
ಬೆಂಗಳೂರಿನ ನಾಗರಭಾವಿ ವೃತ್ತದ ಬಳಿ ಹೊಸದಾಗಿ ನಿರ್ಮಾಣಗೊಂಡಿರುವ ಈ ಸ್ಟುಡಿಯೋ ಅನ್ನು ಇತ್ತೀಚೆಗೆ ಖ್ಯಾತ ಗಾಯಕ ಎಸ್ ಬಿ ಬಾಲಸುಬ್ರಮಣ್ಯಂ ಉದ್ಘಾಟಿಸಿದರು. ಅಂದಹಾಗೆ ಈ ಸ್ಟುಡಿಯೋ ಹೆಸರು ‘ಲೂಪ್ ಎಂಟರ್‌ಟೈನ್‌ಮೆಂಟ್ ಸ್ಟುಡಿಯೋ’.
ಏನೆಲ್ಲ ವಿಶೇಷತೆಗಳಿವೆ?
- ಒಂದು ಚಿತ್ರದ ತಾಂತ್ರಿಕ ಕೆಲಸಗಳನ್ನು ಮಾಡಲು ಬೇಕಾದ ಎಲ್ಲ ಸೌಲಭ್ಯಗಳು ಇವೆ.
- ಸಿನಿಮಾಗಳಿಗೆ ಬಳಸುವ ವಿಶೇಷ ಎಫೇಕ್ಟ್ಗಳ ಪೈಕಿ ವಿಎಫ್‌ಎಕ್ಸ್, ಎಸ್‌ಎಫ್‌ಎಕ್ಸ್.
ಜುಗಾರಿ ಬ್ರದರ್ಸ್ ಆಗಿ ಜಾನಿ ಲಿವರ್- ಸಾಧು ಕೋಕಿಲ!
- ಡಬ್ಬಿಂಗ್, ಮಿಕ್ಸಿಂಗ್ ಹಾಗೂ ಮಾಸ್ಟರಿಂಗ್, ಡಿಟಿಎಸ್ ಮಿಕ್ಸ್, ಎಡಿಟಿಂಗ್, ಕಲರ್ ಗ್ರೇಡಿಂಗ್, ಆಡಿಯೋಗ್ರಫಿ.
ಹೀಗೆ ಹಲವು ರೀತಿಯ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿರುವ ಈ ಲೂಪ್ ಸ್ಟುಡಿಯೋದ ಸಾರಥಿಗಳಾಗಿ ಸಾಧು ಕೋಕಿಲ ಪುತ್ರ ಸುರಾಗ್ ಹಾಗೂ ಸಂಕಲನಕಾರ ಜೋನಿ ಹರ್ಷ ಇದ್ದಾರೆ. ಚಿತ್ರರಂಗದಲ್ಲಿ ನಾನು ನಟ, ನಿರ್ದೇಶಕ, ಸಂಗೀತ ನಿರ್ದೇಶಕ ಹಾಗೂ ಗಾಯಕನಾಗಿ ಗುರುತಿಸಿಕೊಂಡಿದ್ದೇನೆ. ಹೀಗಾಗಿ ಉದ್ಯಮಕ್ಕೆ ನೆರವಾಗುವಂತಹ ಕೆಲಸ ಮಾಡಬೇಕು ಎಂದುಕೊಂಡಾಗ ಸ್ಟುಡಿಯೋ ಕಟ್ಟುವ ಯೋಚನೆ ಬಂತು. ಇದು ನನ್ನ ಹೊಸ ಹೆಜ್ಜೆ. ಚಿತ್ರೋದ್ಯಮ ನಮ್ಮ ಸ್ಟುಡಿಯೋ ಅನ್ನು ಬಳಸಿಕೊಳ್ಳುತ್ತದೆಂಬ ನಂಬಿಕೆ ಎಂದಿದ್ದು ಸಾಧು ಕೋಕಿಲ.
ಸಾಧು ನನ್ನ ಗುರು
ಸಂಗೀತ ಕ್ಷೇತ್ರದಲ್ಲಿ ಸಾಧು ಕೋಕಿಲ ಅವರಿಗೆ ವಿಶೇಷವಾದ ಪ್ರತಿಭೆ ಇದೆ. ಅವರ ಪ್ರತಿಭೆಯಿಂದಲೇ ಹಾಡುಗಳು ಹಿಟ್ ಆಗಿವೆ. ಯಾವುದೇ ಗಾಯಕ ಅಥವಾ ಗಾಯಕಿಗೆ ಹಾಡುವ ಅವಕಾಶ ಸಿಗುವುದು ಸಂಗೀತ ನಿರ್ದೇಶಕರಿಂದ. ಸಾಧು ಅವರು ಸಂಗೀತ ಮಾಡಿರುವ ಹಲವು ಹಾಡುಗಳಿಗೆ ಧ್ವನಿಯಾಗಿದ್ದೇನೆ. ಹೀಗೆ ಹಾಡುವ ಅವಕಾಶ ನೀಡುವ ಪ್ರತಿಯೊಬ್ಬ ಸಂಗೀತ ನಿರ್ದೇಶಕನೂ ಗಾಯಕರ ಪಾಲಿಗೆ ಗುರುವೇ. ಹಾಗೆ ನನ್ನ ಪಾಲಿಗೆ ಸಾಧು ಕೋಕಿಲ ಗುರುಗಳಂತೆ ಎಂದು ಹೇಳುವ ಮೂಲಕ ಹೊಸ ಸ್ಟುಡಿಯೋಗೆ ಚಾಲನೆ ಕೊಟ್ಟರು ಎಸ್ ಬಿ ಬಾಲಸುಬ್ರಮಣ್ಯಂ.
ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಸುಂಟರಗಾಳಿ ಎಬ್ಬಿಸುತ್ತಾ ಈ ಜೋಡಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.