Vishnu Priya Controversy: ಅರೆಬೆತ್ತಲೆ ಜಾಹೀರಾತು? ನಿರೂಪಕಿ ವಿಷ್ಣು ಪ್ರಿಯಾ ವಿರುದ್ಧ ಸೈಬರ್ ಕ್ರೈಂಗೆ ದೂರು

Published : Apr 13, 2026, 05:36 PM IST
Vishnu Priya

ಸಾರಾಂಶ

ವಿಷ್ಣು ಪ್ರಿಯಾ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅರೆಬೆತ್ತಲೆ ಹಾಗೂ ಅಶ್ಲೀಲತೆಯನ್ನು ಪ್ರಚೋದಿಸುವಂತಹ ಕಂಟೆಂಟ್‌ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ.

ತೆಲುಗು ಚಿತ್ರರಂಗದ ನಿರೂಪಕಿ ವಿಷ್ಣು ಪ್ರಿಯಾ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅರೆಬೆತ್ತಲೆ ಹಾಗೂ ಅಶ್ಲೀಲತೆಯನ್ನು ಪ್ರಚೋದಿಸುವಂತಹ ಕಂಟೆಂಟ್‌ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ಜನಪ್ರಿಯ ತೆಲುಗು ನಿರೂಪಕಿ ವಿಷ್ಣು ಪ್ರಿಯಾ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅರೆಬೆತ್ತಲೆ ಹಾಗೂ ಅಶ್ಲೀಲತೆಯನ್ನು ಪ್ರಚೋದಿಸುವಂತಹ ಕಂಟೆಂಟ್‌ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ.

ವಿಷ್ಣು ಪ್ರಿಯಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಆಗಾಗ ಗ್ಲಾಮರಸ್ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಆದರೆ, ಇತ್ತೀಚೆಗೆ ಅವರು ಪೋಸ್ಟ್ ಮಾಡುತ್ತಿರುವ ಕೆಲವು ಫೋಟೋಗಳು ಎಲ್ಲೆ ಮೀರುತ್ತಿವೆ, ಸಾಮಾಜಿಕ ಸಭ್ಯತೆಗೆ ವಿರುದ್ಧವಾಗಿವೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ. ಅದರಲ್ಲೂ ಜಾಹೀರಾತುಗಳಿಗಾಗಿ ಅವರು ಬಳಸುವ ಫೋಟೋ, ವಿಡಿಯೋಗಳು ಯುವ ಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ. ವಿಷ್ಣು ಪ್ರಿಯಾ ತಮ್ಮ ಜನಪ್ರಿಯತೆ ಬಳಸಿಕೊಂಡು 'ಅರೆಬೆತ್ತಲೆ' ಶೈಲಿಯ ಜಾಹೀರಾತುಗಳನ್ನು ಮಾಡುವ ಮೂಲಕ ಸೋಷಿಯಲ್ ಮೀಡಿಯಾ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇದು ಸಾರ್ವಜನಿಕ ಸಭ್ಯತೆಗೆ ಧಕ್ಕೆ ತರುತ್ತಿದೆ ಎಂದು ದೂರುದಾರರು ವಾದಿಸಿದ್ದಾರೆ. ಡಿಜಿಟಲ್ ವೇದಿಕೆಗಳಲ್ಲಿ ಇಂತಹ ಕಂಟೆಂಟ್‌ಗಳು ಎಲ್ಲರನ್ನೂ ಸುಲಭವಾಗಿ ತಲುಪುವುದರಿಂದ, ಇದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಸುದ್ದಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಪರ-ವಿರೋಧ ಚರ್ಚೆ

ಈಗಾಗಲೇ ಹಲವು ನಟಿಯರು ತಮ್ಮ ಗ್ಲಾಮರಸ್ ಫೋಟೋಗಳಿಂದ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ವಿಷ್ಣು ಪ್ರಿಯಾ ವಿರುದ್ಧದ ದೂರು ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಕೆಲವರು ಇದು ವೈಯಕ್ತಿಕ ಸ್ವಾತಂತ್ರ್ಯ ಎಂದರೆ, ಮತ್ತೆ ಕೆಲವರು ಸಾರ್ವಜನಿಕವಾಗಿ ಘನತೆ ಕಾಪಾಡಬೇಕು ಎನ್ನುತ್ತಾರೆ. ಪೊಲೀಸರು ದೂರು ಸ್ವೀಕರಿಸಿದ್ದು, ಸಂಬಂಧಪಟ್ಟ ಫೋಟೋ, ವಿಡಿಯೋಗಳು ಕಾನೂನುಬದ್ಧವೇ ಎಂದು ಪರಿಶೀಲಿಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. ಈ ಘಟನೆ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ನಟಿಯರು ಪೋಸ್ಟ್ ಮಾಡುವ ಕಂಟೆಂಟ್ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ತೆರೆಯ ಮೇಲಿನ ಆ ಸ್ಟಾರ್‌ ನಟರಿಗೆ ತೆರೆಯ ಹಿಂದೆ ಧ್ವನಿ ನೀಡಿದ್ದು ಇವರು? ಈ ಸೀಕ್ರೆಟ್ ಬಹುತೇಕರಿಗೆ ಗೊತ್ತಿಲ್ಲ!
‘ನೀ ಇರಲು ಜೊತೆಯಲ್ಲಿ’ ನಾಯಕಿಯಾಗಿ ಎಂಟ್ರಿ ಕೊಡ್ತಿದ್ದಾರೆ ‘ಪುಟ್ಟಕ್ಕನ ಮಕ್ಕಳು’ ನಟಿ