ಹುಡುಗನ ವಿಷ್ಯದಲ್ಲಿ ನೀವು ಹೀಗೆ ಮಾಡೋದಾ? Anchor Anushreeಗೆ ಮದ್ವೆಮನೆಯಲ್ಲಿಯೇ ಶಿವಣ್ಣ ಕ್ಲಾಸ್​!

Published : Aug 28, 2025, 03:51 PM IST
Anchor Anushree marriage

ಸಾರಾಂಶ

ಆ್ಯಂಕರ್​ ಅನುಶ್ರೀ ಮದುವೆಗೆ ಆಗಮಿಸಿದ್ದ ನಟ ಶಿವರಾಜ್​ಕುಮಾರ್​ ಅವರು ಅನುಶ್ರೀ ಅವರ ಕಾಲೆಳೆದಿದ್ದಾರೆ. ನನಗೆ ಹುಡುಗ ನೋಡು ಎಂದು ಹೀಗೇ ಮಾಡೋದಾ ಪ್ರಶ್ನಿಸಿದ್ದಾರೆ. ಅದರ ವಿಡಿಯೋ ವೈರಲ್​ ಆಗಿದೆ. 

ಆ್ಯಂಕರ್​ ಅನುಶ್ರೀ ಮದ್ವೆಯಾವಾಗ ಎನ್ನುತ್ತಿದ್ದ ಅಭಿಮಾನಿಗಳು ಸದ್ಯ ಮೌನಕ್ಕೆ ಜಾರಿದ್ದಾರೆ. ಏಕೆಂದರೆ ಇಂದು ಬೆಳಿಗ್ಗೆ ಅನುಶ್ರೀ ವೈವಾಹಿಕ ಜೀವನದಕ್ಕೆ ಕಾಲಿಟ್ಟರು. ಈ ಮೂಲಕ 38ನೇ ವಯಸ್ಸಿನಲ್ಲಿ ಅನುಶ್ರೀ ಅವರು ಎಲ್ಲರಿಗೂ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಇವರ ಮದುವೆಯ ವಿಷಯವಾಗಿ ಹಲವು ವರ್ಷಗಳಿಂದ ಗಾಸಿಪ್​ಗಳು ಹರಡುತ್ತಲೇ ಇದ್ದವು. ಈಗ ಮದುವೆ, ಆಗ ಮದುವೆ ಎಂದೆಲ್ಲಾ ಸೋಷಿಯಲ್​ ಮೀಡಿಯಾಗಳಲ್ಲಿ ಸುದ್ದಿ ಸದ್ದು ಮಾಡುತ್ತಲೇ ಇತ್ತು. ಕೊನೆಗೂ ಅನುಶ್ರೀ ಸಾಕಷ್ಟು ರಹಸ್ಯವಾಗಿಯೇ ತಮ್ಮ ವಿಷಯವನ್ನು ಇಟ್ಟಿದ್ದರು. ಇಂದು ಮದುವೆಯಾಗಿದೆ.

ಮದುವೆಗೆ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದರು. ಅಷ್ಟಕ್ಕೂ ಅನುಶ್ರೀ ಅವರು ಪುನೀತ್​ ರಾಜ್​ಕುಮಾರ್​ ಅವರ ಅಪಾರ ಅಭಿಮಾನಿ. ಕುತೂಹಲದ ವಿಷಯ ಏನೆಂದರೆ, ಪುನೀತ್​ ಅವರಿಂದಲೇ ಅನುಶ್ರೀ ಮತ್ತು ಅವರ ಪತಿ ರೋಷನ್​ ಮೀಟ್​ ಆಗಿರುವುದಾಗಿ ಖುದ್ದು ಅನುಶ್ರೀಯೇ ಹೇಳಿಕೊಂಡಿದ್ದಾರೆ. ಮದುವೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು, “ನಮ್ಮ ಮದುವೆಗೆ ತುಂಬ ಜನರು ಬಂದಿದ್ದಾರೆ ಅಂತ ಗೊತ್ತಾಯ್ತು. ನಿಮ್ಮೆಲ್ಲರ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು. ನಮ್ಮದು ಲವ್‌ ಮ್ಯಾರೇಜ್. ಯಾರಿಗೆ ನಮ್ ಲವ್ ಸ್ಟೋರಿ ಬಗ್ಗೆ ಹೇಳಿದ್ರೂ ಕೂಡ ನಂಬುತ್ತಿರಲಿಲ್ಲ. ಪುನೀತ ಪರ್ವ ಕಾರ್ಯಕ್ರಮದಲ್ಲಿಯೆ ನಮ್ಮಿಬ್ಬರ ಪರಿಚಯ ಆಗಿದೆ. ಇಬ್ಬರು ಫ್ರೆಂಡ್ಸ್ ಆದೆವು, ಲವ್ ಮಾಡಿ ಮದುವೆ ಆದೆವು. ಪುನೀತ ಪರ್ವದಲ್ಲಿ ನಮ್ಮಿಬ್ಬರ ಪರಿಚಯ ಆಯ್ತು, ಅಪ್ಪು ಸರ್ ಅವರೇ ನಮ್ಮ ಇಬ್ಬರನ್ನೂ ಸೇರಿಸಿದಂಗಾಯ್ತು” ಎಂದಿದ್ದಾರೆ.

ಮದುವೆ ಆಗಮಿಸಿದ್ದ ನಟ ಶಿವರಾಜ್​ ಕುಮಾರ್​ ಮತ್ತು ಗೀತಾ ದಂಪತಿಗೆ ತಮ್ಮ ತಾಳಿಯನ್ನು ತೋರಿಸಿದರು ಅನುಶ್ರೀ. ಆಗ ಶಿವರಾಜ್​ ಕುಮಾರ್​ ಅವರು ಏನಮ್ಮಾ, ನಮಗೆ ಹುಡುಗನನ್ನು ನೋಡಿ ಎಂದು ನೀನೇ ನೋಡಿಕೊಂಡು ಮದ್ವೆನೂ ಆಗಿಬಿಟ್ಟಿಯಲ್ಲ ಎಂದು ಕಾಲೆಳೆದರು. ಅದಕ್ಕೆ ಅನುಶ್ರೀ ಇವರು ನೀವೇ ನೋಡಿರೋ ಹುಡುಗ, ನಿಮ್ಮಿಂದಲೇ ಮದುವೆಯಾಗಿದ್ದು ಎಂದರು. ಇದೇ ವೇಳೆ ಮಾತನಾಡಿದ ಅನುಶ್ರೀ ಪತಿ ರೋಷನ್​ ಅವರು, "ನಾನು ಐಟಿ ಉದ್ಯೋಗಿ. ಕೋಟ್ಯಧಿಪತಿ ಅಲ್ಲ, ಕಳೆದ ಐದು ವರ್ಷಗಳಿಂದ ಅನುಶ್ರೀ ಪರಿಚಯ ಇದೆ. ಡಾ ರಾಜ್‌ಕುಮಾರ್‌ ಅಭಿಮಾನಿ ನಾನು, ನನಗೆ ಶ್ರೀದೇವಿ ಭೈರಪ್ಪ ಅವರು ಫ್ರೆಂಡ್.‌ ಇವರ ಮೂಲಕ ಅನುಶ್ರೀ ಪರಿಚಯ ಆಗಿದೆ, ನನಗೆ ಅನುಶ್ರೀ ಸೆಲೆಬ್ರಿಟಿ ಅಂತ ಯಾವಾಗಲೂ ಅನಿಸಲಿಲ್ಲ. ಅವಳು ಸಿಂಪಲ್" ಎಂದು ಪತ್ನಿಯ ಬಗ್ಗೆ ಹೇಳಿದರು.

ಇದೇ ವೇಳೆ ಅನುಶ್ರೀ ಅವರು ತಮಗೆ ಸಿಂಪಲ್​ ಆಗಿ ಮದುವೆಯಾಗುವ ಆಸೆಯಿತ್ತು ಎಂದಿದ್ದಾರೆ. “ಮದುವೆ ನಮ್ಮ ಜೀವನದ ಚಿಕ್ಕ ಭಾಗ. ಕೆಲಸ ನಮಗೆ ಬಹಳ ಮುಖ್ಯ. ಸರಳ ವಿವಾಹ ನಮಗೆ ಸಾಕಷ್ಟು ಖುಷಿ ಕೊಟ್ಟಿದೆ. ನನಗೆ ಮಂತ್ರ‌ ಮಾಂಗಲ್ಯ ಆಗಲು ಬಹಳ ಇಷ್ಟ ಇತ್ತು. ಆದರೆ ಇದಕ್ಕೆಲ್ಲ ಒಂದಿಷ್ಟು ನಿಯಮ ಇದೆ. ಇಷ್ಟೇ ಜನರು ಭಾಗಿ ಆಗಬೇಕು ಅಂತ ಕೂಡ ಹೇಳಲಾಗಿತ್ತು. ಹೀಗಾಗಿ ಮಂತ್ರಮಾಂಗಲ್ಯ ಆಗಲು ಆಗಲಿಲ್ಲ. ಮದುವೆ ಅನ್ನೋದು ಒಂದು ಹೆಣ್ಣಿನ ಕನಸು, ನನ್ನ ಮದುವೆ ಸ್ವಲ್ಪ ತಡವಾಗಿದೆ, ನಾವು ಹೇಗೆ ಮದುವೆ ಆಗ್ತೀವಿ ಅನ್ನೋದು‌ ಮುಖ್ಯ ಅಲ್ಲ, ಹೇಗೆ ಬದುಕ್ತೀವಿ ಎನ್ನೋದು ಮುಖ್ಯ. ನಾವಿಬ್ಬರು ಮದುವೆ ಆಗಿದ್ದೇವೆ, ನಮಗೆ ಜವಾಬ್ದಾರಿ ಇದೆ, ನಾವಿಬ್ಬರು ಈ ಜವಾಬ್ದಾರಿಯನ್ನು ಮುಂದುವರೆಸಿಕೊಂಡು ಹೋಗಬೇಕು. ಮದುವೆ ಬಳಿಕ‌ ಹೇಗೆ ಬದುಕ್ತೀವಿ ಅನ್ನೋದು ಮುಖ್ಯವಾಗುತ್ತದೆ. ಅವರು ಕೋಟ್ಯಾಧಿಪತಿ‌ ಅಂತೆಲ್ಲ ಯುಟ್ಯೂಬ್‌ ವಿಡಿಯೋ ನೋಡಿದೆ. ರೋಶನ್ ಸಿಂಪಲ್ ಹುಡುಗ. ಮುಂದೆ ಅವರು ಕೋಟ್ಯಂತರ ರೂಪಾಯಿ ದುಡಿಯೋ ಹಾಗೆ ಆಗಲಿ, ಅದಿಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು. ರೋಷನ್ ಅವರಿಗೆ ಅಡುಗೆ ಮಾಡೋದು ಅಂದ್ರೆ ತುಂಬ ಇಷ್ಟ. ಅವರು ಬಿರಿಯಾನಿ, ಫಿಶ್ ಫ್ರೈ ಸಖತ್ ಆಗಿ ಮಾಡ್ತಾರೆ” ಎಂದು ಅನುಶ್ರೀ ಹೇಳಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?