'ಗ್ಲಾಮರ್ ನಟಿ ಅಂದುಕೊಂಡಿದ್ದೆ, ಆದ್ರೆ..': ಆಶಿಕಾ ಬಗ್ಗೆ ತಮಿಳು ನಟ ಕಾರ್ತಿ ಹೀಗಾ ಹೇಳೋದು?

Published : Sep 06, 2026, 08:45 AM IST
Karthi Ashika Ranganath

ಸಾರಾಂಶ

ಆಶಿಕಾ ರಂಗನಾಥ್ ಕೇವಲ ಗ್ಲಾಮರ್ ನಟಿಯಲ್ಲ ಎಂದಿರುವ ತಮಿಳು ನಟ ಕಾರ್ತಿ, ಅವರ ನಟನೆ ಮತ್ತು ಡ್ಯಾನ್ಸ್ ಸಾಮರ್ಥ್ಯವನ್ನು ಹೊಗಳಿದ್ದಾರೆ. ‘ಸರ್ದಾರ್ 2’ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ಆಶಿಕಾ ಪಾತ್ರ ಹೇಗಿದೆ?

ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಎಂದರೆ ಥಟ್ಟನೆ ನೆನಪಾಗುವುದು ಅವರ ಗ್ಲಾಮರಸ್ ಸ್ಕ್ರೀನ್ ಪ್ರೆಸೆನ್ಸ್. ಆದರೆ ತಮಿಳು ನಟ ಕಾರ್ತಿ ಮಾತ್ರ ಆಶಿಕಾ ಅವರ ಮತ್ತೊಂದು ಮುಖವನ್ನು ಪ್ರೇಕ್ಷಕರಿಗೆ ಪರಿಚಯಿಸುವ ಪ್ರಯತ್ನವನ್ನು ‘ಸರ್ದಾರ್ 2’ ಮಾಡಿದೆ ಎನ್ನುತ್ತಾರೆ. ಇತ್ತೀಚೆಗೆ ನಡೆದ ಚಿತ್ರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಾರ್ತಿ, ಆಶಿಕಾ ಅವರ ನಟನೆ ಹಾಗೂ ಡ್ಯಾನ್ಸ್ ಸಾಮರ್ಥ್ಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

‘ಸರ್ದಾರ್ 2’ ಚಿತ್ರದಲ್ಲಿ ನಿರ್ದೇಶಕ ಪಿಎಸ್ ಮಿತ್ರನ್ ಅವರು ಆಶಿಕಾ ಅವರನ್ನು ಈವರೆಗೆ ಪ್ರೇಕ್ಷಕರು ನೋಡಿರುವ ರೀತಿಗಿಂತ ಸಂಪೂರ್ಣ ವಿಭಿನ್ನವಾಗಿ ತೋರಿಸಲು ಪ್ರಯತ್ನಿಸಿದ್ದಾರೆ ಎಂದು ಕಾರ್ತಿ ಹೇಳಿದ್ದಾರೆ. ವಿಶೇಷವೆಂದರೆ, ಚಿತ್ರದಲ್ಲಿ ಆಶಿಕಾ ಅವರ ಪಾತ್ರ ಬಹುತೇಕ ಸಂಭಾಷಣೆ ಇಲ್ಲದ ರೀತಿಯದ್ದಾಗಿದ್ದು, ಇಡೀ ಸಿನಿಮಾದಲ್ಲಿ ಒಂದೇ ರೀತಿಯ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಈ ರೀತಿಯ ಪಾತ್ರ ನಿರ್ವಹಣೆಯನ್ನು ಕಾರ್ತಿ, ‘ಆಯಿರತ್ತಿಲ್ ಒರುವನ್’ ಚಿತ್ರದಲ್ಲಿನ ಆಂಡ್ರಿಯಾ ಜೆರೆಮಿಯಾ ಅವರ ಪಾತ್ರಕ್ಕೆ ಹೋಲಿಸಿದ್ದಾರೆ. ಆ ಚಿತ್ರದಲ್ಲೂ ಆಂಡ್ರಿಯಾ ಬಹುತೇಕ ಸಿನಿಮಾ ಪೂರ್ತಿ ಒಂದೇ ರೀತಿಯ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಆಶಿಕಾ ಅವರನ್ನು ಮೊದಲಿಗೆ ಕಾರ್ತಿ ಇನ್‌ಸ್ಟಾಗ್ರಾಂ ಮೂಲಕವೇ ಗಮನಿಸಿದ್ದರಂತೆ. ಅಲ್ಲಿನ ಅವರ ಗ್ಲಾಮರಸ್ ಫೋಟೋಗಳು ಮತ್ತು ಲುಕ್ ನೋಡಿ, ಆಶಿಕಾ ಅವರನ್ನು ಕೇವಲ ಗ್ಲಾಮರ್ ನಟಿ ಎಂದೇ ಭಾವಿಸಿದ್ದಾಗಿ ಕಾರ್ತಿ ಹೇಳಿದ್ದಾರೆ. ಆದರೆ ಬಳಿಕ ಅವರ ತೆಲುಗು ಸಿನಿಮಾವೊಂದನ್ನು ನೋಡಿದಾಗ ಆಶಿಕಾ ಅವರಲ್ಲಿರುವ ನಟನಾ ಸಾಮರ್ಥ್ಯ ಅರಿವಾಯಿತು ಎಂದಿದ್ದಾರೆ.

ತುಂಬಾ ಗ್ಲಾಮರಸ್

'ಆಶಿಕಾ ತುಂಬಾ ಒಳ್ಳೆಯ ಡ್ಯಾನ್ಸರ್. ಅವರ ಇನ್‌ಸ್ಟಾಗ್ರಾಂ ಪ್ರೊಫೈಲ್ ನೋಡಿದರೆ ತುಂಬಾ ಗ್ಲಾಮರಸ್ ಆಗಿ ಕಾಣಿಸುತ್ತಾರೆ. ಆದರೆ ಅವರ ತೆಲುಗು ಸಿನಿಮಾವೊಂದನ್ನು ನೋಡಿದ ನಂತರ, ಅವರು ಕೇವಲ ಗ್ಲಾಮರ್‌ಗೆ ಸೀಮಿತವಾಗಿಲ್ಲ, ಒಳ್ಳೆಯ ನಟಿಯೂ ಹೌದು ಎಂಬುದು ನನಗೆ ಅರ್ಥವಾಯಿತು' ಎಂದು ಕಾರ್ತಿ ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಆಶಿಕಾ ಅವರನ್ನು ಕೇವಲ ಕಮರ್ಷಿಯಲ್ ಪಾತ್ರಗಳಿಗೆ ಸೀಮಿತಗೊಳಿಸದೆ, ನಟನಾ ಸಾಮರ್ಥ್ಯವನ್ನು ಹೊರತರುವಂತಹ ಪಾತ್ರವನ್ನು ನೀಡಿರುವ ನಿರ್ದೇಶಕ ಪಿಎಸ್ ಮಿತ್ರನ್ ಅವರ ಪ್ರಯತ್ನಕ್ಕೂ ಕಾರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2022ರಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿದ್ದ ಕಾರ್ತಿ ಅಭಿನಯದ ‘ಸರ್ದಾರ್’ ಚಿತ್ರದ ಮುಂದುವರಿದ ಭಾಗವೇ ‘ಸರ್ದಾರ್ 2’. ಪಿಎಸ್ ಮಿತ್ರನ್ ನಿರ್ದೇಶನದ ಈ ಚಿತ್ರದಲ್ಲಿ ಕಾರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆಶಿಕಾ ರಂಗನಾಥ್ ಕೂಡ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.

ದೊಡ್ಡ ಅವಕಾಶ

ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಆಶಿಕಾ ಅವರಿಗೆ ‘ಸರ್ದಾರ್ 2’ ತಮಿಳು ಚಿತ್ರರಂಗದಲ್ಲಿ ಮೊದಲ ದೊಡ್ಡ ಅವಕಾಶ. ಅದರಲ್ಲೂ ಇದುವರೆಗೆ ಕಾಣಿಸಿಕೊಂಡಿದ್ದ ಗ್ಲಾಮರಸ್ ಇಮೇಜ್‌ಗೆ ಸಂಪೂರ್ಣ ವಿರುದ್ಧವಾದ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಕಾರ್ತಿ ಅವರ ಮಾತುಗಳನ್ನು ಗಮನಿಸಿದರೆ, ‘ಸರ್ದಾರ್ 2’ ಕೇವಲ ಆಶಿಕಾ ಅವರ ತಮಿಳು ಚಿತ್ರರಂಗದ ಎಂಟ್ರಿ ಮಾತ್ರವಲ್ಲ, ‘ಗ್ಲಾಮರ್ ನಟಿ’ ಎಂಬ ಇಮೇಜ್‌ನಾಚೆಗಿನ ಅವರ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸುವ ಪ್ರಮುಖ ಸಿನಿಮಾ ಆಗುವ ಸಾಧ್ಯತೆಯೂ ಇದೆ. ‘ಸರ್ದಾರ್ 2’ ಸೆಪ್ಟೆಂಬರ್ 10ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜರ ಕಥೆಗೆ ಭರ್ಜರಿ ಡಿಮ್ಯಾಂಡ್.. ದೇವರಾಯನಾಗಿ ಕಿಚ್ಚ ಸುದೀಪ್, ಶಿವಾಜಿಯಾಗಿ ರಿಷಬ್ ಶೆಟ್ಟಿ!
bigg boss ಗ್ರ್ಯಾಂಡ್ ಲಾಂಚ್; ಮುಖ್ಯ ಅತಿಥಿಯಾಗಿ ಬರಲಿದ್ದಾರೆ ಈ ಸ್ಟಾರ್ ನಟ