
ನೀ ಸಿಗದೇ ಬಾಳೊಂದು ಬಾಳೆ ಕೃಷ್ಣಾ ಎಂದು ಪಲ್ಲವಿ ಹಾಡುತ್ತಿದ್ದರೆ ಚಪ್ಪಾಳೆಗಳ ಸುರಿಮಳೆಯೇ ಬೀಳುತ್ತಿತ್ತು. ಇಂದು ಸಹ ಅಂತರ್ಜಾಲದಲ್ಲಿ ಸಿಗುವ ಹಾಡುಗಳನ್ನು ಅದೆಷ್ಟೋ ಮಂದಿ ಗುನುಗುತ್ತಲೇ ಇರುತ್ತಾರೆ. ಭಾವಗೀತೆಗಳಿಗೆ ಜೀವ ತುಂಬುವ ಕಂಠ ಸಿರಿಗೆ ಮೆಚ್ಚುಗೆ ಸೂಚಿಸದೆ ಇರಲು ಸಾಧ್ಯವೇ?
ಆದರೆ ಅದೇ ಎಂ ಡಿ ಪಲ್ಲವಿ ಹಾಡಿರುವ ಗೀತೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ವೇದಿಕೆ ನಿರ್ಮಾಣ ಮಾಡುತ್ತಿದೆ. ಕನ್ನಡದ ಮುಂದಿನ ಸುಗಮ ಸಂಗೀತ ಹೀಗೆ ಇರಬಹುದೆ? ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ? ಒಟ್ಟಿನಲ್ಲಿ ಇಂಗ್ಲಿಷ್ ಪದಗಳನ್ನು ಜೋಡಿಸಿರುವ ಪದ್ಯ ಆಧುನಿಕತೆಯ ಪ್ರೇಮದ ಕತೆ ಹೇಳಲು ಹೋಗಿದೆ. ಸ್ಟೇಶನ್, ಪೋನು ಎಲ್ಲವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ವಾಕ್ಯಗಳೆ ತುಂಬಿರುವ ಹಾಡನ್ನು ನೀವು ಕೇಳಿ.. ಕೇಳುವುದು ಮಾತ್ರ ಅಲ್ಲ ಅಭಿಪ್ರಾಯವೊಂದನ್ನು ದಾಖಲು ಮಾಡಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.