
ಬಾಲಿವುಡ್‌ನ ಕ್ಯೂಟ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಸದ್ಯ ತಮ್ಮ ಮುದ್ದಿನ ಮಗಳು ಸರಾಯಾ ಜೊತೆ ಮಾಲ್ಡೀವ್ಸ್‌ನ ಸುಂದರ ಕಡಲತೀರದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಶನಿವಾರ, ಕಿಯಾರಾ ತಮ್ಮ ಈ ವೆಕೇಷನ್‌ನ ಕೆಲವು ಮುದ್ದಾದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಕಿಯಾರಾ ಅಡ್ವಾಣಿಯ 'ಮಾಮ್ ಎರಾ'
ತಮ್ಮ 'ಮಾಮ್ ಎರಾ' ಅಂದ್ರೆ ತಾಯ್ತನದ ಈ ಹಂತವನ್ನು ಎಂಜಾಯ್ ಮಾಡುತ್ತಿರುವ ಬಗ್ಗೆ ಕಿಯಾರಾ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಒಂದು ಫೋಟೋದಲ್ಲಿ, ವಾರ್ಡ್‌ರೋಬ್‌ನ ಒಂದು ಬದಿಯಲ್ಲಿ ಕಿಯಾರಾ ಅವರ ಬಟ್ಟೆಗಳಿದ್ದರೆ, ಇನ್ನೊಂದು ಬದಿಯಲ್ಲಿ ಪುಟಾಣಿ ಮಗಳ ಪುಟ್ಟ ಪುಟ್ಟ ಬಟ್ಟೆಗಳು ತುಂಬಿಕೊಂಡಿವೆ.
ಮತ್ತೊಂದು ಫೋಟೋದಲ್ಲಿ, ಟೇಬಲ್ ಮೇಲೆ ಇಟ್ಟಿರುವ ಕಿಯಾರಾ ಅವರ ಸ್ಟೈಲಿಶ್ ಸನ್‌ಗ್ಲಾಸ್ ಪಕ್ಕದಲ್ಲೇ ಸರಾಯಾಳ ಕ್ಯೂಟ್ ಪುಟ್ಟ ಕನ್ನಡಕವೂ ಇದೆ. ಪುಟಾಣಿ ಸರಾಯಾ ಬಣ್ಣಬಣ್ಣದ ಚಿತ್ರಗಳ ಪುಸ್ತಕವನ್ನು ಓದುತ್ತಿರುವ ಮತ್ತೊಂದು ಮನಮುಟ್ಟುವ ಫೋಟೋವನ್ನೂ ಅವರು ಶೇರ್ ಮಾಡಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ಪ್ರಣಯದ ಕ್ಷಣಗಳು
ಮಗಳ ಲಾಲನೆ-ಪಾಲನೆಯ ಜೊತೆಗೆ, ಈ ಜೋಡಿ ತಮ್ಮ ಪ್ರೀತಿಯ ಕ್ಷಣಗಳಿಗೂ ಸಮಯ ಮೀಸಲಿಟ್ಟಿದ್ದಾರೆ. ಒಂದು ವಿಡಿಯೋದಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ಒಟ್ಟಿಗೆ ಡ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ. ಈ ಪೋಸ್ಟ್‌ಗೆ, "Sun-kissed days, salty hair, and a heart full of peace with the loves of my life," (ಸೂರ್ಯನ ಬಿಸಿಲು, ಉಪ್ಪಾದ ಕೂದಲು ಮತ್ತು ನನ್ನ ಪ್ರೀತಿಪಾತ್ರರೊಂದಿಗೆ ಶಾಂತಿಯಿಂದ ತುಂಬಿದ ಹೃದಯ) ಎಂದು ಕಿಯಾರಾ ಕ್ಯಾಪ್ಶನ್ ನೀಡಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ದಂಪತಿಗೆ ಸರಾಯಾ ಜನಿಸಿದ್ದಳು. ಮಗಳ ಜನನದ ಸುದ್ದಿಯನ್ನು ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿ ಪೋಸ್ಟ್ ಮೂಲಕ ಹಂಚಿಕೊಂಡಿದ್ದರು. "Our hearts are full and our world forever changed. We are blessed with a Baby Girl. KIARA & SIDHARTH," (ನಮ್ಮ ಹೃದಯಗಳು ತುಂಬಿವೆ ಮತ್ತು ನಮ್ಮ ಜಗತ್ತು ಶಾಶ್ವತವಾಗಿ ಬದಲಾಗಿದೆ. ನಮಗೆ ಹೆಣ್ಣು ಮಗು ಜನಿಸಿದೆ. ಕಿಯಾರಾ ಮತ್ತು ಸಿದ್ಧಾರ್ಥ್) ಎಂದು ಅವರು ಬರೆದುಕೊಂಡಿದ್ದರು. ಇನ್ನು ಸಿದ್ಧಾರ್ಥ್ ಮತ್ತು ಕಿಯಾರಾ ತಮ್ಮ ಮಗಳು ಸರಾಯಾಳ ಮುಖವನ್ನು ಇನ್ನೂ ಬಹಿರಂಗಪಡಿಸಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.