ಇಪ್ಪತ್ತೆರಡು ವರ್ಷಗಳ ನಂತರ ಬಂದು ಭಗವನ್ 56ನೇ ಸಿನಿಮಾ

Published : Oct 30, 2018, 09:14 AM IST
ಇಪ್ಪತ್ತೆರಡು ವರ್ಷಗಳ ನಂತರ ಬಂದು ಭಗವನ್ 56ನೇ ಸಿನಿಮಾ

ಸಾರಾಂಶ

ಡಾ.ರಾಜ್‌ಕುಮಾರ್ ಅವರ ಜತೆ ಸೇರಿ ಕಸ್ತೂರಿ ನಿವಾಸದಲ್ಲಿ ಗೊಂಬೆ ಆಡಿಸಿದಾಗ ದೊರೆ ಭಗವಾನ್ ಜೋಡಿ ಇತ್ತು. ಈಗ ಅದೇ ‘ಆಡುವ ಗೊಂಬೆ’ ಹೆಸರಿನಲ್ಲಿ ಸಿನಿಮಾ ಮಾಡುವ ಹೊತ್ತಿಗೆ ಭಗವಾನ್ ಮಾತ್ರ ಇದ್ದಾರೆ. 

ಇಪ್ಪತ್ತೆರಡು ವರ್ಷಗಳ ನಂತರ ಈ 56ರ ಇಳಿ ವಯಸ್ಸಲ್ಲಿ ಅವರು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಆದರೆ, ಮೊನ್ನೆ ಅವರನ್ನು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ನೋಡಿದಾಗ ವಯಸ್ಸಾಗಿದೆ ಎಂದು ಯಾರೂ ಒಪ್ಪುವಂತಿರಲಿಲ್ಲ. ಮೊದಲ ಸಿನಿಮಾ ನಿರ್ದೇಶಕನಂತೆ ಉತ್ಸಾಹದಿಂದ ಓಡಾಡುತ್ತಿದ್ದರು. ಅವರದ್ದೇ ನಿರೂಪಣೆ ಬೇರೆ. ಜತೆಗೆ ಶಿವಣ್ಣ ಎಂಬ ಎನರ್ಜಿಟಿಕ್ ಹೀರೋ ಅತಿಥಿಯಾಗಿ ಬಂದಿದ್ದು ಮತ್ತೊಂದು ಹೈಲೈಟ್.

ಅವತ್ತು ಭಗವಾನ್ ಅವರ ‘ಆಡುವ ಗೊಂಬೆ’ ಚಿತ್ರದ ಆಡಿಯೋ ಬಿಡುಗಡೆ. ಹಾಡುಗಳು ಮತ್ತು ಮೂರು ಟೀಸರ್‌ಗಳನ್ನು ಶಿವಣ್ಣ, ಕರ್ನಾಚಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ವಿಧಾನ ಪರಿಷತ್ ಸದಸ್ಯ ಟಿಎ ಶರವಣ ಮತ್ತು ಕೆನಡಾದಿಂದ ಆಗಮಿಸಿದ್ದ ಮುರಳಿ-ಬೃಂದಾ ದಂಪತಿಗಳು ಬಿಡುಗಡೆ ಮಾಡಿದರು. ಭಗವಾನ್ ಜತೆಗೂಡಿ ಡಾ. ವಿ. ನಾಗೇಂದ್ರ ಪ್ರಸಾದ್, ಕವಿರಾಜ್ ಹಾಡುಗಳನ್ನು ರಚಿಸಿದ್ದಾರೆ.

ಈ ಹಾಡುಗಳಿಗೆ ಶಿವಣ್ಣ, ರಾಘವೇಂದ್ರ ರಾಜ್ ಕುಮಾರ್, ಪುನೀತ್, ವಿಜಯ್ ರಾಘವೇಂದ್ರ ಧ್ವನಿಯಾಗಿದ್ದಾರೆ. ಅನಂತನಾಗ್, ಸಂಚಾರಿ ವಿಜಯ್, ನಿರೋಷ ಶೆಟ್ಟಿ, ರಿಷಿತಾ ಮಲ್ನಾಡ್ ಮತ್ತು ದಿಶಾ ಕೃಷ್ಣಯ್ಯ, ಸುಧಾ ಬೆಳವಾಡಿ, ಖಷಿ ಮೋಹಾತೋ, ಅನಿರುದ್ಧ, ಮಂಜುನಾಥ್, ಪೂಜಾ ಅಭಿನಯಿಸಿರುವ ಈ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನ ಭಗವಾನ್ ಅವರದ್ದೇ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಹೊಸಬೆಳಕು ಚಿತ್ರದಲ್ಲಿ ಡಾ ರಾಜ್‌ಕುಮಾರ್ ಹಾಡಿರುವ ‘ವಿಧಿಯಾಟವೇನೋ ಬಲ್ಲವರು ಯಾರು? ನಾಳೆಯು ಏನೆಂದು ಹೇಳುವರ‌್ಯಾರು’ ಎನ್ನುವ ಸಾಲಿನಂತೆ ಚಿತ್ರದ ಮೂರು ಮುಖ್ಯ ಪಾತ್ರಗಳ ಜೀವನದಲ್ಲಿ ವಿಧಿಯಾಟ ಹೇಗಿರುತ್ತದೆಂಬುದನ್ನು ಹೇಳುತ್ತ ಮೇಲಿರೋನು ನಮ್ಮನ್ನು ಆಡಿಸಿದಂತೆ ಆಡಬೇಕು ಎನ್ನುವ ಫಿಲಾಸಫಿಯನ್ನು ಹೇಳುವಂತಹ ಸಿನಿಮಾ ಇದು ಎಂಬುದು ಭಗವಾನ್ ವಿವರಣೆ. ವಯಲಿನ್ ಹೇಮಂತ್ ಕುಮಾರ್ ಸಂಗೀತವಿದೆ. ವೇಣುಗೋಪಾಲ್ ನಿರ್ಮಾಪಕರು. ಎ ಶಿವಪ್ಪ, ಚಾಮುಂಡೇಶ್ವರಿ ಸ್ಟುಡಿಯೋದ ರಾಜಲಕ್ಷ್ಮೀ ಶಡಗೋಪಾನ್ ಸಹ ನಿರ್ಮಾಪಕರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್‌ ತೂಗುದೀಪ The Devil Movie ವಿಮರ್ಶೆ ಮಾಡೋ ಹಾಗಿಲ್ಲ, ಕಾಮೆಂಟ್ಸ್‌ ಮಾಡಂಗಿಲ್ಲ: ಕೋರ್ಟ್‌ನಿಂದ ತಡೆ
1000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಡೆವಿಲ್ ರಿಲೀಸ್: ಜೈಲಿನಿಂದಲೇ ಅಭಿಮಾನಿಗಳಿಗೆ ಪತ್ರ ಬರೆದ ದರ್ಶನ್‌