದು ಮೀನು ಪ್ರಶ್ನಿಸಿದರು.

ತಲ್ಲಣ ಸೃಷ್ಟಿಸಿದ್ದ ಹಗರಣ:

ಮಲಯಾಳಂ ಸಿನಿ ರಂಗದಲ್ಲಿನ ಸ್ತ್ರೀದ್ವೇಷ ಮತ್ತು ಕಿರುಕುಳವನ್ನು ತನಿಖೆ ಮಾಡಲು ಕೇರಳ ಸರ್ಕಾರ 2017ರಲ್ಲಿ ನ್ಯಾ। ಕೆ ಹೇಮಾ ನೇತೃತ್ವದಲ್ಲಿ ಸಮಿತಿಯೊಂದನ್ನು ಸ್ಥಾಪಿಸಿತ್ತು. ಅದು 2019ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. 2024ರ ಆ.19ರಂದು ಈ ವರದ ಬಹಿರಂಗವಾಗಿತ್ತು. ವರದಿಯಲ್ಲಿ ಚಿತ್ರರಂಗದ ಗಣ್ಯರು ಲೈಂಗಿಕ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ, ಪ್ರಕರಣಗಳ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.

ಆದರ ಸಿನಿರಂಗದ ಪ್ರಮುಖರ ವಿರುದ್ಧ ದೂರು ದಾಖಲಿಸಿದ್ದ ಸಂತ್ರಸ್ತರು ಮತ್ತು ಸಾಕ್ಷಿಗಳ ವಿರುದ್ಧವೇ ಸುಳ್ಳು ಕೇಸುಗಳು ದಾಖಲಾದ ಹಿನ್ನೆಲೆಯಲ್ಲಿ, ಇದೀಗ ಯಾರೂ ಹೇಳಿಕೆ ನೀಡಿ ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ ಎಲ್ಲಾ ಪ್ರಕರಣಗಳನ್ನು ಮುಚ್ಚಲಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?