
ಚೆನ್ನೈ(ಫೆ.10): ತಮಿಳುನಾಡಿನ ಸೂಪರ್'ಸ್ಟಾರ್ ರಜಿನಿಕಾಂತ್ ರಾಜಕೀಯ ಸೇರುತ್ತಿರುವುದು ಅಧಿಕೃತವಾಗಿದೆ. ಮೊದಲೆಲ್ಲ ರಾಜಕೀಯ ಸೇರುವ ಬಗ್ಗೆ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ ಇದು ಕೇವಲ ವದಂತಿಯಂದು ನಾನು ಯಾವುದೇ ರಾಜಕೀಯ ಸೇರುವುದಿಲ್ಲ ಎಂದೇ ಹೇಳುತ್ತಿದ್ದರು. ಆದರೆ ಈಗ ರಾಜಕೀಯಕ್ಕೆ ಎಂಟ್ರಿ ಕೊಡುವುದನ್ನು ಖಚಿತ ಪಡಿಸಿದ್ದಾರೆ.
ಸೂಪರ್ ಸ್ಟಾರ್ ಯಾವುದೇ ರಾಜಕೀಯ ಪಕ್ಷವಾಗಲಿ ಅಥವಾ ತಮಿಳುನಾಡಿನ ಪ್ರಾದೇಶಿಕ ಪಕ್ಷವನ್ನಾಗಲಿ ಸೇರುತ್ತಿಲ್ಲ. ಬದಲಿಗೆ ತಾನೆ ಸ್ವಂತ ಪಕ್ಷ ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ರಾಜಕೀಯ ಸೇರುವ ಬಗ್ಗೆ ಆರ್'ಎಸ್'ಎಸ್ ಚಿಂತಕ ಗುರುಮೂರ್ತಿ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದಾರೆ. ಕರ್ನಾಟಕ ಮೂಲಕ ನಟ 66 ವರ್ಷದ ಶಿವಾಜಿರಾವ್ ಗಾಯಕ್'ವಾಡ್ 70ರ ದಶಕದಲ್ಲಿ ಬೆಂಗಳೂರಿನಲ್ಲಿ ಕಂಡಕ್ಟ'ರ್ ಆಗಿ ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಮದ್ರಾಸ್' ತೆರಳಿ ತಮಿಳುನಾಡು ಚಿತ್ರರಂಗದ ಆರಾಧ್ಯ ದೈವರಾಗಿದ್ದರು.
ರಜಿನಿ ರಾಜಕೀಯ ಸೇರುವುದಕ್ಕೆ ಬಾಲಿವುಡ್ ಸೂಪರ್'ಸ್ಟಾರ್ ಅಮಿತಾಭ್ ಬಚ್ಚನ್ ವಿರೋಧ ವ್ಯಕ್ತಪಡಿಸಿದ್ದಾರೆ. ತಾವು 80ರ ದಶಕದಲ್ಲಿ ರಾಜಕೀಯ ಸೇರಿ ವಿಫಲರಾಗಿದ್ದನ್ನು ಈ ಸಂದರ್ಭದಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.