Su From So, ಕಾಂತಾರ ಸಿನಿಮಾದ ನಟ ಪ್ರಕಾಶ್ ತುಮಿನಾಡ್ ಮನೆ ನೋಡಿದ್ದೀರಾ?

Published : Aug 02, 2025, 04:32 PM IST
Prakash K Thuminad

ಸಾರಾಂಶ

Prakash Thuminad House: Su From So ಸಿನಿಮಾದಲ್ಲಿ ಮಿಂಚಿರುವ ನಟ ಪ್ರಕಾಶ್ ಕೆ. ತುಮಿನಾಡ್ ಅವರ ಮನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಬೆಂಗಳೂರು: Su From So ಸಿನಿಮಾದ ನಟ ಪ್ರಕಾಶ್ ಕೆ. ತುಮಿನಾಡ್ ಮತ್ತೊಮ್ಮೆ ಸಹಜ ಹಾಸ್ಯಮಯ ನಟನೆಯಿಂದ ಎಲ್ಲರ ಗಮನವನ್ನು ಸೆಳೆದಿದ್ದಾರೆ. ತುಳುನಾಡಿನ ದೈತ್ಯ ಪ್ರತಿಭೆಯಾಗಿರುವ ಪ್ರಕಾಶ್  ಕೆ. ತುಮಿನಾಡ್ ಚಂದನವದಲ್ಲಿ ಬ್ಯುಸಿಯಾಗಿರುವ ಪೋಷಕ ನಟರಲ್ಲಿ ಒಬ್ಬರಾಗಿದ್ದಾರೆ. ಒಂದು ಮೊಟ್ಟೆಯ ಕಥೆ ಸಿನಿಮಾದಲ್ಲಿನ ಪ್ರಕಾಶ್ ಅವರ ಶ್ರೀನಿವಾಸ್‌ ಪಾತ್ರ ಕಂಡು ಜನರು ಮನಸೋತಿದ್ದರು. ಒಂದು ಮೊಟ್ಟೆ ಕಥೆಯಲ್ಲಿ ಶ್ರೀನಿವಾಸ್‌ ಅವರದ್ದೇ 'ರಾಜಪಾತ್ರ' ಎಂದು ರಾಜ್ ಬಿ ಶೆಟ್ಟಿ ಮೆಚ್ಚುಗೆ ಸೂಚಿಸಿದ್ದರು. ಕಳೆದ ವಾರ ಬಿಡುಗಡೆಯಾಗಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ Su From So ಸಿನಿಮಾದಲ್ಲಿ ಆಟೋ ಚಾಲಕ ಚಂದ್ರನಾಗಿ ಪ್ರಕಾಶ್ ತುಮಿನಾಡ್ ನಟಿಸಿದ್ದಾರೆ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪ್ರಕಾಶ್ ತುಮಿನಾಡ್ ಅವರ ಮನೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮನೆಯ ಇಂಟಿರಿಯರ್ ಡಿಸೈನ್ ನೋಡಿ ನೋಡುಗರು ಹುಬ್ಬೇರಿಸುತ್ತಿದ್ದಾರೆ. ಯಾವ ಅರಮನೆ, ಫೈವ್ ಸ್ಟಾರ್‌ ಹೋಟೆಲ್‌ಗೂ ನಿಮ್ಮ ಮನೆ ಕಡಿಮೆ ಇಲ್ಲ. ಚೆಂದದ ಮನೆ ಎಂದು ಪ್ರಕಾಶ್ ಅವರ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಚಂದನವನದ ಜನಪ್ರಿಯ ಪೋಷಕ ನಟಿ

ರಾಜ್‌ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಒಂದು ಮೊಟ್ಟೆಯ ಕಥೆ ಸಿನಿಮಾ ಪ್ರಕಾಶ್ ತುಮಿನಾಡ್ ಅವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿತ್ತು. ನಂತರ ಬಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ: ರಾಮಣ್ಣ ರೈ, ಕಾಂತಾರಾ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾಗಳು ಪ್ರಕಾಶ್ ತುಮಿನಾಡ್‌ ಅವರಿಗೆ ಜನಪ್ರಿಯತೆಯನ್ನು ನೀಡಿವೆ. 2017 ರಿಂದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಕಾಶ್ ತುಮಿನಾಡ್ ಚಂದನವನದ ಜನಪ್ರಿಯ ಪೋಷಕ ನಟರಲ್ಲಿ ಒಬ್ಬರಾಗಿದ್ದಾರೆ.

 

 

ಕಾಂತಾರದ ರಾಂಪನಾಗಿ ನಗಿಸದ್ರು ಪ್ರಕಾಶ್ ತುಮಿನಾಡ್

ಇನ್ನುಳಿದಂತೆ ಕಥೆಯೊಂದು ಶುರುವಾಗಿದೆ, ಲೌಡ್ ಸ್ಪೀಕರ್, ಲುಂಗಿ, ಭಜರಂಗಿ 2, ಗಾಳಿಪಟ 2, ಧರಣಿ ಮಂಡಲ ಮಧ್ಯದೊಳಗೆ, ಬ್ಯಾಚುಲರ್ ಪಾರ್ಟಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರಕಾಶ್ ತುಮಿನಾಡ್ ನಟಿಸಿದ್ದಾರೆ. ಕಾಂತಾರಾದಲ್ಲಿನ ರಾಂಪ ಪಾತ್ರದಲ್ಲಿ ನಟಿಸಿದ್ದ ಪ್ರಕಾಶ್ ತುಮಿನಾಡ್ ಅವರ ನಟನೆ ವೀಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿತ್ತು.

ಇದನ್ನೂ ಓದಿ: Su From So ಸಿನಿಮಾದಲ್ಲಿ ಎರಡೇ ಡೈಲಾಗ್‌ ಹೇಳಿ ಎಲ್ಲರನ್ನು ಹೊಟ್ಟೆ ಹುಣ್ಣಾಗಿಸುವಂತೆ ಕಲಾವಿದೆ ಈ ಚೆಲುವೆ

 

 

Su From So ಸಿನಿಮಾದ ಕಥೆ ಏನು?

ಹೊಸಬರ ಸಿನಿಮಾ Su From So ವೀಕ್ಷಕರನ್ನು ನಗಿಸುತ್ತಲೇ ಜೇಬು ತುಂಬಿಸಿಕೊಳ್ಳುತ್ತಿದೆ. ಜೆ.ಪಿ.ತುಮಿನಾಡ್ ನಿರ್ದೇಶನದ Su From So ಸಿನಿಮಾ ಒಂದೂರಿನಲ್ಲಿ ನಡೆಯುವ ಕಥೆಯಾಗಿದೆ. ಮನೆಯೊಂದರಲ್ಲಿ ಉಂಟಾದ ಸಮಸ್ಯೆಯನ್ನು ಇಡೀ ಊರು ಒಟ್ಟಾಗಿ ಹೇಗೆ ಬಗೆಹರಿಸುತ್ತೇ ಅನ್ನೋದು ಚಿತ್ರದ ಕಥೆಯಾಗಿದೆ. ಚಿತ್ರದಲ್ಲಿ ಅಶೋಕ್‌ನಾಗಿ ಜೆ.ಪಿ.ತುಮಿನಾಡ್, ಕರುಣಾಕರ್ ಗುರೂಜಿಯಾಗಿ ರಾಜ್ ಬಿ. ಶೆಟ್ಟಿ, ರವಿ ಅಣ್ಣನಾಗಿ ಶನೀಲ್ ಗೌತಮ್, ಬಾನು ಆಗಿ ಸಂಧ್ಯಾ ಅರಕೆರೆ ನಟಿಸಿದ್ದಾರೆ. ಇನ್ನುಳಿದಂತೆ ಹಲವು ಕಲಾವಿದರು Su From So ಸಿನಿಮಾದಲ್ಲಿ ನಟಿಸಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?