
ನವದೆಹಲಿ(ಜು.07): ನಟ ರಜನೀಕಾಂತ್ ವಿರುದ್ಧ ಸದಾ ಹರಿಹಾಯುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಇದೀಗ ರಜನೀ ಅಮೆರಿಕದ ಕ್ಯಾಸಿನೋವೊಂದರಲ್ಲಿ ಕುಳಿತಿರುವ ಫೋಟೋ ಒಂದನ್ನು ಟ್ವೀಟರ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ರಜನಿ ಆದಾಯದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
‘ ವಾವ್! ಆರ್‌ಕೆ 420 (ರಜನಿಯನ್ನು ಸ್ವಾಮಿ ಕರೆಯುವುದು ಹೀಗೆ) ಆರೋಗ್ಯ ವೃದ್ಧಿಗಾಗಿ ಅಮೆರಿಕದ ಕ್ಯಾಸಿನೋದಲ್ಲಿ ಜೂಜಾಡುತ್ತಿದ್ದಾರೆ. ಅವರ ಭಾರೀ ಹಣ ಎಲ್ಲಿಂದ ಬಂತು ಎಂಬುದನ್ನು ಇಡಿ ತನಿಖೆ ಮಾಡಬೇಕು’ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ. ಅದರ ಜೊತೆಗೆ ರಜನೀ ಕ್ಯಾಸಿನೋವೊಂದರಲ್ಲಿ ಕುಳಿತಿರುವ ಫೋಟೋ ಸಹ ಲಗತ್ತಿಸಿದ್ದಾರೆ.
ಇತ್ತೀಚೆಗಷ್ಟೇ ಸಾಮಾನ್ಯ ಆರೋಗ್ಯ ತಪಾಸಣೆಗೆಂದು ರಜನಿ ಅಮೆರಿಕಕ್ಕೆ ತೆರಳಿದ್ದರು. ಹೀಗಾಗಿ ಅದನ್ನು ವ್ಯಂಗ್ಯವಾಡುವಂತೆ, ಆರೋಗ್ಯ ವೃದ್ಧಿಗಾಗಿ ರಜನೀ ಜೂಜಾಡುತ್ತಿದ್ದಾರೆ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ರಜನೀ ರಾಜಕೀಯ ಪ್ರವೇಶದ ಸುದ್ದಿಯ ಗುಸುಗುಸು ಬಗ್ಗೆ ಪ್ರತಿಕ್ರಿಯಿಸಿದ್ದ ಸ್ವಾಮಿ, ಅವರೊಬ್ಬ ಅನಕ್ಷರಸ್ಥ. ರಾಜಕೀಯ ಪ್ರವೇಶ ಮಾಡಿದರೆ ಭಾರೀ ಅನಾಹುತ ಮಾಡಿಕೊಳ್ಳಲಿದ್ದಾರೆ ಎಂದು ಟೀಕಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.