
ಮುಂಬೈ, ಜೂನ್: 14: ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಹಾಗೂ ಕಿರುತೆರೆ ಸ್ಟಾರ್ ಸಾರಾ ಖಾನ್ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾಳೆ. ಹಿಂದಿ ಬಿಗ್ ಬಾಸ್ ಮನೆಯಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದ ಸಾರಾ ಈ ಬಾರಿ ಬಾತ್ ಟಬ್ ನಲ್ಲಿ ಅರೆ ಬೆತ್ತಲೆ ಪೋಸ್ ಕೊಟ್ಟಿದ್ದಾರೆ!
ಅಷ್ಟಕ್ಕೂ ಸಾರಾ ಖಾನ್ ಬೇಕಂತಲೇ ಈ ವಿಡಿಯೋ ಅಪ್ ಲೋಡ್ ಮಾಡಿಲ್ಲ. ಶ್ರೀಲಂಕಾ ಪ್ರವಾಸದಲ್ಲಿದ್ದ ಸಾರಾ ಖಾನ್ ಮತ್ತು ಸಹೋದರಿ ಆರ್ಯಾ ಖಾನ್ ಸಖತ್ ಎಂಜಾಯ್ ಮಾಡಿದ್ದರು. ಈ ವೇಳೆ ಸಾರಾ ಬಾತ್ ಟಬ್ ನಲ್ಲಿದ್ದ ದೃಶ್ಯಗಳನ್ನು ಸಹೋದರಿ ಮೊಬೈಲ್ ನಲ್ಲಿ ಚಿತ್ರಿಸಿಕೊಂಡಿದ್ದರು.
ಸೈಫ್ ಪುತ್ರಿಯ ಮೈಮಾಟಕ್ಕೆ ಮಾರುಹೋದ ಬಾಲಿವುಡ್
ಕುಡಿದ ಮತ್ತಿನಲ್ಲಿದ್ದ ಆರ್ಯಾ ಖಾನ್ ವಿಡಿಯೋವನ್ನು ಯಥಾವತ್ ಆಗಿ ಇಸ್ಟ್ರಾಗ್ರಾಮ್ ಗೆ ಅಪ್ ಲೋಡ್ ಮಾಡಿದ್ದಾಳೆ. ಸಾರಾ ಖಾನ್ ಎಚ್ಚೆತ್ತುಕೊಳ್ಳುವಷ್ಟರಲ್ಲಿ ವಿಡಿಯೋ ವೈರಲ್ ಆಗಿದೆ. ನತರ ಸಹೋದರಿಯರಿಬ್ಬರೂ ಸೇರಿ ವಿಡಿಯೋ ಡಿಲೀಟ್ ಮಾಡಿದ್ದಾರೆ. ವಿಡಿಯೋ ಇದೀಗ ಸಾಮಾಜಿಕ ತಾಣಿಗರ ಕೈಸೇರಿದ್ದು ಹರಿದಾಡ್ತಾ ಇದೆ. ನನ್ನ ಸಹೋದರಿ ಕುಡಿದ ಮತ್ತಿನಲ್ಲಿ ಎಡವಟ್ಟು ಮಾಡಿದ್ದು ಇದು ‘ತಮಾಷೆಗಾಗಿ ಮಾಡಿದ ಕೆಲಸ’ ಎಂದು ಮಾಧ್ಯವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸಾರಾ ಖಾನ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.