
ಅಬುಧಾಬಿ(ಜು.01): ಈ ವರ್ಷದ ಸೈಮಾ(ಸೌತ್ ಇಂಡಿಯನ್ ಇಂಟರ್'ನ್ಯಾಷನಲ್ ಮೂವಿ ಅವಾರ್ಡ್ಸ್) ಪ್ರಶಸ್ತಿ ವಿತರಿಸಲಾಗಿದ್ದು, ಶಿವಲಿಂಗ ಚಿತ್ರದ ನಟನೆಗೆ ಶಿವರಾಜ್ ಕುಮಾರ್ ಅತ್ಯುತ್ತಮ ನಾಯಕ ಪ್ರಶಸ್ತಿಗೆ ಭಾಜನರಾದ್ದಾರೆ. ಕಿರಿಕ್ ಪಾರ್ಟಿ 5 , ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹಾಗೂ ಯು ಟರ್ನ್ ತಲಾ 2 ಪ್ರಶಸ್ತಿಗಳನ್ನು ಗಳಿಸಿದೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ
1)ಅತ್ಯುತ್ತಮ ಫೋಷಕ ನಟ: ಚಂದನ್ ಆಚಾರ್ (ಚಿತ್ರ - ಕಿರಿಕ್ ಪಾರ್ಟಿ)
2)ಅತ್ಯುತ್ತಮ ಫೋಷಕ ನಟಿ: ರಾಧಿಕಾ ಚೇತನ್ (ಚಿತ್ರ - ಯೂ ಟರ್ನ್)
3)ಅತ್ಯುತ್ತಮ ಖಳನಟ - ವಶಿಷ್ಟ ಸಿಂಹ (ಚಿತ್ರ - ಗೋಧಿ ಬಣ್ಣ ಸಾಧಾರಣ ಮೈಕಟ್ಟು)
4)ಅತ್ಯುತ್ತಮ ಹಿನ್ನೆಲೆ ಗಾಯಕಿ - ಇಂದು ನಾಗರಾಜ್ ( ಚಿತ್ರ - ದೊಡ್ಮನೆ ಹುಡ್ಗ - ಹಾಡು : ಥ್ರಾಸ್ ಆಗ್ತೈತಿ..)
5)ಅತ್ಯುತ್ತಮ ಹಿನ್ನೆಲೆ ಗಾಯಕ - ಅರ್ಮಾನ್ ಮಲ್ಲಿಕ್ ( ಚಿತ್ರ - ಮುಂಗಾರು ಮಳೆ 2, ಹಾಡು - ಸರಿಯಾಗಿ ನೆನಪಿದೆ ನನಗೆ )
6)ಬೆಸ್ಟ್ ಕಾಮಿಡಿಯನ್ - ರವಿ ಶಂಕರ್ ಗೌಡ (ಚಿತ್ರ - ಸುಂದರಾಂಗ ಜಾಣ)
7)ಅತ್ಯುತ್ತಮ ಗೀತೆ ರಚನೆಕಾರ - ಧನಂಜಯ್ ರಂಜನ್ ( ಚಿತ್ರ- ಕಿರಿಕ್ ಪಾರ್ಟಿ, ಹಾಡು - ಬೆಳಗೆದ್ದು ಯಾರ ಮುಖವ ನಾನು ನೋಡಿದೆ )
8)ಅತ್ಯುತ್ತಮ ಉದಯೋನ್ಮುಖ ನಟಿ - ರಶ್ಮಿಕಾ ಮಂದಣ್ಣ (ಚಿತ್ರ -ಕಿರಿಕ್ ಪಾರ್ಟಿ)
9)ಅತ್ಯುತ್ತಮ ಉದಯೋನ್ಮುಕ ನಟ - ನಿಖಿಲ್ ಕುಮಾರಸ್ವಾಮಿ (ಚಿತ್ರ-ಜಾಗ್ವಾರ್)
10)ಉದಯೋನ್ಮುಖ ನಿರ್ದೇಶಕ - ಹೇಮಂತ್ ರಾವ್ (ಚಿತ್ರ - ಗೋಧಿ ಬಣ್ಣ ಸಾಧಾರಣ ಮೈಕಟ್ಟು)
11)ಅತ್ಯುತ್ತಮ ನಟಿ - ವಿಮರ್ಶಕರ ಆಯ್ಕೆ - ಪಾರುಲ್ ಯಾದವ್ (ಚಿತ್ರ-ಕಿಲ್ಲಿಂಗ್ ವೀರಪ್ಪನ್)
12)ಅತ್ಯುತ್ತಮ ಮನರಂಜನಾತ್ಮಕ ಚಿತ್ರ (ಚಿತ್ರ-ಕಿರಿಕ್ ಪಾರ್ಟಿ)
13)ಅತ್ಯುತ್ತಮ ನಿರ್ದೇಶಕ - ರಿಷಬ್ ಶೆಟ್ಟಿ (ಚಿತ್ರ-ಕಿರಿಕ್ ಪಾರ್ಟಿ)
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.