
ಹೈದರಾಬಾದ್(ಮಾ.01): ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್'ನ ಹೆಬ್ಬುಲಿ ಚಿತ್ರ ದೇಶದಾದ್ಯಂತ ಅಬ್ಬರಿಸುತ್ತಿದೆ. ಈ ನಡುವೆ ಮತ್ತೊಂದು ಶುಭ ಸುದ್ದಿ ಬಂದಿದ್ದು, ಆಂಧ್ರ ಪ್ರದೇಶ ಸರ್ಕಾರ ಸಿನಿಮಾ ಕ್ಷೇತ್ರಕ್ಕೆ ನೀಡುವ ಪ್ರತಿಷ್ಠಿತ ನಂದಿ ಪ್ರಶಸ್ತಿ ಸುದೀಪ್'ಗೆ ಲಭಿಸಿದೆ.
2012ರಲ್ಲಿ ರಾಜಮೌಳಿ ನಿರ್ದೇಶನದಲ್ಲಿ ಬಿಡುಗಡೆಯಾಗಿದ್ದ ತೆಲುಗು ಚಿತ್ರ 'ಈಗ' ದ ಅತ್ಯುತ್ತಮ ಖಳನಟ ಪ್ರಶಸ್ತಿಗೆ ಸುದೀಪ್ ಭಾಜನರಾಗಿದ್ದಾರೆ. ರಾಜ್ಯ ವಿಭಜನೆಯಾಗುವ ಕಾರಣದಿಂದ 2012ರಿಂದ ನಂದಿ ಪ್ರಶಸ್ತಿ ನೀಡಿಕೆಯನ್ನು ನಿಲ್ಲಿಸಲಾಗಿತ್ತು. ಆಂಧ್ರ ಈಗ ಎರಡು ರಾಜ್ಯಗಳಾಗಿ ವಿಂಗಡನೆಯಾಗಿದ್ದು, ಅಂಧ್ರ ನಂದಿ ಪ್ರಶಸ್ತಿಯನ್ನು ಮುಂದುವರಿಸಿಕೊಂಡು ಹೋಗಲಿದ್ದು, ತೆಲಂಗಾಣ ರಾಜ್ಯ ಪ್ರತ್ಯೇಕ ರಾಜ್ಯ ಪ್ರಶಸ್ತಿ ನೀಡುವ ಚಿಂತನೆಯಲ್ಲಿದೆ.
ಈಗ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಸೇರಿದಂತೆ 10 ಪ್ರಶಸ್ತಿಗಳು ದೊರಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.