
ಓವರ್ ಟು ಸೋನು ಗೌಡ
- ನನ್ನ ಸಿನಿಜರ್ನಿಯಲ್ಲಿ ಬಯೋಪಿಕ್ ಅಂತ ಸಿನಿಮಾ ಮಾಡ್ತಿರೋದು ಇದು ಮೊದಲು. ಆ ಕಾರಣಕ್ಕೆ ನನಗೆ ಇದೊಂದು ಸ್ಪೆಷಲ್ ಸಿನಿಮಾ. ಶಾಲಿನಿ ರಜನೀಶ್ ಯಾರು ಅಂತ ತಿಳಿದುಕೊಳ್ಳುವ ಕುತೂಹಲ ಶುರುವಾಗಿದ್ದೇ ನಿರ್ದೇಶಕ ನಿಖಿಲ್ ಮಂಜು ಚಿತ್ರದ ಬಗ್ಗೆ ಹೇಳಿದ ನಂತರ. ಮೊದಲು ಅವರ ಬಗ್ಗೆ ಅಲ್ಪಸ್ವಲ್ಪ ಗೊತ್ತಿದ್ದಿದ್ದು ಬಿಟ್ಟರೆ ಹೆಚ್ಚೇನು ತಿಳಿದಿರಲಿಲ್ಲ. ಮುಖಾಮುಖಿ ಭೇಟಿಯೂ ಆಗಿರಲಿಲ್ಲ. ಸಿನಿಮಾ ಒಪ್ಪಿಕೊಂಡ ನಂತರ ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಯಿತು.
- ಆರಂಭದಲ್ಲಿ ಅವರೇ ಬರೆದ ಒಂದಷ್ಟು ಆರ್ಟಿಕಲ್ಸ್ ಓದಿದೆ. ಬೇರೆಯವರಿಂದಲೂ ಒಂದಷ್ಟು ಮಾಹಿತಿ ಕಲೆ ಹಾಕಿಕೊಂಡೆ. ವರ್ಕ್ ಶಾಪ್ ನಡೆಯಿತು. ಪಾತ್ರ ಹೀಗಿರುತ್ತೆ, ಅದಕ್ಕೆ ಇಂತಿಷ್ಟೇ ನಟನೆ ಸಾಕು, ಒವರ್ ಮೇಕಪ್ ಅಂತೇನೂ ಇರೋದಿಲ್ಲ, ನಾರ್ಮಲ್ ಹೇಗಿರುತ್ತಿರೋ ಹಾಗೆಯೇ ಅಭಿನಯಿಸಿ ಅಂತೆಲ್ಲ ನಿರ್ದೇಶಕರು ಸೂಚನೆ ಕೊಟ್ಟರು.
- ಮೊದಲ ದಿನದ ಸ್ಟಡಿ ಶುರುವಾಯಿತು. ಬೆಳಗ್ಗೆಯೇ ಅವರ ಮನೆಗೆ ಹೋದೆ. ಮೇಡಂ ಆಫೀಸ್‌ಗೆ ಹೋಗುವ ಸಿದ್ಧತೆಯಲ್ಲಿದ್ದರು. ಆಫೀಸ್‌ಗೆ ಹೋಗುವ ಭರದಲ್ಲಿದ್ದರೂ ಮನೆಯಲ್ಲಿ ಎಲ್ಲವನ್ನು ಅಚ್ಚುಕಟ್ಟಾಗಿ ಜೋಡಿಸಿ, ಮಗಳ ಶಾಲೆ ದಿನಚರಿ ವಿಚಾರಿ, ಆಫೀಸ್‌ಗೆ ಹೊರಡಲು ರೆಡಿ ಆದರು. ಅಷ್ಟು ದೊಡ್ಡ ಅಧಿಕಾರಿ. ಕಿಂಚಿತ್ತು ಅಹಂಕಾರವಿಲ್ಲ. ಅರ್ಧ ದಿನ ಅವರನ್ನೇ ನೋಡುತ್ತಿದ್ದೆ. ನಂತರ ಮೀಟಿಂಗ್ ಅಂತ ಅವರು ಹೊರಟರು. ನಾನು ಅಲ್ಲಿಂದ ಬಂದೆ. ಮರು ದಿವಸ ಅರ್ಧ ದಿನ ಮನೆಯಲ್ಲೇ ಅವರೊಂದಿಗೆ ಕಳೆದೆ. ಪಾತ್ರಕ್ಕೆ ಏನು ಬೇಕಿತ್ತೋ ಅಷ್ಟನ್ನು ನೋಡಿ ತಿಳಿದುಕೊಂಡೆ. ಒಟ್ಟು ನಾಲ್ಕು ದಿನ ಅವರೊಂದಿಗೆ ಕಳೆದೆ.
- ಪಾತ್ರಕ್ಕೆ ಹೆಚ್ಚೇನು ಬೇಕಿರಲಿಲ್ಲ. ಅವರನ್ನೇ ಇಮಿಟೇಟ್ ಮಾಡುವ ಅವಶ್ಯಕತೆಯೂ ಇರಲಿಲ್ಲ. ಒಬ್ಬ ಐಎಎಸ್ ಅಧಿಕಾರಿ ಹೇಗೆಲ್ಲ ಇರುತ್ತಾರೋ ಹಾಗಿದ್ದರೆ ಸಾಕು ಅನ್ನೋದು ನಿರ್ದೇಶಕರ ಸಲಹೆ ಆಗಿತ್ತು. ಅಷ್ಟನ್ನೇ ನಾನು ನೋಡಿ ತಿಳಿದುಕೊಳ್ಳಬೇಕಿತ್ತು.
- ಚಿತ್ರದಲ್ಲಿ ನಾನು ಶಾಲಿನಿ ರಜನೀಶ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನಿಜ, ಆದ್ರೆ ಹೆಚ್ಚೇನು ಇಮಿಟೇಟ್ ಮಾಡುವುದಕ್ಕೆ ಹೋಗಿಲ್ಲ. ಪಾತ್ರದ ಮೇಕ್ ಒವರ್ ಅಂತ ಬಂದಾಗ ಅವರ ವ್ಯಕ್ತಿತ್ವ ಹೇಗೆ ಅನ್ನೋದನ್ನು ನೋಡಿ ತಿಳಿದುಕೊಂಡಿದ್ದು ಬಿಟ್ಟರೆ, ಈ ಪಾತ್ರದೊಳಗೆ ನನ್ನದೇ ರೀತಿಯಲ್ಲಿ ಕಾಣಿಸಿಕೊಂಡಿದ್ದೇನೆ.
ಮೊದಲು ಶಿಸ್ತು ಇರಬೇಕು
ಏನಾದ್ರೂ ಸಾಧಿಸಬೇಕು ಅಂತಂದುಕೊಂಡರೆ ಮೊದಲು ಶಿಸ್ತು ಇರಬೇಕು ಅಂತ ಅವರೊಂದು ಮಾತು ಹೇಳಿದ್ದರು. ಅದು ನನಗೆ ಹೆಚ್ಚು ಹಿಡಿಸಿತು. ಬೆಳಗ್ಗೆ ಅವರು ೫ ಗಂಟೆಗೆ ಏಳುತ್ತಾರೆ. ಅಲ್ಲಿಂದ ಅವರ ನಿತ್ಯದ ದಿನಚರಿ ಶುರುವಾಗುತ್ತದೆ. ಮನೆಯಲ್ಲಿ ಅವರೇ ತಿಂಡಿ ತಯಾರಿಸುತ್ತಾರೆ. ಅವರನ್ನು ನಾನು ನೋಡಿ ಮೊದಲು ಕಲಿತುಕೊಂಡಿದ್ದು ಅದು. ಸಾಮಾನ್ಯವಾಗಿ ಶೂಟಿಂಗ್ ಇಲ್ಲ ಅಂದ್ರೆ ನಾನು ಬೆಳಗ್ಗೆ ಏಳುವುದು ೮ ಗಂಟೆ ಆಗುತ್ತಿತ್ತು. ಅವರನ್ನು ನೋಡಿದಾಗ ನನ್ನ ಲೈಫ್ ಸ್ಟೈಲ್ ಕೂಡ ಚೇಂಜ್ ಆಗಿದೆ. ಈಗ ೫ ಗಂಟೆಗೆ ಏಳುವುದು ರೂಢಿ ಆಗಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.