
ಚೆನ್ನೈ(ಫೆ.28): ಸೂಪರ್'ಸ್ಟಾರ್ ರಜಿನಿಕಾಂತ್ ಪುತ್ರಿ ಪ್ರಯಾಣಿಸುತ್ತಿದ್ದ ಕಾರು ಆಟೊ'ಗೆ ಡೊಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಗಾಯಗೊಂಡಿರುವ ಘಟನೆ ಚೆನ್ನೈ'ನಲ್ಲಿ ನಡೆದಿದೆ.
ವರದಿಗಳ ಪ್ರಕಾರ ನಗರದ ಆಳ್ವಾರ್'ಪೇಟೆಯಲ್ಲಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಸ್ಟೇಷನರಿ ಆಟೋ'ಗೆ ಸೌಂದರ್ಯ ಅವರ ಕಾರು ಡಿಕ್ಕಿ ಹೊಡೆದಿದೆ. ಗಾಯಗೊಂಡ ಚಾಲಕ ಪೊಲೀಸರಿಗೆ ದೂರು ನೀಡುವುದಾಗಿ ರಜಿನಿಕಾಂತ್ ಪುತ್ರಿಗೆ ಬೆದರಿಸಿದ್ದಾನೆ.
ಆಗ ತಕ್ಷಣ ಎಚ್ಚೆತ್ತುಕೊಂಡ ಸೌಂದರ್ಯ ಭಾವ ನಟ ಧನುಷ್ ಚಾಲಕನ ಬಳಿ ಮಾತನಾಡಿ ಆತನ ಚಿಕಿತ್ಸಾ ವೆಚ್ಚ ಹಾಗೂ ರಿಕ್ಷಾ ದುರಸ್ತಿ ವೆಚ್ಚವನ್ನು ಭರಸಿಕೊಡುವುದಾಗಿ ಹೇಳಿದ ನಂತರ ವಿವಾದ ತಣ್ಣಗಾಗಿದೆ. ಘಟನೆಯ ಬಗ್ಗೆ ಪೊಲೀಸರಿಗೆ ಇಲ್ಲಿಯವರೆಗೂ ದೂರು ನೀಡಲಾಗಿಲ್ಲ.
ಸೌಂದರ್ಯ ರಜಿನಿಕಾಂತ್ ಈಗಾಗಲೇ ರಜಿನಿ ಹಾಗೂ ದೀಪೀಕಾ ಪಡುಕೋಣೆ ಅಭಿನಯದ ಕೊಚಾಡಿಯನ್ ಸಿನಿಮಾವನ್ನು ನಿರ್ದೇಶಿಸಿದ್ದು, ಈಗ ಧನುಷ್ ಅಭಿನಯದ ವೇಲೈ ಇಲ್ಲ ಪಟ್ಟಧರಿ -2 ಎಂಬ ಚಿತ್ರ ನಿರ್ದೇಶಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.