ಟಾಕ್ಸಿಕ್ ಪ್ರಿ-ರಿಲೀಸ್ ಇವೆಂಟ್‌ ವೇಳೆ ದುರಂತ, ಸೌಂಡ್‌ಬಾಕ್ಸ್ ಕುಸಿದು ವಿದ್ಯಾರ್ಥಿಗಳಿಗೆ ಗಾಯ; ಯಶ್ ಫುಲ್ ಗಾಬರಿ!

Published : Aug 23, 2026, 11:01 AM IST
Yash Toxic Hydrabad Event

ಸಾರಾಂಶ

ಈ ಕಾರ್ಯಕ್ರಮ ಮಲ್ಲಾ ರೆಡ್ಡಿ ವಿಶ್ವವಿದ್ಯಾಲಯದ ಗ್ರೌಂಡ್‌ನಲ್ಲಿ ನಡೆದಿದೆ. ಈ ಇವೆಂಟ್‌ನಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದು, ಮಲ್ಲಾರೆಡ್ಡಿ ವಿವಿ ಗ್ರೌಂಡ್ ಕಿಕ್ಕಿರಿದು ತುಂಬಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ವಿದ್ಯಾರ್ಥಿಗಳು ಸೇರಿದ್ದರು. ಅವರಲ್ಲಿ ಕೆಲವರು ಸೌಂಡ್‌ಬಾಕ್ಸ್‌ ಸಿಸ್ಟಮ್‌ ಇಟ್ಟಿದ್ದ ಸ್ಟ್ಯಾಂಡ್‌ ಮೇಲೆ ಕುಳಿತು ಕಾರ್ಯಕ್ರಮ ನೋಡುತ್ತಿದ್ದಾಗ ಈ ದುರಂತ ಸಂಭವಿಸಿದೆ.

Toxic movie event accident-Yash Toxic pre-release event-Hyderabad Toxic event tragedy-Toxic movie soundbox collapsed: ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಪ್ರಿ-ರಿಲೀಸ್ ಇವೆಂಟ್ ದುರ್ಘಟನೆ ವಿವರ ಇಲ್ಲಿದೆ ನೋಡಿ-

ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಪ್ರಿ-ರಿಲೀಸ್ ಇವೆಂಟ್ ನಿನ್ನೆ ರಾತ್ರಿ ಹೈದ್ರಾಬಾದ್‌ನಲ್ಲಿ ನಡೆದಿದ್ದು ಗೊತ್ತೇ ಇದೆ. ಈ ವೇಳೆ ದುರಂತವೊಂದು ನಡೆದಿದೆ. ಇವೆಂಟ್ ನಡೆಯುತ್ತಿದ್ದಾಗ, ಯಶ್ ಮಾತನಾಡುತ್ತಿದ್ದ ವೇಳೆ ಅಲ್ಲಿದ್ದ ಸೌಂಡ್‌ಬಾಕ್ಸ್ ಮುರಿದು ಬಿದ್ದು ದುರ್ಘಟನೆ ಸಂಭವಿಸಿದೆ. ಈ ವೇಳೆ ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅದನ್ನು ನೋಡಿದ ಯಶ್ ಸಿಕ್ಕಾಪಟ್ಟೆ ಗಾಬರಿಯಾಗಿದ್ದಾರೆ. ಜೊತೆಗೆ, ತಮ್ಮ ಮಾತನ್ನು ಅಷ್ಟಕ್ಕೇ ನಿಲ್ಲಿಸಿ, ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದ್ದಾರೆ.

ಸೌಂಡ್‌ಬಾಕ್ಸ್ ಕುಸಿದು ವಿದ್ಯಾರ್ಥಿಗಳಿಗೆ ಗಾಯವಾಗಿದ್ದನ್ನು ನಟ ಯಶ್ ಕಣ್ಣಾರೆ ಕಂಡಿದ್ದಾರೆ. ಸೌಂಡ್ ಬಾಕ್ಸ್ ಜೊತೆಗೆ ವಿದ್ಯಾರ್ಥಿಗಳು ಕೂಡ ಕೆಳಗೆ ಬಿದ್ದ ದೃಶ್ಯ ನೋಡಿ ಯಶ್ ಗಾಬರಿಯಾಗಿದ್ದಾರೆ. ತಕ್ಷಣವೇ 'ಓಯ್ ಏನೂ ತೊಂದ್ರೆ ಆಗಿಲ್ವ..? ಬಿ ಕೇರ್ ಫುಲ್..' ಎಂದು ಹೇಳಿದ ಯಶ್ ಅವರು ಸ್ವಲ್ಪ ಹೊತ್ತು ಅದನ್ನೆಲ್ಲಾ ನೋಡುತ್ತ ತಮ್ಮ ಮಾತನ್ನು ನಿಲ್ಲಿಸಿ, ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದ ಬಳಿಕ ಮತ್ತೆ ತಮ್ಮ ಮಾತನ್ನು ಮುಂದುವರೆಸಿದ್ದಾರೆ.

ಹೈದರಾಬಾದ್‌ನಲ್ಲಿ ನಡೀತಿದ್ದ ಟಾಕ್ಸಿಕ್ ಪ್ರಿ-ರಿಲೀಸ್ ಇವೆಂಟ್ ವೇಳೆ, ಅಲ್ಲಿದ್ದ ಸೌಂಡ್‌ಬಾಕ್ಸ್‌ ಮೇಲೆ ಹತ್ತಿ ಕೆಲವು ಸ್ಟೂಡೆಂಟ್ಸ್ ಈ ಕಾರ್ಯಕ್ರಮ ನೋಡುತ್ತಿದ್ದರು. ವಿದ್ಯಾರ್ಥಿಗಳ ಭಾರ ತಾಳಲಾರದ ಸೌಂಡ್‌ಬಾಕ್ಸ್ ಸ್ಟ್ಯಾಂಡ್ ಕುಸಿದು ಬಿದ್ದಿದೆ. ಆಗ ಸೌಂಡ್‌ಬಾಕ್ಸ್ ಸಿಸ್ಟಮ್ ಮೇಲೆ ಹತ್ತಿ ಕುಳಿತಿದ್ದ ಸ್ಟೂಡಂಟ್ಸ್‌ ಕೆಳಗೆ ಬಿದ್ದಿದ್ದಾರೆ. ಅವರಲ್ಲಿ ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.

ಗಾಯಾಳು ವಿದ್ಯಾರ್ಥಿಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ತಕ್ಷಣವೇ ಇವೆಂಟ್‌ನ ಪರಿಸ್ಥಿತಿ ನಾರ್ಮಲ್ ಆಗಿದೆ. ಈ ಘಟನೆಯಲ್ಲಿ ಪ್ರಜ್ಞೆ ತಪ್ಪಿದ್ದ ಓರ್ವ ಯುವತಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಯಾವುದೇ ಪ್ರಾಣಾಪಾಯ ಆಗಿಲ್ಲ. ಜೊತೆಗೆ, ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಗಳಿಗೆ ತಕ್ಷಣವೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ, ಆಗಬಹುದಾಗಿದ್ದ ಹೆಚ್ಚಿನ ಸಮಸ್ಯೆಗಳಿಮದ ಪಾರುಮಾಡಲಾಗಿದೆ.

ಈ ಕಾರ್ಯಕ್ರಮ ಮಲ್ಲಾ ರೆಡ್ಡಿ ವಿಶ್ವವಿದ್ಯಾಲಯದ ಗ್ರೌಂಡ್‌ನಲ್ಲಿ ನಡೆದಿದೆ. ಈ ಇವೆಂಟ್‌ನಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದು, ಮಲ್ಲಾರೆಡ್ಡಿ ವಿವಿ ಗ್ರೌಂಡ್ ಕಿಕ್ಕಿರಿದು ತುಂಬಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ವಿದ್ಯಾರ್ಥಿಗಳು ಸೇರಿದ್ದರು. ಅವರಲ್ಲಿ ಕೆಲವರು ಸೌಂಡ್‌ಬಾಕ್ಸ್‌ ಸಿಸ್ಟಮ್‌ ಇಟ್ಟಿದ್ದ ಸ್ಟ್ಯಾಂಡ್‌ ಮೇಲೆ ಕುಳಿತು ಕಾರ್ಯಕ್ರಮ ನೋಡುತ್ತಿದ್ದಾಗ ಈ ದುರಂತ ಸಂಭವಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Toxic Pre Release Event: ‘ನಾರ್ತ್‌-ಸೌತ್‌’ ಅಂತ ಕಿತ್ತಾಡೋದು ಬೇಡ: ತೆಲುಗು ನೆಲದಲ್ಲಿ ಯಶ್ ಹವಾ!
ಡಾರ್ಲಿಂಗ್ ಕೃಷ್ಣ-ಆರ್. ಚಂದ್ರು ಜೋಡಿಯ 'ಫಾದರ್' ಟೀಸರ್‌ಗೆ ಭಾರೀ ನಿರೀಕ್ಷೆ; ಆಗಸ್ಟ್ 25ರಂದು ಎಷ್ಟು ಗಂಟೆಗೆ, ಎಲ್ಲಿ ಬಿಡುಗಡೆ?!