
ಬೆಂಗಳೂರು (ಅ. 15): 2017 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ಎನ್.ಎಸ್ ಶಂಕರ್ ಅಧ್ಯಕ್ಷತೆಯ ಸಮಿತಿಯು ತನ್ನ ಶಿಫಾರಸನ್ನು ಇಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿತು. ಸಮಿತಿಯ ಶಿಫಾರಸನ್ನು ಸರ್ಕಾರವು ಅಂಗೀಕರಿಸಿದ್ದು ಪ್ರಶಸ್ತಿಗೆ ಆಯ್ಕೆಯಾದವರ ವಿವರ ಪ್ರಕಟಿಸಿದೆ.
ಮೊದಲನೇಯ ಅತ್ಯುತ್ತಮ ಚಿತ್ರ - ಶುದ್ಧಿ.
ಎರಡನೆಯ ಅತ್ಯುತ್ತಮ ಚಿತ್ರ - ಮಾರ್ಚ್ 22.
ಮೂರನೇ ಅತ್ಯುತ್ತಮ ಚಿತ್ರ - ಪಡ್ಡಾಯಿ.
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ - ಹೆಬ್ಬೆಟ್ಟು ರಾಮಕ್ಕ.
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ - ರಾಜಕುಮಾರ.
ಅತ್ಯುತ್ತಮ ಮಕ್ಕಳ ಚಿತ್ರ - ಎಳೆಯರು ನಾವು ಗೆಳೆಯರು.
ನಿರ್ದೇಶಕರ ಪ್ರಥಮ ನಿರ್ದೇಶನದ ಚಿತ್ರ - ಅಯನ.
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ - ಸೋಫಿಯಾ ( ಕೊಂಕಣಿ )
ಅತ್ಯುತ್ತಮ ನಟ - ವಿಶೃತ್ ನಾಯ್ಕ ( ಚಿತ್ರ - ಮಂಜರಿ )
ಅತ್ಯುತ್ತಮ ನಟಿ - ತಾರಾ ಅನುರಾಧ ( ಚಿತ್ರ - ಹೆಬ್ಬೆಟ್ಟು ರಾಮಕ್ಕ)
ಅತ್ಯುತ್ತಮ ಪೋಷಕ ನಟ - ಮಂಜುನಾಥ ಹೆಗಡೆ , ( ಚಿತ್ರ- ಲಕ್ಷ್ಮಿ ನಾರಾಯಣರ ಪ್ರಪಂಚಾನೇ ಬೇರೆ ).
ಅತ್ಯುತ್ತಮ ಪೋಷಕ ನಟಿ - ರೇಖಾ ( ಚಿತ್ರ - ಮೂಕ ನಾಯಕ )
ಅತ್ಯುತ್ತಮ ಕಥೆ - ಹನುಮಂತ ಬಿ ಹಾಲಿಗೇರಿ. ( ಚಿತ್ರ - ಕೆಂಗುಲಾಬಿ )
ಅಮರೇಶ ನುಗಡೋಣಿ ( ಚಿತ್ರ - ನೀರು ತಂದವರು )
ಅತ್ಯುತ್ತಮ ಚಿತ್ರಕಥೆ - ವೆಂಕಟ ಭಾರದ್ವಾಜ್ ( ಚಿತ್ರ - ಕೆಂಪಿರ್ವೆ )
ಅತ್ಯುತ್ತಮ ಸಂಭಾಷಣೆ - ಪ್ರೋ ಎಸ್ ಜಿ. ಸಿದ್ದರಾಮಯ್ಯ ( ಚಿತ್ರ - ಹೆಬ್ಬೆಟ್ಟು ರಾಮಕ್ಕ )
ಅತ್ಯುತ್ತಮ ಛಾಯಾಗ್ರಹಣ. -ಸಂತೋಶ್ ರೈ ಪತಾಜೆ, ( ಚಿತ್ರ - ಚಮಕ್ )
ಅತ್ಯುತ್ತಮ ಸಂಗೀತ ನಿರ್ದೇಶನ-ವಿ.ಹರಿಕೃಷ್ಣ, ( ಚಿತ್ರ - ರಾಜಕುಮಾರ)
ಅತ್ಯುತ್ತಮ ಸಂಕಲನ- ಹರೀಶ್ ಕೊಮ್ಮೆ ( ಚಿತ್ರ - ಮಫ್ತಿ )
ಅತ್ಯುತ್ತಮ ಬಾಲನಟ - ಮಾಸ್ಟರ್ ಕಾರ್ತಿಕ್ ( ಚಿತ್ರ - ರಾಮರಾಜ್ಯ)
ಅತ್ಯುತ್ತಮ ಬಾಲನಟಿ - ಶ್ಲಘ ಸಾಲಿಗ್ರಾಮ ( ಚಿತ್ರ - ಕಟಕ )
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.