ದಂಪತಿಗಳನ್ನು ರೋಮಾಂಚನಗೊಳಿಸುವ ಸಿಂಪಲ್ ಸುನಿ ಸಾಂಗ್

Published : Nov 28, 2017, 06:03 PM ISTUpdated : Apr 11, 2018, 01:03 PM IST
ದಂಪತಿಗಳನ್ನು ರೋಮಾಂಚನಗೊಳಿಸುವ  ಸಿಂಪಲ್ ಸುನಿ ಸಾಂಗ್

ಸಾರಾಂಶ

 ಕಚಗುಳಿ ಇಡುವಂತಹ ಮಾತುಗಳಿಂದ ಚಿತ್ರದ ಪ್ರತಿ ಪಾತ್ರವನ್ನು ನಿರೂಪಿಸಲಾಗಿದೆ. ನನ್ನ ಸಿನಿಮಾ ಹಾಗೂ ಗಣೇಶ್ ಮೇಲೆ ಅಭಿಮಾನ ಇಟ್ಟುಕೊಂಡು ಬರುವ ಪ್ರೇಕ್ಷಕರಿಗೆ ನಿರಾಸೆ ಮಾಡದ ಶುದ್ಧ ಪ್ರೇಮ ಕತೆಯ ಕೌಟುಂಬಿಕ ಸಿನಿಮಾ’ ಎಂಬುದು ನಿರ್ದೇಶಕ ಸುನಿ ಮಾತು.

ಸಿಂಪಲ್ ಸುನಿ ನಿರ್ದೇಶನದ ‘ಚಮಕ್’ ಚಿತ್ರದ ಟೀಸರ್ ಅನಾವರಣಗೊಂಡಿದೆ. ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿರುವ ಈ ಚಿತ್ರದ ಬಗ್ಗೆ ಈಗಾಗಲೇ ದೊಡ್ಡ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಅದಕ್ಕೆ ಕಾರಣಕ್ಕೆ ಗೋಲ್ಡನ್, ಸಿಂಪಲ್ ಸುನಿ ಹಾಗೂ ರಶ್ಮಿಕಾ ಕಾಂಬಿನೇಷನ್.  ಈಗಷ್ಟೇ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಗಣೇಶ್ ಮದುಮಗನ ಗೆಟಪ್‌ನಲ್ಲಿ, ರಶ್ಮಿಕಾ ಮಂದಣ್ಣ ಗೃಹಿಣಿ ಪಾತ್ರದಲ್ಲಿ ಗಮನ ಸೆಳೆಯುತ್ತಿದ್ದಾರೆ. ಎಂದಿನಂತೆ ಗಣೇಶ್ ಅವರ ಈ ಚಿತ್ರವೂ ಈ ವರ್ಷದ ಕೊನೆಯಲ್ಲಿ ತೆರೆಗೆ ಬರುವ ಸಿದ್ಧತೆಯಲ್ಲಿದೆ. ಸದ್ಯಕ್ಕೆ ಟೀಸರ್ ಬಿಟ್ಟಿರುವ ಸುನಿ, ಮುಂದೆ ಆಡಿಯೋ ಬಿಡುಗಡೆಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ‘ಲವ್ ಮತ್ತು ಫ್ಯಾಮಿಲಿ ಸ್ಟೋರಿ. ಸಂಭಾಷಣೆಗಳು

ತುಂಬಾ ಹೊಸದಾಗಿರುತ್ತವೆ. ಕಚಗುಳಿ ಇಡುವಂತಹ ಮಾತುಗಳಿಂದ ಚಿತ್ರದ ಪ್ರತಿ ಪಾತ್ರವನ್ನು ನಿರೂಪಿಸಲಾಗಿದೆ. ನನ್ನ ಸಿನಿಮಾ ಹಾಗೂ ಗಣೇಶ್ ಮೇಲೆ ಅಭಿಮಾನ ಇಟ್ಟುಕೊಂಡು ಬರುವ ಪ್ರೇಕ್ಷಕರಿಗೆ ನಿರಾಸೆ ಮಾಡದ ಶುದ್ಧ ಪ್ರೇಮ ಕತೆಯ ಕೌಟುಂಬಿಕ ಸಿನಿಮಾ’ ಎಂಬುದು ನಿರ್ದೇಶಕ ಸುನಿ ಮಾತು. ವಿಶೇಷ ಅಂದರೆ ಈ ಚಿತ್ರದ ಮೂಲಕ ಐದು ಮಂದಿ ಹೊಸ ಗೀತರಚನೆಕಾರರನ್ನು ಸಿಂಪಲ್ ಸುನಿ ಪರಿಚಯಿಸುತ್ತಿದ್ದಾರೆ. ವಿಜೇತ್,ಧೀರಜ್, ಸೌಂದರ್ಯ, ಅರ್ಜುನ್ ಹಾಗೂ ವಿಶ್ವಜಿತ್ ರಾವ್ ಅವರು ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಒಂದೇ ಚಿತ್ರದಲ್ಲಿ ಐದು ಮಂದಿ ಹೊಸ ಗೀತ ರಚನಕಾರರನ್ನು ಪರಿಚಯಿಸುವ ಮೂಲಕ ಸುನಿ ಬೇರೆಯವರಿಗೂ ಮಾದರಿಯಾಗಿದ್ದಾರೆ.?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!