
ಇಂಥ ವಿಶೇಷ ಕಥಾ ಹಂದರವುಳ್ಳ 'ಸೀತಾ ವಲ್ಲಭ' ಜು.18ರಿಂದ ಕಲರ್ಸ್ ಕನ್ನಡದಲ್ಲಿ ರಾತ್ರಿ 10ಕ್ಕೆ ಪ್ರಸಾರವಾಗಲಿದೆ.
ಹೊಸ ಮುಖ ಮತ್ತು ಕಥೆಯೊಂದಿಗೆ ಬರುವ ಸಿರಿಯಲ್‌ಗಳು ತನ್ನ ವಿಭಿನ್ನತೆಯಿಂದ ಈಗಾಗಲೇ ಜನರ ಮನಗೆದ್ದಿವೆ. ಸಂಜೆ ಎಂದರೆ ಮನೆ ಕೆಲಸದ ನಡುವೆ ಸಮಯ ಮಾಡಿಕೊಂಡು ಟಿವಿ ಮುಂದೆ ಕೂರುವಂತೆ ಮಾಡುತ್ತವೆ ಈ ಸಿರಿಯಲ್‌ಗಳು.
'ರಾಧ ರಮಣ', 'ಅಗ್ನಿಸಾಕ್ಷಿ' , 'ಪದ್ಮಾವತಿ', 'ಶನಿ'.... ಹೇಗೆ ಹಲವಾರು ಸೀರಿಯಲ್‌ನಿಂದ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಇದೀಗ ಇದೇ ಹಾದಿಯಲ್ಲಿ 'ಸೀತಾ ವಲ್ಲಭ' ಎಂಬ ವಿಭಿನ್ನ ಕಥೆಯುಳ್ಳ, ನವ ನಟರು ನಟಿಸಿರುವ ಧಾರಾವಾಹಿಯೊಂದು ನಿಮ್ಮನ್ನು ರಂಜಿಸಿಲಿವೆ.
ಈ ಮಧುರ ಪ್ರೀತಿಯನ್ನು ಮೈಸೂರು ಮಂಜು ನಿರ್ದೇಶಿಸಿದರೆ, ಕಿರುತೆರೆಯ ಕಥೆಯೊಂದಕ್ಕೆ ಸೋನು ನಿಗಮ್ ಟೈಟಲ್ ಸಾಂಗ್ ಹಾಡಿರುವುದು ಮತ್ತೊಂದು ವಿಶೇಷ. ಈ ಹಾಡು ಈಗಾಗಲೇ ಜನರ ಮನ ಗೆದ್ದಿದೆ. ಆಕರ್ಷ್ ಮತ್ತು ಸುಪ್ರೀತಾ ಈ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ಕಾಣಿಸುತ್ತಾರೆ.
ಅಚ್ಚು ಹಾಗು ಗುಬ್ಬಿಯ ಪ್ರೀತಿಯನ್ನು ವಿಧಿ ಹೇಗೆ ಕರೆದೊಯ್ಯುತ್ತದೆ ಎಂಬುವುದೇ ಈ ಕಥೆಯ ತಿರುಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.