
ಎಲ್ಲಿ ನೋಡಿದ್ರೂ ಕ್ರಿಕೆಟ್ ವರ್ಲ್ಡ್ ಕಪ್‌ದೇ ಹವಾ! ಅನೇಕರಿಗೆ ಗೊತ್ತಿಲ್ಲದ ವಿಚಾರವೇನೆಂದರೆ ಇದರ ನಡುವೆ ನಡೆಯಿತು ಡ್ಯಾನ್ಸ್ ವರ್ಲ್ಡ್ ಕಪ್ ಟೂರ್ನಮೆಂಟ್. ಅದರಲ್ಲಿ ಭಾಗವಹಿಸಿದ ಕನ್ನಡ ಕಿರುತೆರೆ ನಟಿ ನಿಶಾ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಕನ್ನಡ ಖ್ಯಾತ ಪೌರಾಣಿಕ ಧಾರಾವಾಹಿ 'ಶ್ರೀ ವಿಷ್ಣು ದಶಾವಾತಾರ'ದಲ್ಲಿ ಶ್ರೀದೇವಿಯ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ನಿಶಾ ಡ್ಯಾನ್ಸ್ ವರ್ಲ್ಡ್ ಕಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಅಮೋಘ ಜಯ ಸಾಧಿಸಿದ್ದಾರೆ.
ಮೂಲತಃ ಶಾಸ್ತ್ರೀಯ ನೃತ್ಯಗಾರ್ತಿ ಆಗಿರುವ ನಿಶಾ ಅನಿರುದ್ದ್‌ಗೆ ಜೋಡಿಯಾಗಿ ಜಾನಪದ ಡುಯೆಟ್ ರಾಷ್ಟ್ರೀಯ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಇದರಲ್ಲಿ ಒಟ್ಟಾರೆ 51 ದೇಶಗಳು ಪ್ರತಿನಿಧಿಸುತ್ತಿದ್ದು 20 ಸಾವಿರ ಮಂದಿ ಆಡಿಷನ್‌ನಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.