ಇಂಥವ್ರನ್ನ ನೋಡಿದ್ರೆ ನಗಬೇಕೋ ಅಳಬೇಕೋ ಗೊತ್ತಾಗಲ್ಲ; ನಟ ರಜನಿಕಾಂತ್ ಟಾಕ್ ವೈರಲ್!

Published : Aug 10, 2025, 04:16 PM IST
Rajinikanth

ಸಾರಾಂಶ

2011ರಲ್ಲಿ ನಟ ರಜನಿಕಾಂತ್ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡಿತ್ತು. ಆಗ ನಟ ರಜನಿಕಾಂತ್ ಅವರು ಹಿಮಾಲಯಕ್ಕೆ ಹೋಗಿ ಅಲ್ಲಿ ಹಲವರನ್ನು ಭೇಟಿ ಮಾಡಿದ್ದರು, ಅಲ್ಲಿನ ಒಬ್ಬರು ಬಾಬಾರಿಂದ ದೀಕ್ಷೆಯನ್ನೂ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಅಷ್ಟೇ ಅಲ್ಲ..

ನಟ ರಜನಿಕಾಂತ್ (Rajinikanth) ಅವರು ಭಾರದತ ಸೂಪರ್ ಸ್ಟಾರ್ ಮಾತ್ರವಲ್ಲ, ಜಗತ್ತಿನ ಐಕಾನಿಕ್ ವ್ಯಕ್ತಿಗಳಲ್ಲಿ ಒಬ್ಬರು. ನಟ ರಜನಿಕಾಂತ್ ಅವರು ದೇವರು ಹಾಗೂ ಸನಾತನ ಧರ್ಮದ ಮೇಲೆ ಅಪಾರ ನಂಬಿಕೆಯುಳ್ಳ ವ್ಯಕ್ತಿ. ಅವರು ಶ್ರೀ ರಾಘವೇಂದ್ರ ಸ್ವಾಮಿಗಳ ಅಪಾರ ಭಕ್ತರು. ತಮಿಳುನಾಡಿನಲ್ಲಿರುವ ಮಣಿಕರ್ಣಿಕಾ ಗುಡ್ಡದ ಮೇಲೆ ಇರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಾಗ ಭೇಟಿ ನೋಡಿ ಶ್ರೀ ರಾಯರ ದರ್ಶನ ಪಡೆಯುತ್ತಾ ಇರುತ್ತಾರೆ. ಅಷ್ಟೇ ಅಲ್ಲ, ನಟ ರಜನಿಕಾಂತ್ ಅವರು ಹಿಮಾಲಯಕ್ಕೆ ಕೂಡ ಆಗಾಗ ಭೇಟಿ ನೀಡುತ್ತಾ ಇರುತ್ತಾರೆ.

2011ರಲ್ಲಿ ನಟ ರಜನಿಕಾಂತ್ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡಿತ್ತು. ಆಗ ನಟ ರಜನಿಕಾಂತ್ ಅವರು ಹಿಮಾಲಯಕ್ಕೆ ಹೋಗಿ ಅಲ್ಲಿ ಹಲವರನ್ನು ಭೇಟಿ ಮಾಡಿದ್ದರು, ಅಲ್ಲಿನ ಒಬ್ಬರು ಬಾಬಾರಿಂದ ದೀಕ್ಷೆಯನ್ನೂ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಅಷ್ಟೇ ಅಲ್ಲ, ಇವರು 'ಶ್ರೀ ರಾಘವೇಂದ್ರ ಸ್ವಾಮಿ' ಹಾಗೂ 'ಬಾಬಾ' ಎಂಬ ಎರಡು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

'ನಮ್ಮ ಈ ಜಗತ್ತು ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಅದೆಷ್ಟೇ ಮುಂದುವರೆದಿದ್ದರೂ ಕೂಡ, ಒಂದು ಹನಿ ರಕ್ತವನ್ನು ಸೃಷ್ಟಿಸಲು ಮನುಷ್ಯನಿಂದ ಸಾಧ್ಯವಿಲ್ಲ. ಈ ಸತ್ಯ ಮನುಷ್ಯನಿಗೆ ಗೊತ್ತಿದ್ರೂ ಕೂಡ, ಕೆಲವರು ದೇವ್ರನ್ನು ನಂಬಲ್ಲ, ದೇವರೇ ಇಲ್ಲ ಅಂತಾರೆ.. ಇಂಥವ್ರನ್ನ ನೋಡಿದ್ರೆ ನಂಗೆ ಅಳಬೇಕೋ ನಗಬೇಕೋ ಗೊತ್ತಾಗಲ್ಲ'ಎಂದಿದ್ದಾರೆ ನಟ ರಜನಿಕಾಂತ್.

ಇನ್ನೊಂದು ಕಡೆ ನಟ ರಜನಿಕಾಂತ್ ಅವರು 'ಕೆಲವರಿಗೆ ದೇವರು ಇಷ್ಟವಾಗಲ್ಲ.. ಆದ್ರೆ ದೇವರಿಗೆ ಅಚ್ರು ಅಂದ್ರೆ ತುಂಬಾ ಇಷ್ಟ ಆಗಿದೆ' ಎಂದಿದ್ದಾರೆ. ಮತ್ತೊಂದು ಕಡೆ ನಟ ರಜನಿ ಅವರು 'ದೇವರು ಎಷ್ಟು ಶಕ್ತಿಶಾಲಿ ಎಂಬುದು ನಾವು ಅವನ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದೇವೆ ಎಂಬುದರ ಮೇಲೆ ಅವಲಂಬಿತವಾಗಿದೆ' ಎಂದಿದ್ದಾರೆ.

ನಟ ರಜನಿಕಾಂತ್ ಅವರ ಕೂಲಿ (Coolie) ಸಿನಿಮಾ ಇದೇ ವಾರ, ಅಂದರೆ 14 ಆಗಸ್ಟ್‌ 2025ರಂದು ಇಡೀ ಜಗತ್ತಿನ ತುಂಬಾ ತೆರೆಯ ಮೇಲೆ ವಿಜೃಂಭಿಸಲು ಸಿದ್ಧವಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ನಟರಾದ ನಾಗಾರ್ಜುನ, ಉಪೇಂದ್ರ, ಆಮೀರ್‌ ಖಾನ್, ನಟಿ ಶ್ರತಿ ಹಾಸನ್ ಹಾಗು ರಚಿತಾ ರಾಮ್ ಕೂಡ ನಟಿಸಿದ್ದಾರೆ. ಕನ್ನಡದಿಂದಲೇ ಇಬ್ಬರು (ಉಪೇಂದ್ರ, ರಚಿತಾ ರಾಮ್) ಕೂಲಿ ಚಿತ್ರದಲ್ಒಇ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಈಗಾಗಲೇ ಮನೆಮಾಡಿದೆ. ಇನ್ನೇನು ಈ ಸಿನಿಮಾ ನೋಡಿ ಎಂಜಾಯ್ ಮಾಡಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?