
ಬೆಂಗಳೂರು (ಫೆ. 28): ‘ನನ್ನ ವೃತ್ತಿ ಜೀವನದ ಬಗ್ಗೆ ಏನು ಬೇಕಿದ್ದರೂ ಕೇಳಿ. ನಾನು ನನ್ನ ಖಾಸಗಿ ಜೀವನವನ್ನು ಮಾರಾಟಕ್ಕೆ ಇಟ್ಟಿಲ್ಲ. ನಾನೊಬ್ಬಳು ನಟಿ. ಸಿನಿಮಾ ಬಗ್ಗೆ ಮಾತ್ರ ಮಾತಾಡುತ್ತೇನೆ.’ - ಹೀಗಂದಿದ್ದು ಶ್ರೀಯಾ ಸರಣ್.
ನಟಿ ಮಣಿಯರು ಆಗಾಗ ಸಿಟ್ಟಾಗುವುದು ತುಂಬಾ ಸಹಜ. ಸಿಟ್ಟಾಗದೇ ಇದ್ದರೆ ಅಚ್ಚರಿಪಡಬೇಕಷ್ಟೇ. ಜಾಸ್ತಿಯಾಗಿ ನಟಿಯರು ಸಿಟ್ಟಾಗುವುದು ಅವರ ಖಾಸಗಿ ಜೀವನದ ವಿಷಯ ಬಂದಾಗ. ಅದೂ ಮದುವೆ ವಿಚಾರಕ್ಕೆ ಜಾಸ್ತಿ. ಶ್ರೀಯಾ ವಿಚಾರದಲ್ಲಿ
ಆಗಿದ್ದೂ ಅದೇ. ಇತ್ತೀಚೆಗೆ ಆಕೆ ಮದುವೆ ದಿರಿಸುಗಳನ್ನು ಖರೀದಿಸುವುದು, ಆಭರಣ ಖರೀದಿಯಲ್ಲಿ ತೊಡಗುವುದು ಹೆಚ್ಚಾಗಿತ್ತು. ಇದನ್ನು ನೋಡಿದ ಕೆಲವರು ಶ್ರೀಯಾ ಸರಣ್ ತನ್ನ ಬಾಯ್‌ಫ್ರೆಂಡ್ ಆ್ಯಂಡ್ರೇ ಕೊಶ್ಚೀವ್‌ರನ್ನು ಮದುವೆಯಾಗುತ್ತಿದ್ದಾರೆ
ಎಂದು ಸುದ್ದಿ ಹಬ್ಬಿಸಿದ್ದರು. ಈ ಸಂಗತಿ ಮಾಧ್ಯಮಗಳ ಮುಂದೆ ಬಂದಾಗ ಶ್ರೀಯಾ ಸಿಟ್ಟಾಗಿದ್ದಾರೆ. ಖಾಸಗಿ ವಿಷಯಕ್ಕೆ ತಲೆ ಹಾಕಬೇಡಿ ಎಂದಿದ್ದಾರೆ.
ಅಸಲಿಗೆ ಶ್ರೀಯಾ ತನ್ನ ಮದುವೆಗೆ ಅಲ್ಲ, ಬದಲಿಗೆ ತನ್ನ ಬಂಧುಗಳ ಮದುವೆಗೆ ರೆಡಿಯಾಗುತ್ತಿದ್ದರು. ಹಾಗಂತ ಶ್ರೀಯಾ ಸಂಬಂಧಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದಾಗಿಯೂ ಸತ್ಯ ಯಾವುದು ಅನ್ನುವುದು ತಿಳಿದಿಲ್ಲ. ಹಾಗಂತ ಮದುವೆ ವಿಚಾರ ಕೇಳಿದರೆ ನಟಿಯರು ಯಾಕೆ ಇಷ್ಟೊಂದು ಸಿಟ್ಟಾಗುತ್ತಾರೆ ಅನ್ನುವುದು ಕೂಡ ಯೋಚಿಸಬೇಕಾದ ವಿಚಾರವೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.