
ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಆರಂಭವಾದ ಶೋ ಕನ್ನಡ ಕೋಗಿಲೆ. ಮೊದಲ ಸೀಸನ್‌ಗೆ ಶಿವಮೊಗ್ಗ, ಮಂಗಳೂರು, ಮೈಸೂರು ಹಾಗೂ ಬೆಂಗಳೂರಿನಲ್ಲಿ ಆಡಿಷನ್ ನಡೆದಿತ್ತು. ಇದರಿಂದ ಒಟ್ಟು 42 ಗಾಯಕರನ್ನು ಆಯ್ಕೆ ಮಾಡಿ ಅದರಲ್ಲಿ 15 ಜನರನ್ನು ವೇದಿಕೆಗೆ ಕರೆ ತಂದು, ಸ್ಪರ್ಧೆ ನಡೆಸಿದ್ದರು. ಅಂತಿಮವಾಗಿ ಚಂದನ್ ಶೆಟ್ಟಿ , ಅರ್ಚನಾ ಉಡುಪ, ಸಾಧು ಕೋಕಿಲಾ ಹಾಗೂ ಉಷಾ ಉತ್ತಪ್ಪ ಸ್ಪರ್ಧಿಗಳನ್ನು ಆರಿಸಿದ್ದರು!
2ನೇ ಸೀಸನ್ ಯಾವಾಗಪ್ಪ ಶುರುವಾಗುತ್ತೆ ಎಂದು ಆತುರದಿಂದ ಕಾಯುತ್ತಿದ್ದ ಕಲಾ ರಸಿಕರಿಗೆ ಸಂಕ್ರಾತಿಯಂದು ಸಿಹಿ ಸುದ್ದಿ ಕಾದಿದೆ. 2ನೇ ಸೀಸನ್ ಆಡಿಷನ್ ಶುರುವಾಗಿದ್ದು, ಬೆಂಗಳೂರಿನಲ್ಲಿ ಜ.13, ಭಾನುವಾರದಂದು ನಡೆಯಲಿದೆ. ತೀರ್ಪುಗಾರರಾಗಿ ಅಖಿಲಾ ಪಜಮಣ್ಣು ಹಾಗೂ ಇತರೆ ಕಲಾವಿದರು ಇರುತ್ತದೆ.
ನಿರ್ಮಲಾ ಪ್ರೊಡಕ್ಷನ್‌ನಲ್ಲಿ ಮೂಡಿ ಬರುತ್ತಿರುವ ಕನ್ನಡ ಕೋಗಿಲೆ ಈಗಾಗಲೇ ಹಲವು ಸ್ಪರ್ಧಿಗಳಿಗೆ ಸಿನಿಮಾಗೂ ಎಂಟ್ರಿ ಕೊಡಲು ಸಹಕರಿಸಿದೆ. ಮೊದಲ ಸೀಸನ್‌ನ ಮೊದಲೆರಡು ವಾರದಲ್ಲೇ ಮಹದೇವಸ್ವಾಮಿ ಗಾಯನಕ್ಕೆ ಫಿದಾ ಆಗಿದ್ದ ನಿರ್ದೇಶಕ ರಿಷಿ ವೇದಿಕೆ ಮೇಲೆ ಬಂದು, ಅಡ್ವಾನ್ಸ್ ಪೇ ಮಾಡಿದ್ದರು.
ಸೀಸನ್ 1 ಗೆದ್ದ ದೊಡಪ್ಪ ಬಹಳಷ್ಟು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಈ ಸೀಸನ್‌ನಲ್ಲಿ ತೀರ್ಪುಗಾರರಾಗಿ ಯಾರಿರುತ್ತಾರೆ? ಯಾರು ನಿರೂಪಿಸುತ್ತಾರೆಂದು ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.