
2026ರ ಫಿಫಾ ವಿಶ್ವಕಪ್‌ಗಾಗಿ ಶಕೀರಾ ತಮ್ಮ ಹೊಸ ಹಾಡು 'ಡೈ ಡೈ' ಟೀಸರ್ ರಿಲೀಸ್ ಮಾಡಿದ್ದಾರೆ. ಈ ಹಾಡಿನಲ್ಲಿ ಬರ್ನಾ ಬಾಯ್ ಕೂಡಾ ಇದ್ದಾರೆ. ಅಷ್ಟೇ ಅಲ್ಲ, ಜುಲೈ 19, 2026 ರಂದು ನಡೆಯುವ ಫೈನಲ್ ಪಂದ್ಯದ ಹಾಫ್‌ಟೈಮ್ ಶೋನಲ್ಲಿ ಶಕೀರಾ, ಮಡೋನಾ ಮತ್ತು ಬಿಟಿಎಸ್ ಜೊತೆ ಪರ್ಫಾರ್ಮ್ ಮಾಡಲಿದ್ದಾರೆ.
ವಿಶ್ವಕಪ್‌ಗೆ ಶಕೀರಾ ಹೊಸ ಹಾಡು
ಪಾಪ್ ಸೂಪರ್‌ಸ್ಟಾರ್ ಶಕೀರಾ ಅವರು ಫುಟ್ಬಾಲ್ ಮತ್ತು ಸಂಗೀತ ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. 2026ರ ಫಿಫಾ ವಿಶ್ವಕಪ್‌ನ ಅಧಿಕೃತ ಗೀತೆಯಾದ 'ಡೈ ಡೈ' ಹಾಡಿನ ಟೀಸರ್ ಅನ್ನು ಅವರು ಬಿಡುಗಡೆ ಮಾಡಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೈ-ಎನರ್ಜಿ ರೀಲ್ ಒಂದನ್ನು ಶಕೀರಾ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಫುಟ್ಬಾಲ್ ಪಂದ್ಯದ ದೃಶ್ಯಗಳಿದ್ದು, "ಶೀಘ್ರದಲ್ಲೇ ಬರಲಿದೆ..." ಎಂಬ ಕ್ಯಾಪ್ಶನ್ ಜೊತೆಗೆ ತೋಳ ಮತ್ತು ಫುಟ್ಬಾಲ್ ಎಮೋಜಿಗಳನ್ನು ಬಳಸಿದ್ದಾರೆ.
ಹಾಡಿನಲ್ಲಿ ಬರ್ನಾ ಬಾಯ್, ಜೊತೆಗೆ ಚಾರಿಟಿಗೂ ಸಪೋರ್ಟ್
ಈ ಹೊಸ ಹಾಡಿನಲ್ಲಿ ನೈಜೀರಿಯಾದ ಆಫ್ರೋಬೀಟ್ಸ್ ಸ್ಟಾರ್ ಬರ್ನಾ ಬಾಯ್ ಕೂಡಾ ಸಾಥ್ ನೀಡಲಿದ್ದಾರೆ. ಈ ಹಾಡು ಫಿಫಾ ಗ್ಲೋಬಲ್ ಸಿಟಿಜನ್ ಎಜುಕೇಶನ್ ಫಂಡ್ ಜೊತೆಗೂ ಕೈಜೋಡಿಸಿದೆ. ಈ ಫಂಡ್, ವಿಶ್ವಾದ್ಯಂತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಫುಟ್ಬಾಲ್ ಕಾರ್ಯಕ್ರಮಗಳನ್ನು ಒದಗಿಸುವ ಗುರಿ ಹೊಂದಿದೆ.
2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಮನರಂಜನಾ ಕಾರ್ಯಕ್ರಮದ ಬಗ್ಗೆಯೂ ಘೋಷಣೆ ಮಾಡಲಾಗಿದೆ. ಜುಲೈ 19 ರಂದು ನ್ಯೂಯಾರ್ಕ್-ನ್ಯೂಜೆರ್ಸಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಫಿಫಾ ವಿಶ್ವಕಪ್ ಫೈನಲ್ ಹಾಫ್‌ಟೈಮ್ ಶೋನಲ್ಲಿ ಶಕೀರಾ ಪ್ರದರ್ಶನ ನೀಡಲಿದ್ದಾರೆ. ಅವರ ಜೊತೆಗೆ ಪಾಪ್ ದಿಗ್ಗಜೆ ಮಡೋನಾ ಮತ್ತು ಖ್ಯಾತ ಬ್ಯಾಂಡ್ ಬಿಟಿಎಸ್ ಕೂಡಾ ವೇದಿಕೆ ಹಂಚಿಕೊಳ್ಳಲಿವೆ. ಈ ಕಾರ್ಯಕ್ರಮವನ್ನು ಕೋಲ್ಡ್‌ಪ್ಲೇಯ ಕ್ರಿಸ್ ಮಾರ್ಟಿನ್ ಅವರು ರೂಪಿಸುತ್ತಿದ್ದು, ಗ್ಲೋಬಲ್ ಸಿಟಿಜನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
ಶಕೀರಾ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಈ ಇನ್‌ಸ್ಟಾಗ್ರಾಮ್ ಟೀಸರ್‌ಗೆ 1 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್ಸ್ ಮತ್ತು ಸಾವಿರಾರು ಕಾಮೆಂಟ್‌ಗಳು ಬಂದಿವೆ. 'ಡೈ ಡೈ' ಹಾಡಿನ ಆಡಿಯೋವನ್ನು ಮೇ 16 ರಂದು ಬಿಡುಗಡೆ ಮಾಡಲಾಗಿತ್ತು. ಈ ಹಿಂದೆ 'ವಕಾ ವಕಾ' ಹಾಡಿನ ಮೂಲಕ ಜಗತ್ತನ್ನೇ ಕುಣಿಸಿದ್ದ ಶಕೀರಾ, ಈಗ ಮತ್ತೊಮ್ಮೆ ಫುಟ್ಬಾಲ್ ಜಗತ್ತಿಗೆ ಮರಳಿದ್ದಾರೆ. ಫಿಫಾ ವಿಶ್ವಕಪ್ 2026 ಟೂರ್ನಿಯು ಜೂನ್ 11 ರಿಂದ ಜುಲೈ 19, 2026 ರವರೆಗೆ ನಡೆಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.