ಧನ್ಯವಾದ ಹೇಳಿದ ಸುದೀಪ್

Published : Dec 22, 2017, 10:28 PM ISTUpdated : Apr 11, 2018, 01:00 PM IST
ಧನ್ಯವಾದ ಹೇಳಿದ ಸುದೀಪ್

ಸಾರಾಂಶ

ಕಿಚ್ಚ ಸುದೀಪ್ ಸಲ್ಲಿಸಿದ್ದ ಮನವಿಯನ್ನ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಈ ಒಂದು ಸಂತಸದ ವಿಷವಯನ್ನ ತಿಳಿದಿರೋ ಸುದೀಪ್, ಅದನ್ನ ತಮ್ಮ ಟ್ವಿಟರ್ ಅಕೌಂಟ್​ ನಲ್ಲೂ ಬರೆದುಕೊಂಡಿದ್ದಾರೆ.

ಸಾಹಸ ಸಿಂಹ ವಿಷ್ಣುವರ್ಧನ್ ಪುಣ್ಯ ಭೂಮಿ ಇಲ್ಲಿಯೇ ಇರಬೇಕು.ಅಂತ್ಯಕ್ರಿಯೆ ಆಗಿರೋ ಅಭಿಮಾನ್ ಸ್ಟುಡಿಯೋದ ಒಂದು ಎಕರೆ ಜಾಗದಲ್ಲಿಯೇ ಅದು ಇರಬೇಕು. ಅದನ್ನ ಸ್ಥಳಾಂತರಿಸಲೇಬಾರದು. ಹಾಗಂತ ಆರಂಭದಿಂದಲೂ ವಿಷ್ಣು ಅಭಿಮಾನಿಗಳು ಪಟ್ಟು ಹಿಡಿದ್ದರು. ಅವರ ಆಸೆಗೆ ಕಿಚ್ಚ ಸುದೀಪ್ ಕೂಡ ನೀರೆದರು.

ಈ ಸಂಬಂಧ ಮೊನ್ನೆ  ಸಿ.ಎಂ. ಸಿದ್ದರಾಮಯ್ಯನವರನ್ನೂ ಭೇಟಿ ಮಾಡಿದರು. ಈಗ ಆ ಭೇಟಿ ಫಲಿಸುತ್ತಿದೆ. ಸಿ.ಎಂ.ಆಪ್ತ ಕಾರ್ಯದರ್ಶಿ ಡಾ.ಸಿಂಧೆ ಭೀಮಸೇನ್ ರಾವ್  ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಕಿಚ್ಚ ಸುದೀಪ್ ಸಲ್ಲಿಸಿದ್ದ ಮನವಿಯನ್ನ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಈ ಒಂದು ಸಂತಸದ ವಿಷವಯನ್ನ ತಿಳಿದಿರೋ ಸುದೀಪ್, ಅದನ್ನ ತಮ್ಮ ಟ್ವಿಟರ್ ಅಕೌಂಟ್​ ನಲ್ಲೂ ಬರೆದುಕೊಂಡಿದ್ದಾರೆ. ತಮ್ಮ ಮನವಿಗೆ ತಕ್ಷಣವೇ ಸ್ಪಂಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಆಪ್ತ ಕಾರ್ಯದರ್ಶಿಗಳಿಗೆ ಧನ್ಯವಾದಗಳನ್ನೂ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸದ್ದಿಲ್ಲದೇ ಮದುವೆಯಾದ್ರಾ ‘ಬ್ರಹ್ಮಗಂಟು’ ನಾಯಕಿ ದಿಯಾ ಪಾಲಕ್ಕಲ್? Photo Viral
ಚಿಂದಿ ಬಟ್ಟೆ ಧರಿಸಿ ಜಾಲತಾಣದಲ್ಲಿ ಚಿಂದಿ ಉಡಾಯಿಸಿದ Toxic ನಟಿ: ಬೆಲೆ ಕೇಳಿದ್ರೆ ಹೌಹಾರಿ ಹೋಗ್ತೀರಾ!