ಸಲ್ಮಾನ್'ಗೆ ದುಬಾರಿ ಬೆಲೆಯ ಗಿಫ್ಟ್ ಕೊಟ್ಟ ಶಾರುಖ್!: ನೀಡಿದ ಗಿಫ್ಟ್ ಏನು ಗೊತ್ತಾ?

Published : Jul 06, 2017, 04:22 PM ISTUpdated : Apr 11, 2018, 12:47 PM IST
ಸಲ್ಮಾನ್'ಗೆ ದುಬಾರಿ ಬೆಲೆಯ ಗಿಫ್ಟ್ ಕೊಟ್ಟ ಶಾರುಖ್!: ನೀಡಿದ ಗಿಫ್ಟ್ ಏನು ಗೊತ್ತಾ?

ಸಾರಾಂಶ

ಬದ್ಧವೈರಿಗಳಂತಿದ್ದ ಬಾಲಿವುಡ್'ನ 'ಕರಣ್ ಅರ್ಜುನ್' ಎಂದೇ ಪ್ರಸಿದ್ಧರಾದ ಶಾರುಖ್ ಹಾಗೂ ಸಲ್ಮಾನ್ ಇಬ್ಬರ ನಡುವಿನ ಗೆಳೆತನ ಈಗ ಅದೆಷ್ಟು ಆಳವಾಗಿದೆ ಎಂಬುವುದು ಎಲ್ಲರಿಗೂ ತಿಳಿದಿದೆ. ಯಾಕೆಂದರೆ ಅದೆಷ್ಟೇ ಕಠಿಣ ಪರಿಸ್ಥಿತಿ ಇದ್ದರೂ ಇಬ್ಬರೂ ಅಗತ್ಯ ಬಿದ್ದಾಗ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆ. ಇತ್ತೀಚೆಗಷ್ಟೇ ತೆರೆ ಕಂಡ ಸಲ್ಮಾನ್ ನಟನೆಯ ಚಿತ್ರ 'ಟ್ಯೂಬ್'ಲೈಟ್'ನಲ್ಲೂ ಶಾರುಖ್ ಖಾನ್ ಕಿರುಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಮುಂಬೈ(ಜು.06): ಬದ್ಧವೈರಿಗಳಂತಿದ್ದ ಬಾಲಿವುಡ್'ನ 'ಕರಣ್ ಅರ್ಜುನ್' ಎಂದೇ ಪ್ರಸಿದ್ಧರಾದ ಶಾರುಖ್ ಹಾಗೂ ಸಲ್ಮಾನ್ ಇಬ್ಬರ ನಡುವಿನ ಗೆಳೆತನ ಈಗ ಅದೆಷ್ಟು ಆಳವಾಗಿದೆ ಎಂಬುವುದು ಎಲ್ಲರಿಗೂ ತಿಳಿದಿದೆ. ಯಾಕೆಂದರೆ ಅದೆಷ್ಟೇ ಕಠಿಣ ಪರಿಸ್ಥಿತಿ ಇದ್ದರೂ ಇಬ್ಬರೂ ಅಗತ್ಯ ಬಿದ್ದಾಗ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆ. ಇತ್ತೀಚೆಗಷ್ಟೇ ತೆರೆ ಕಂಡ ಸಲ್ಮಾನ್ ನಟನೆಯ ಚಿತ್ರ 'ಟ್ಯೂಬ್'ಲೈಟ್'ನಲ್ಲೂ ಶಾರುಖ್ ಖಾನ್ ಕಿರುಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ಶಾರುಖ್ ಖಾನ್ ಮಾಡಿದ ಈ ಸಹಾಯಕ್ಕೆ ಏನಾದರೂ ಮರಳಿಸುವುದು ಸಲ್ಮಾನ್ ಕರ್ತವ್ಯವಾಗಿದೆ. ಇದೇ ಕಾರಣಕ್ಕಾಗಿ ಆನಂದ್ ಎಲ್ ರಾಯ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಶಾರುಖ್ ಖಾನ್ ನಟನೆಯ ಮುಂದಿನ ಸಿನಿಮಾದಲ್ಲಿ ಸಲ್ಮಾನ್ ಕೂಡಾ ಕಿರುಪಾತ್ರವೊಂದರಲ್ಲಿ ಕಂಡು ಬರಲಿದ್ದಾರೆ. ಸಲ್ಮಾನ್ ಮಾಡುತ್ತಿರುವ ಈ ರೋಲ್'ನಿಂದ ಅತ್ಯಂತ ಖುಷಿಯಾಗಿರುವ ಶಾರುಖ್, ಸಲ್ಲುಗೆ ಶೈನಿಂಗ್ ಕಾರ್ ಒಂದನ್ನು ಗಿಫ್ಟ್ ಆಗಿ ನೀಡಿದ್ದಾರೆ.

ತನ್ನ ಕೆಲಸದಲ್ಲಿ ಅತ್ಯಂತ ಬ್ಯೂಸಿಯಾಗಿರುವ ಸಲ್ಮಾನ್ ಒತ್ತಡದ ನಡುವೆಯೂ ಶಾರುಖ್ ನಟಿಸುತ್ತಿರು ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ನಿಭಾಯಿಸಲು ರೆಡಿಯಾಗಿದ್ದಾರೆ. ಸಲ್ಮಾನ್ ಖಾನ್'ರವರ ಈ ಕಮಿಟ್'ಮೆಂಟ್ ಕಂಡು ಶಾರುಖ್ ಕೂಡಾ ಖುಷಿಪಟ್ಟಿದ್ದಾಋಎ. ಈ ಸಿನಿಮಾದಲ್ಲಿ ಹಾಡೊಂದರಲ್ಲಿ ಸಲ್ಲು ಕಾಣಿಸಿಕೊಳ್ಳಲಿರುವುದಾಗಿ ತಿಳಿದು ಬಂದಿದೆ.

ಇನ್ನು ಶಾರುಖ್ ಖಾನ್, ಅಲ್ಮಾನ್ ಖಾನ್'ಗೆ ಗಿಫ್ಟ್ ನೀಡಿದ್ದಾರಾದರೂ ಯಾವ ಕಾರು ಎಂಬ ಗುಟ್ಟು ಇನ್ನೂ ರಟ್ಟಾಗಿಲ್ಲ. ಆದರೆ ಸದ್ಯ ತಿಳಿದು ಬಂದ ಮಾಹಿತಿ ಅನ್ವಯ ಸಿನಿಮಾದಲ್ಲಿ ತನ್ನ ಪಾತ್ರದ ಶೂಟಿಂಗ್'ಗಾಗಿ ಸಲ್ಮಾನ್ ಸ್ಟುಡಿಯೋಗೆ ಆಗಮಿಸುತ್ತಿದ್ದಂತೆಯೇ ಶಾರುಖ್ ಖಾನ್ ಅವರನ್ನು ಬರ ಮಾಡಿಕೊಂಡು ಕಾರನ್ನು ಗಿಫ್ಟ್ ಮಾಡಿದ್ದಾರೆ ಎಂದು ತಿಳಿಸು ಬಂದಿದೆ. ಇನ್ನು ಈ ಕಾರನ್ನು ಗಿಫ್ಟ್ ಮಾಡುತ್ತಾರೆ ಎಂಬುವುದನ್ನು ಊಹೆ ಕೂಡಾ ಮಾಡಿರದ ಸಲ್ಮಾನ್ ಕೂಡಾ ಶಾಕ್ ಆಗಿದ್ದಾರಂತೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾವು ಊಟಕ್ಕಾಗೇ ಮದುವೆಗೆ ಹೋಗ್ತೇವೆ, ಕರಣ್ ಜೋಹರ್ ಮದುವೆಗೆ ಹೋದ್ರೂ ಊಟ ಮಾಡಲ್ಲ, ಕಾರಣ ?!
ಸೊಂಟಕ್ಕೆ ಸನ್‌ಗ್ಲಾಸ್‌ ಸಿಕ್ಕಿಸಿಕೊಂಡು ನಟಿಯ ಪೋಸ್‌.. ಟ್ರೋಲಿಗರ ಕಾಮೆಂಟ್ಸ್‌ಗೆ ಕಂಗಾಲಾದ ಸೀರಿಯಲ್‌ ತಾರೆ!