
ಮುಂಬೈ[ಅ.04] ನಟ ನಾನಾ ಪಾಟೇಕರ್ ಮತ್ತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮೇಲೆ ಆರೋಪ ಮಾಡಿದ ನಂತರ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ತನುಶ್ರೀ ಹೇಳಿದ್ದಾರೆ. ಕಳದೆ ರಾತ್ರಿ ಇಬ್ಬರು ಆಗುಂತಕರು ನನ್ನ ಮನೆಗೆ ನುಗ್ಗುವ ಯತ್ನ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇವರು ಎಂಎನ್ ಎಸ್ ಪಾರ್ಟಿಗೆ ಸೇರಿದ ಕಾರ್ಯಕರ್ತರೇ ಆಗಿದ್ದಾರೆ. ನನ್ನನ್ನು ಭಯಪಡಿಸಲು ಮುಂದಾಗುತ್ತಿದ್ದಾರೆ. ಮನೆಗೆ ನುಗ್ಗಲು ಯತ್ನಿಸಿದವರನ್ನು ಸೆಕ್ಯೂರಿಟಿಯವರು ತಡೆದ ಪರಿಣಾಮ ಅವಘಡಕ್ಕೆ ಅವಕಾಶ ಆಗಿಲ್ಲ ಎಂದು ನಟಿ ಹೇಳಿದ್ದಾರೆ.
ಸಿನಿಮಾ ಶೂಟಿಂಗ್ ವೇಳೆ 10 ವರ್ಷದ ಹಿಂದೆ ನಡೆದ ಪ್ರಕರಣ ಮತ್ತೆ ಸದ್ದು ಮಾಡಲು ಶುರುಮಾಡಿ ಕೆಲ ದಿನಗಳೆ ಕಳೆದಿವೆ. ತನುಶ್ರೀ ದತ್ತಾ ಶೂಟಿಂಗ್ ನಿಂದ ಹೊರಬಂದಾಗ ಅವರ ಕಾರ್ ಮೇಲೆ ಕಿಡಿಗೇಡಿಗಳು ಮುಗಿಬಿದ್ದಿದ್ದರು.ಮನಸೋ ಇಚ್ಛೆ ದಾಳಿ ಮಾಡಿದ್ದ ವಿಡಿಯೋ ಸಹ ವೈರಲ್ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.