ಸೋಷಿಯಲ್ ಮಿಡಿಯಾ ಸ್ಟಾರ್ ಖಾತೆಯಲ್ಲಿ ಫೋಟೋಗಳು ಮಾಯ! ಆಗಿದ್ದೇನು?

By Web Desk  |  First Published Jan 14, 2019, 8:42 AM IST

ಆನ್‌ಲೈನ್ ಜಗತ್ತಿನಲ್ಲಿ ಫೇಮಸ್ ಆಗಿದ್ದರು ಇವರು. ಆದರೆ, ಆ ಫೇಮ್‌ನಿಂದಾನೇ ಅಪ್ಲೋಡ್ ಮಾಡಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ರಾ? ಏನಿದು? ಓದಿ ಈ ಲೇಖನ.


ಡಬ್‌ಸ್ಮಾಷ್, ಮ್ಯೂಸಿಕಲಿ ಹಾಗೂ ಟಿಕ್‌ಟಾಕ್ ಜಾಲಗಳಲ್ಲಿ ಎಲ್ಲರನ್ನೂ ಮೋಡಿ ಮಾಡಿದ್ದವರು ದಿಶಾ ಮದನ್. ಎಲ್ಲರಿಗೂ ಒಂದು ರೀತಿಯಲ್ಲಿ ಸ್ಫೂರ್ತಿಯಾಗಿದ್ದ ಇವರೀಗ ಅಚ್ಚರಿಯಾಗುವಂಥ ಕೆಲಸ ಮಾಡಿದ್ದಾರೆ. 5 ಲಕ್ಷ 76 ಸಾವಿರ ಫಾಲೂಯರ್ಸ್ ಇರುವ ತಮ್ಮ ಅಫಿಷಿಯಲ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಎಲ್ಲ ಫೋಟೋಗಳನ್ನೂ ಡಿಲೀಟ್ ಮಾಡಿದ್ದಾರೆ!

ಡ್ಯಾನ್ಸಿಂಗ್ ಸ್ಟಾರ್ಸ್ ರಿಯಾಲಿಟಿ ಶೋ ಹಾಗೂ 'ಕುಲವಧು' ಧಾರಾವಾಹಿ ಮೂಲಕ ಚಿರಪರಿಚಿತವಾದ ದಿಶಾ, ಆನ್‌ಲೈನ್ ಮೀಡಿಯಾದಲ್ಲಿ ಹಾಡಿಗೆ ಹಜ್ಜೆ ಹಾಕುತ್ತಾ, ಶಾಲಾ-ಕಾಲೇಜುಗಳಿಗೆ ಗೆಸ್ಟ್ ಆಗಿ ಹೋಗುತ್ತಿದ್ದವರು.

Tap to resize

Latest Videos

ಅಲ್ಲದೇ ಇತ್ತೀಚೆಗೆ ಶಿವರಾಜ್ ಕುಮಾರ್ ನಿರ್ಮಾಣದಲ್ಲಿ ಚಿತ್ರೀಕರಣಗೊಂಡ ‘ಹೇಟ್ ಯು ರೋಮಿಯೋ’ ವೆಬ್ ಸೀರಿಸ್‌ನಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಾದ ನಂತರ ‘PRK Productions’ ಮೂಲಕ ತೆರೆ ಮೇಲೆ ಮಿಂಚಲು ಸಜ್ಜಾಗುತ್ತಿದ್ದಾರೆ. ಅದೂ ದಾನೀಶ್ ಸೇಠ್‌ಗೆ ಜೋಡಿಯಾಗಿ.

ಇಷ್ಟೆಲ್ಲಾ ಫೇಮಸ್ ಆದ ದಿಶಾ ಇದಕ್ಕಿದ್ದಂತೆ ತಮ್ಮ ಖಾತೆಯಲ್ಲಿದ್ದ ಫೋಟೋ ಹಾಗೂ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ, ಇದರಿಂದ ಬೇಸರ ಮಾಡಿಕೊಂಡಿರುವ ಅವರ ಅಭಿಮಾನಿಗಳು, ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಫೇಮ್ ಆದ ಕಾರಣ ಸೋಷಿಯಲ್ ಮೀಡಿಯಾವನ್ನು ಮತ್ತೊಮ್ಮೆ ಸೂಕ್ತ ರೀತಿಯಲ್ಲಿ ಹ್ಯಾಂಡಲ್ ಮಾಡುವ ಐಡಿಯಾವೋ ಅಥವಾ ಪಬ್ಲಿಕ್ ಅಪಿಯರೆನ್ಸ್ ವಿಭಿನ್ನವಾಗಿರಬೇಕು ಅಂತೇನಾದ್ರೂ ಹೀಗೆ ಮಾಡಿದ್ರಾ? ಅವರೇ ಉತ್ತರಿಸಿದ್ದರೆ ಒಳ್ಳೆಯದಿತ್ತು.

click me!