ಅಡಲ್ಟ್ ಚಿತ್ರಗಳಲ್ಲಿ ನಟಿಸಲು ಉದ್ಯೋಗ ತೊರೆದ ಪೊಲೀಸ್ ಅಧಿಕಾರಿ

Suvarna News   | Asianet News
Published : Mar 23, 2021, 04:24 PM ISTUpdated : Mar 23, 2021, 04:58 PM IST
ಅಡಲ್ಟ್ ಚಿತ್ರಗಳಲ್ಲಿ ನಟಿಸಲು ಉದ್ಯೋಗ ತೊರೆದ ಪೊಲೀಸ್ ಅಧಿಕಾರಿ

ಸಾರಾಂಶ

ಇಂಗ್ಲೆಂಡಿನ ಈ ಪೊಲೀಸ್ ಅಧಿಕಾರಿ, ಪುರುಷರ ಅಧಿಪತ್ಯವಿರುವ ಪೊಲೀಸ್ ಡಿಪಾರ್ಟ್‌ಮೆಂಟ್ ತೊರೆದು, ವಯಸ್ಕರ ಚಿತ್ರಗಳ ಕಂಟೆಂಟ್ ಕೊಡಲು ಶುರು ಮಾಡಿದ್ದಾಳೆ. 

ಇಂಗ್ಲೆಂಡಿನ ಒಬ್ಬಾಕೆ ಪೊಲೀಸ್ ಅಧಿಕಾರಿಣಿ ಈಗ ಸುದ್ದಿಯಾಗಿದ್ದಾಳೆ. ಅವಳು ಮಾಡಿದ್ದು ಇಷ್ಟೇ. ಅಡಲ್ಟ್ ಫಿಲಂಗಳಲ್ಲಿ ನಟಿಸುವುದಕ್ಕಾಗಿ ಪೊಲೀಸ್ ಅಧಿಕಾರಿ ಹುದ್ದೆ ತೊರೆದದ್ದು!

ಈಕೆಯ ಹೆಸರು ಶಾರ್ಲೆಟ್ ರೋಸ್. ಪೊಲೀಸ್ ಅಧಿಕಾರಿ ಹುದ್ದೆ ಪ್ರಭಾವಿ ಅಲ್ಲವೇ ಅದನ್ನೇಕೆ ತೊರೆದಿರಿ ಅಂತ ಕೇಳಿ ನೋಡಿ. ಅವಳು ನೀಡುವ ಉತ್ತರ: ಇದು ಮೇಲ್ ಡಾಮಿನೇಟೆಡ್ ವಲ್ಡ್ ಅರ್ಥಾತ್ ಇಲ್ಲಿ ಪುರುಷರದೇ ಅಧಿಪತ್ಯ. ನಾನು ಹತ್ತು ವರ್ಷಗಳಿಂದ ಇಲ್ಲಿ ಇದ್ದೇನೆ. ಡಾಗ್ ಸ್ಕ್ವಾಡ್‌ಗೆ ಸೇರಿಕೊಳ್ಳಬೇಕು ಅಂತ ನನ್ನ ಕನಸು ಆಗಿತ್ತು. ಪುರುಷರಾಗಿದ್ದರೆ ಯಾವತ್ತೋ ಸೇರಿ ಆಗಿರುತ್ತಿತ್ತು. ಆದರೆ ನನಗೆ ಇನ್ನೂ ಆ ಪಡೆಯಲ್ಲಿ ಸೇರಿಕೊಳ್ಳುವುದು ಆಗಲೇ ಇಲ್ಲ. ಇದು ಅನ್ಯಾಯ ಅಲ್ಲವೇ? ಇಲ್ಲಿ ಪುರುಷರಿಗೊಂದು ನೀತಿ, ಮಹಿಳೆಯರಿಗೆ ಇನ್ನೊಂದು ನೀತಿ.

 

ಆಗ ಅವಳು ಮಾಡೆಲಿಂಗ್‌ನಲ್ಲಿ ತನ್ನ ಅದೃಷ್ಟ ಪರೀಕ್ಷಿಸಲು ನಿರ್ಧರಿಸಿದಳು. ಅವಳಿಗೆ ಈ ಐಡಿಯಾ ಕೊಟ್ಟಿದ್ದು ಆಕೆಯ ಗೆಳತಿ. ಹಾಗೇ ಆಕೆ ಮೊದಲು ಐಷಾರಾಮಿ ದುಬಾರಿ ಕಾರುಗಳ ಪಕ್ಕದಲ್ಲಿ ನಿಂತು ಪೋಸು ಕೊಡುತ್ತಾರಲ್ಲ, ಆ ಕೆಲಸವನ್ನು ಮಾಡಿದಳು. ನೋಡುವುದಕ್ಕೂ ಸೊಗಸಾಗಿದ್ದ ಈಕೆಗೆ ಅದರಲ್ಲಿ ಚಾನ್ಸ್‌ಗಳು ಅರಸಿ ಬಂದವು. ನಂತರ ಹಾಗೇ ಒಳ ಉಡುಪುಗಳ ಮಾಡೆಲಿಂಗ್ ಕೆಲಸ ಕೂಡ ಕೈಬೀಸಿ ಕರೆಯಿತು. ಎರಡೇ ವರ್ಷದಲ್ಲಿ ಆ ಕೆಲಸದಲ್ಲಿ ಬಹಳ ಬ್ಯುಸಿ ಮಾಡೆಲ್ ಆಗಿಬಿಟ್ಟಳು.

ಇದು ಯೋನಿ ಮ್ಯೂಸಿಯಂ! ಇಲ್ಲಿ ಏನೆಲ್ಲಾ ಇದೆ ಗೊತ್ತೆ? ...

ನಂತರ ಆಕೆಯನ್ನು ಓನ್ಲೀ ಫ್ಯಾನ್ಸ್ ಎಂಬ ಒಂದು ಆಡಲ್ಟ್ ಅಥವಾ ವಯಸ್ಕರ ಚಿತ್ರಗಳ ವೇದಿಕೆ ಆಹ್ವಾನಿಸಿತು. ಅಲ್ಲೂ ತನ್ನ ಅದೃಷ್ಟ ಪರೀಕ್ಷೆ ಮಾಡಲು ಮುಂದಾದಳು. ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ತನಗೆ ಫ್ಯಾನ್‌ಗಳನ್ನು ಸಂಪಾದಿಸಿಕೊಂಡಿದ್ದ ಆಕೆಗೆ ಅಲ್ಲಿ ಪ್ರೇಕ್ಷಕರನ್ನು ಸಂಪಾದಿಸಿಕೊಳ್ಳುವುದು ಕಷ್ಟ ಆಗಲಿಲ್ಲ.

ಓನ್ಲಿ ಫ್ಯಾನ್ಸ್ ಎಂಬುದು ಪೋರ್ನ್ ವೆಬ್‌ಸೈಟ್. ಅಲ್ಲಿ ತನ್ನ ಕಂಟೆಂಟ್ ಅನ್ನು ಈಕೆ ಹಾಕುತ್ತಾಳೆ. ಪೋರ್ನ್ ಬಗ್ಗೆ ಈಕೆಗೆ ಅಭ್ಯಂತರವಿಲ್ಲ. ಆದರೆ ಈಕೆಯ ಕಂಟೆಂಟ್ ಸ್ವಲ್ಪ ಬೇರೆ. ಇವಳು ಹಾರ್ಡ್‌ಕೋರ್ ಪೋರ್ನ್‌ನಲ್ಲಿ ನಟಿಸುವುದಿಲ್ಲ. ಶೃಂಗಾರ ಪ್ರಚೋದಕವಾದ, ಸೆನ್ಸುಯಲ್ ಆದ ಕಂಟೆಂಟ್‌ಗೆ ಮಾತ್ರ ಈಕೆಯ ಆದ್ಯತೆ. ಅಂದರೆ ತನ್ನ ದೇಹದಲ್ಲಿ ಎಷ್ಟು ತೆರೆದು ತೋರಿಸಬೇಕು, ಯಾವ ಭಂಗಿಗಳಲ್ಲಿ ನಿಲ್ಲಬೇಕು, ರಸಿಕರಿಗೆ ಇಷ್ಟವಾಗುವಂತೆ ಎಂಥ ಭಂಗಿಯಲ್ಲಿ ಮಾತ್ರ ತಾನು ನಟಿಸಬಲ್ಲೆ ಎಂಬುದನ್ನು ಈಕೆಯೇ ನಿರ್ಧರಿಸುತ್ತಾಳೆ.

#Feelfree: ಬೆಡ್‌ರೂಮ್‌ನಲ್ಲಿ ಸರಸ ಹೆಚ್ಚಿಸೋಕೆ ನಿಲುಗನ್ನಡಿ! ...

ಈಕೆಯ ಕಂಟೆಂಟ್ ಅನ್ನೇ ಬಯಸಿ ಬರುವ ಸದಸ್ಯರೂ ಇಲ್ಲಿದ್ದಾರೆ. ಇದು ಫೇಸ್ಬುಕ್ ಥರವೇ ಒಂದು ಸೋಶಿಯಲ್ ಜಾಲತಾಣವೇ. ಆದರೆ ಇಲ್ಲಿರುವುದು ಅಡಲ್ಟ್ ಕಂಟೆಂಟ್. ಸದಸ್ಯರಾದವರಿಗೆ ಮಾತ್ರ ಇದು ಲಭ್ಯ. ಇಲ್ಲಿ ಸೆನ್ಸುಯಲ್ ಚಿತ್ರಗಳಿಂದ ಹಿಡಿದು ಹಾರ್ಡ್‌ಕೋರ್ ಪೋರ್ನ್ ವರೆಗೆ ಎಲ್ಲಾ ಬಗೆಯದು ಇದೆ. ಇವಳು ಗಿರಾಕಿಗಳ ಜೊತೆಗೆ ಮಾತಾಡುವುದೇ ಹೆಚ್ಚು. ಮಾತಾಡುವಾಗ ಏನು ಮಾಡುತ್ತೇನೆ ಎಂದು ಈಕೆ ವಿವರುವುದಿಲ್ಲ! ಈಕೆಗೆ ತಾನು ಮಾಡುತ್ತಿರುವುದರ ಬಗ್ಗೆ ಹೆಮ್ಮೆ ಇದೆ. ತಾನು ಡಿಫರೆಂಟು ಅಂತ ಈಕೆ ಹೇಳಿಕೊಳ್ಳುತ್ತಾಳೆ.

ಬೋರಿಂಗ್ ದಾಂಪತ್ಯ ಜೀವನದಲ್ಲಿ ಹೀಗೆ ರೊಮ್ಯಾನ್ಸ್ ಮಸಾಲವಿರಲಿ! ...

ಅಂದ ಹಾಗೆ ಈಕೆಯ ಆದಾಯ ಹೇಗಿದೆ? ನೀವು ನಂಬಲಾರಿರಿ. ಪೊಲೀಸ್ ಆಗಿದ್ದಾಗ ಪಡೆಯುತ್ತಿದ್ದುದಕ್ಕಿಂತ ಮೂರು ಪಟ್ಟು ಆದಾಯವನ್ನು ಈಕೆ ಈಗ ಗಳಿಸುತ್ತಿದ್ದಾಳೆ. ಒಂದು ಹೊಚ್ಚ ಹೊಸ ಲ್ಯಾಂಬೂರ್ಗಿನಿ ಕಾರನ್ನೂ ತೆಗೆದುಕೊಂಡಿದ್ದಾಳೆ. ಅದರ ಬೆಲೆ ಸುಮಾರು ಮೂರು ಕೋಟಿ ರೂಪಾಯಿ. ಪೊಲೀಸ್ ಅಧಿಕಾರಿಯಾಗಿಯೇ ಇದ್ದಿದ್ದರೆ ಇದನ್ನು ಮಾಡಲಾಗುತ್ತಿರಲಿಲ್ಲ ಎಂಬ ಅರಿವು ಈಕೆಗೆ ಯಾವಾಗಲೋ ಆಗಿದೆ. ತನ್ನ ಮಾದಕ ಸೌಂದರ್ಯವನ್ನು ಮಾರಾಟಕ್ಕೆ ಇಟ್ಟದ್ದಕ್ಕೆ ಆಕೆಗೆ ಪಶ್ಚಾತ್ತಾಪವೇನೂ ಇಲ್ಲ. ಇದು ನನಗೆ ಹುಟ್ಟಿನಿಂದ ಬಂದ ಸಾಮರ್ಥ್ಯ. ಇದನ್ನೇ ಬಳಸಿಕೊಂಡಿದ್ದೇನೆ ಅನ್ನುತ್ತಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ
ಎಐ ನಿರ್ಮಾತೃಗಳಿಗೆ 2025ರ ಟೈಮ್ ವರ್ಷದ ವ್ಯಕ್ತಿ ಗೌರವ!