ಈ ಸಲ ದೀಪಾವಳಿ, ರವಿಚಂದ್ರ ಶೂಟಿಂಗ್‌ನಲ್ಲಿ; ಶಾನ್ವಿ ಶ್ರೀವಾಸ್ತವ್

By Kannadaprabha NewsFirst Published Nov 6, 2018, 10:30 AM IST
Highlights

ನಾನೀಗ ಮೈಸೂರಿನಲ್ಲಿದ್ದೇನೆ. ‘ರವಿಚಂದ್ರ’ ಚಿತ್ರದ ಶೂಟಿಂಗ್ ಬ್ಯುಸಿ. ಈ ಬಾರಿಯ ದೀಪಾವಳಿ ಆಚರಣೆ ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ ಸುತ್ತಮುತ್ತಲ ಸುತ್ತಾಟದ ಮೂಲಕ. 

ಹಬ್ಬದ ಸಂಭ್ರಮವನ್ನು ಶೂಟಿಂಗ್ ಬ್ಯುಸಿಯಲ್ಲೂ ಅನುಭವಿಸುವುದಕ್ಕೂ ಒಂಥರ ಥ್ರಿಲ್ ಎನಿಸುತ್ತೆ. ಯಾಕಂದ್ರೆ ಇಷ್ಟು ದಿನ ಮನೆಯಲ್ಲಿ ದೀಪಾವಳಿ ಆಚರಣೆ. ಈಗ ಕೊಂಚ ಬದಲಾವಣೆ, ಮನೆ ಬದಲಿಗೆ ಶೂಟಿಂಗ್ ಸೆಟ್‌ನಲ್ಲಿ.

ಮನೆಯಲ್ಲಿ ದೀಪಾವಳಿ ತುಂಬಾ ವಿಶೇಷವಾದ ಹಬ್ಬ. ಹಬ್ಬ ಬಂದ್ರೆ ಸಾಕು ಭಯಂಕರ ಪಟಾಕಿ ಸಿಡಿಸುವುದು ಮಾಮೂಲು. ಈಗ ಅದು ಇಲ್ಲ. ಪಟಾಕಿ ಕಮ್ಮಿ ಆಗಿದೆ. ಅದರ ಬದಲಿಗೆ ನಾನಾ ಬಗೆಯಲ್ಲಿ ಸಂಭ್ರಮಿಸುವುದು ರೂಢಿ ಆಗಿದೆ. ರಂಗೋಲಿ ಹಾಕುವುದು, ದೀಪ ಹಚ್ಚುವುದು ನನಗಿಷ್ಟ. ಹಾಗೆಯೇ ಮನೆಯಲ್ಲಿ ಪಕೋಡಾ ಮಾಡುತ್ತಾರೆ. ಅದರೆ ಜತೆಗೆ ಬಜ್ಜಿ, ಸ್ವೀಟು, ಇತ್ಯಾದಿ ತರಹದ ಅಡುಗೆ ಇರುತ್ತೆ. ನಾನ್‌ವೆಜ್ ಇರೋದಿಲ್ಲ. ಹಬ್ಬದ ಊಟ ಮಾಡಿ, ಮನೆಯವರ ಜತೆಗೆ ಕಾರ್ಡ್ ಆಡುತ್ತೇನೆ.

ಸಂಜೆ ದೀಪ ಹಚ್ಚುತ್ತಾರೆ. ಹೊಸ ಬಟ್ಟೆ ಖರೀದಿಸಿ, ಹಬ್ಬಕ್ಕೆ ತೊಡುವುದು ಸಣ್ಣವರಿದ್ದಾಗಿನಿಂದಲೂ ರೂಢಿಗತ. ಈಗಲೂ ಅದು ಖಾಯಂ. ನಾನೀಗ ಶೂಟಿಂಗ್‌ನಲ್ಲಿರೋದ್ರಿಂದ ಅವೆಲ್ಲ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಶೂಟಿಂಗ್ ಮುಗಿಸಿಕೊಂಡು ನವೆಂಬರ್ ೮ಕ್ಕೆ ಬೆಂಗಳೂರಿಗೆ ಬರುತ್ತೇನೆ. ಅಷ್ಟರೊಳಗೆ ಹಬ್ಬದ ಆಚರಣೆ ಕ್ಲೈಮ್ಯಾಕ್ಸ್‌ಗೆ ಬರುತ್ತೆ. ಆಗಲಾದರೂ ಹೊಸ ಬಟ್ಟೆ ಸಿಗುತ್ತೆ ಎನ್ನುವುದು ಬಿಟ್ಟರೆ, ರಂಗೋಲಿ ಹಾಕುವುದು, ಪಕೋಡಾ ಮಾಡುವುದು, ಮನೆಯವರೆಲ್ಲ ಸೇರಿ ಕಾರ್ಡ್ ಆಡುವುದು ಸಿಗಲ್ಲ ಎನ್ನುವುದೇ ಬೇಸರ.

click me!