
ಬೆಂಗಳೂರು, [ಸೆ.23]: ಕಳೆದ ಹದಿನೈದು ದಿನಗಳಿಂದ ರಾಜ್ಯ ಕಾಂಗ್ರೆಸ್ ನಾಯಕ ಬಿಕ್ಕಟ್ಟು ಬಗೆಹರಿಯುತ್ತಿಲ್ಲ. ಅಂತಿಮವಾಗಿ ಅತೃಪ್ತ ಶಾಸಕರನ್ನ ತೃಪ್ತಿಪಡಿಸಲು ಕೈ ಹೊಸ ಸೂತ್ರ ಸಿದ್ಧಪಡಿಸಿದೆ.
ಕಾಂಗ್ರೆಸ್ ನಲ್ಲಿ ಎದ್ದಿರುವ ಬಂಡಾಯ ಶಮನ ಮಾಡಲು ಸನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರ ಹೆಗಲಿಗೆ ವಹಿಸಲಾಗಿದೆ. ಹೀಗಾಗಿ ಅವರು ಅತೃಪ್ತರ ಬಂಡಾಯ ಶಮನಕ್ಕೆ ಕೆಲ ಸೂತ್ರಗಳನ್ನು ಸಿದ್ಧಪಡಿಸಿದ್ದು, ಆ ಸಿದ್ಧ ಸೂತ್ರಗಳನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ.
ಸಿದ್ದು ರೆಡಿ ಮಾಡಿರುವ ಸೂತ್ರಗಳನ್ನು ಇಂದು ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಮುಂದೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಹಾಗಾದ್ರೆ ಏನದು ಸಿದ್ದರಾಮಯ್ಯ ಸಿದ್ಧ ಸೂತ್ರ ?
*ಐದು ವರ್ಷ ಅಧಿಕಾರ ಅನುಭವಿಸಿದ ಸಚಿವರಿಗೆ ಕೋಕ್.
*ಹಿಂದಿನ ಸರ್ಕಾರದಲ್ಲಿ ಐದು ವರ್ಷ ಅಧಿಕಾರ ಅನುಭವಿಸಿದವರಿಗೆ ಕೋಕ್ ನೀಡಲು ಕೈ ಚಿಂತನೆ.
*ಹಿಂದಿನ ಐದು ವರ್ಷ ಹಾಗೂ ಮೈತ್ರಿ ಸರ್ಕಾರದಲ್ಲೂ ಮಂತ್ರಿ ಆದವರಿಗೆ ಕೋಕ್ ನೀಡಿ ಅತೃಪ್ತರಿಗೆ ಮಣೆ.
*ಅತೃಪ್ತರಲ್ಲಿ ಹಿರಿತನ, ಜಾತಿ, ಪ್ರಾದೇಶಿಕತೆ, ಪ್ರಭಾವ ಜೊತೆಗೆ ಲೋಕಸಭೆ ಚುನಾವಣೆಗೆ ಅನುಕೂಲವಾಗುವ ಶಾಸಕರಿಗೆ ಮಣೆ.
*ಸಂಪುಟ ವಿಸ್ತರಣೆ ವೇಳೆ ಕೆಲವರಿಗೆ ಕೋಕ್ ನೀಡಿ ಅತೃಪ್ತರ ಸೇರ್ಪಡೆ.
*ಖಾಲಿ ಇರುವ 6 ಸ್ಥಾನ ಹಾಗೂ ನಾಲ್ವರನ್ನ ಸಂಪುಟದಿಂದ ಕೆಳಗಿಳಿಸಿ ಒಟ್ಟು 10 ಶಾಸಕರಿಗೆ ಸಚಿವ ಸ್ಥಾನ ನೀಡಲು ಪ್ಲಾನ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.