ಕೊನೆಗೂ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ರು ಶಿವಣ್ಣ

Published : Jul 11, 2019, 05:11 PM IST
ಕೊನೆಗೂ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ರು ಶಿವಣ್ಣ

ಸಾರಾಂಶ

ಸೋಷಿಯಲ್ ಮೀಡಿಯಾಗೆ ಶಿವಣ್ಣ ಎಂಟ್ರಿ | ಶಸ್ತ್ರಚಿಕಿತ್ಸೆಗೆಂದು ಲಂಡನ್‌ಗೆ ತೆರಳಿದ್ದಾರೆ | ಅಲ್ಲಿಂದಲೇ ಫೇಸ್‌ಬುಕ್ ಖಾತೆ ತೆರೆದಿದ್ದಾರೆ 

ನಟ ಶಿವರಾಜ್ ಕುಮಾರ್ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಅವರಿಗೆ ಅಷ್ಟೊಂದು ಆಸಕ್ತಿಯೂ ಇರಲಿಲ್ಲ. ಎಲ್ಲಾ ಸ್ಟಾರ್ ಗಳಂತೆ ಶಿವಣ್ಣನೂ ಸೋಷಿಯಲ್ ಮೀಡಿಯಾಗೆ  ಬರಬೇಕೆಂಬುದು ಅಭಿಮಾನಿಗಳ ಒತ್ತಾಸೆಯಾಗಿತ್ತು. 

ಇದೀಗ ಶಿವಣ್ಣ ಫೇಸ್ ಬುಕ್ ಗೆ ಬಂದಿದ್ದಾರೆ. ಭುಜದ ಶಸ್ತ್ರಚಿಕಿತ್ಸೆಗೆಂದು ಲಂಡನ್ ಗೆ ಹೋಗಿರುವ ಶಿವಣ್ಣ ಅಲ್ಲಿಂದಲೇ ಫೇಸ್ ಬುಕ್ ಖಾತೆ ತೆರೆದಿದ್ದಾರೆ.  Dr. Shiva Rajkumar ಶಿವಣ್ಣ ಫೇಸ್ ಬುಕ್ ಯೂಸರ್ ನೇಮ್. ರುಸ್ತುಂ ಚಿತ್ರದ ಫೋಟೋವನ್ನು ಪ್ರೊಫೈಲ್ ಫೋಟೋವಾಗಿ ಹಾಕಿದ್ದಾರೆ. 

 

ನಿಮ್ಮೆಲರ ಪ್ರೀತಿ ಹಾರೈಕೆ ಆಪರೇಷನ್ successful and ನಿಮ್ಮ ಶಿವಣ್ಣ safe.ನಾನಿನ್ನು ಲಂಡನ್ನಲ್ಲೆ ಇರುವ ಕಾರಣ ಈ ಹುಟ್ಟುಹಬಕ್ಕೆ ನಿಮ್ಮೆಲ್ಲರನ್ನು ತುಂಬಾ ಮಿಸ್ ಮಾಡಿಕೊಳ್ಳುವೆ. ಆದಷ್ಟು ಬೇಗ ವಾಪಸ್ ಬರುವೆ, ಹಾಗೆ ಇಂದು ಮಧ್ಯರಾತ್ರಿ 12ಕ್ಕೆ ನನ್ನ ಈ official facebook pageನಲ್ಲಿ LIVE ಬರುವೆ ಎಂದು ಮೊದಲ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. 

ಅದೇ ರೀತಿ ಟ್ವಿಟರ್ ನಲ್ಲೂ ಖಾತೆ ತೆರೆದಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ