ಕಲರ್ಸ್ ಕನ್ನಡ ಫೇಮಸ್ ಧಾರಾವಾಹಿ ಸೀತಾ ವಲ್ಲಭ | ಅಚ್ಚು-ಗುಬ್ಬಿ ಕ್ಯೂಟ್ ಲವ್ ಸ್ಟೋರಿಗೆ ಪ್ರೇಕ್ಷಕರು ಫಿದಾ !
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ‘ಸೀತಾ-ವಲ್ಲಭ’ ಮುದ್ದಾದ ಲವ್ ಸ್ಟೋರಿಯಿಂದ ಗಮನ ಸೆಳೆದ ಧಾರಾವಾಹಿ. ಈ ಧಾರಾವಾಹಿಯ ಮೈಥಿಲಿ ಪಾತ್ರಧಾರಿ, ಅಚ್ಚುವಿನ ಮುದ್ದಿನ ಗುಬ್ಬಿ ಮುದ್ದಾಗ ಅಭಿನಮಯದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಸ್ಥಿಗ್ನ ಸೌಂದರ್ಯದ ಖನಿ ಮೈಥಿಲಿಯ ನಿಜ ನಾಮಧೇಯ ಸುಪ್ರೀತಾ ಸತ್ಯನಾರಾಯಣ. ಇವರು ತಮ್ಮ ಸಿನಿ ಜರ್ನಿ ಬಗ್ಗೆ ಸುವರ್ಣ ನ್ಯೂಸ್.ಕಾಂ ಜೊತೆ ಮಾತನಾಡಿದ್ದಾರೆ.
ನಿಮ್ಮ ಹಿನ್ನಲೆ ಏನು?
undefined
ನಾನು ಮೂಲತಃ ಮೈಸೂರಿನವಳು. ಅಲ್ಲಿ ಎಂಜಿನೀಯರಿಂಗ್ ಮಾಡಿ ಕ್ಯಾಂಪಸ್ ಸೆಲಕ್ಷನ್ ಆಗಿ ಬೆಂಗಳೂರಿನಲ್ಲಿ ಒಂದು ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಸುಮಾರು ಒಂದೂವರೆ ವರ್ಷ ಕೆಲಸ ಮಾಡಿದೆ. ಶಾಲಾ ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನನಗೆ ಆಸಕ್ತಿ ಇತ್ತು. ಸ್ಕ್ಟ್ರಿಪ್ಟ್ ಬರಿತಿದ್ದೆ. ನನ್ನ ಫ್ರೆಂಡ್ ಒಬ್ರು ಕಲರ್ಸ್ ಕನ್ನಡದಲ್ಲಿ ಸ್ಕ್ರಿಪ್ಟ್ ಬರೆಯೋಕೆ ಕಾಲ್ ಮಾಡಿದಾರೆ. ಟ್ರೈ ಮಾಡು ಅಂದ್ರು. ಹೋಗಿ ಬರೆದೆ. ಸ್ವಲ್ಪ ದಿನದ ನಂತರ ಚಾನೆಲ್ ನವ್ರು ಕಾಲ್ ಮಾಡಿ ಆಡಿಶನ್ ಗೆ ಬನ್ನಿ ಅಂದ್ರು. ಹೋಗಿ ಆಡಿಶನ್ ಕೊಟ್ಟೆ. ಅಲ್ಲಿಂದ ಸೀತಾ-ವಲ್ಲಭ ಶುರು ಆಯ್ತು.
ಫಸ್ಟ್ ಟೈಂ ಕ್ಯಾಮೆರಾ ಫೇಸ್ ಮಾಡಿದ ಅನುಭವ ಹೇಗಿತ್ತು?
ಆಡಿಶನ್ ಗೆ ಬಂದವರಲ್ಲಿ ಹೆಚ್ಚಿನವರು ಎಕ್ಸ್ ಪೀರಿಯನ್ಸ್ ಇದ್ದವರು. ಅವರು ಕ್ಯಾಮೆರಾ ಫೇಸ್ ಮಾಡೋದನ್ನು ಗಮನಿಸ್ತಾ ಇದ್ದೆ. ಇದು ನನಗೆ ಹೆಲ್ಪ್ ಆಯ್ತು.
ಸೀತಾ-ವಲ್ಲಭಕ್ಕೆ ಹೇಗಿದೆ ರೆಸ್ಪಾನ್ಸ್?
ಸೀತಾ-ವಲ್ಲಭ ಕಥೆ ತುಂಬಾ ಕ್ಯೂಟಾಗಿದೆ. ಜನರಿಗೆ ಕಥೆ ಇಷ್ಟ ಆಗಿದೆ. ಪಾಸಿಟಿವ್ ರೆಸ್ಪಾನ್ಸ್ ಇದೆ. ಹೊರಗಡೆ ಹೋದಾಗ ಜನ ನನ್ನ ಗುಬ್ಬಿ ಎನ್ನುವ ಹೆಸರಿನಿಂದಲೇ ಗುರುತಿಸ್ತಾರೆ. ಇದರಿಂದ ತುಂಬಾ ಆಫರ್ಸ್ ಬರ್ತಾ ಇದೆ. ನಾನೇ ಟೈಂ ತಗೋತಾ ಇದೀನಿ.
ಸಿನಿಮಾಗೆ ಹೋಗುವ ಪ್ಲಾನ್ ಇದೆಯಾ?
ಸಿನಿಮಾಗೂ ಆಫರ್ಸ್ ಇದೆ. ಬಟ್ ಸ್ವಲ್ಪ ಟೈಂ ತಗೋತಾ ಇದೀನಿ. ಚಾಲೆಂಜಿಂಗ್ ರೋಲ್, ಡಿಫರೆಂಟ್ ರೋಲ್ ಮಾಡುವ ಆಸೆ ಇದೆ. ಮುಂದೆ ನೋಡೋಣ
ಮನೆಯವ್ರ ಸಪೋರ್ಟ್ ಹೇಗಿದೆ?
ನಾನು ಕೆಲಸ ಬಿಟ್ಟು ಸೀರಿಯಲ್ ಕಡೆ ಬರ್ತೀನಿ ಎಂದಾಗ ಯಾಕೆ ಈ ನಿರ್ಧಾರ ತಗೋತಿದೀಯಾ? ಅಂತ ಕೇಳಿದ್ರು. ಈಗ ನನಗಿಂತ ಅವರೇ ತುಂಬಾ ಖುಷಿಪಡ್ತಾ ಇದಾರೆ. ತುಂಬಾ ಸಪೋರ್ಟ್ ಇದೆ.
ನಿಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಫ್ಯಾಮಿಲಿಗೆ ಹೇಗೆ ಟೈಂ ಕೊಡ್ತೀರಿ?
ಬೆಳಿಗ್ಗೆ 7 ಕ್ಕೆ ಮನೆ ಬಿಟ್ರೆ ಬರೋದು ರಾತ್ರಿ ಒಂಭತ್ತಾಗುತ್ತೆ. ಫ್ಯಾಮಿಲಿಗೆ ಟೈಂ ಕೊಡೋಕೆ ಆಗಲ್ಲ. ಅದಕ್ಕಾಗಿಯೇ ಯಾವ ಆಫರ್ಸನ್ನೂ ಒಪ್ಕೋತಾ ಇಲ್ಲ. ಶೂಟಿಂಗ್ ಜಾಸ್ತಿ ಇದ್ದಾಗ ಸ್ಟ್ರೆಸ್ ಇರುತ್ತೆ. ಫ್ಯಾಮಿಲಿ ಜೊತೆ ವೀಕೆಂಡ್ ಕಳೆಯುತ್ತೇನೆ.
ನಿಮ್ಮ ಹವ್ಯಾಸಗಳೇನು?
ಫ್ರೀ ಟೈಮ್ ನಲ್ಲಿ ಡ್ಯಾನ್ಸ್, ಪೇಯಿಂಟಿಂಗ್ ಮಾಡ್ತೀನಿ. ಸ್ಕ್ರಿಪ್ಟ್ ಬರೆಯುತ್ತೇನೆ.
ನೀವು ಕಂಡಂತೆ ಈ ಫೀಲ್ಡ್ ಹೇಗೆ ಅನಿಸ್ತಾ ಇದೆ?
ಎಲ್ಲಾ ಕ್ಷೇತ್ರಗಳಲ್ಲಿ ಇರುವಂತೆ ಇಲ್ಲಿಯೂ ಕಾಂಪಿಟೇಶನ್ ಇದೆ. ಅದನ್ನು ಹೆಲ್ದಿ ಕಾಂಪಿಟೇಶನ್ ಆಗಿ ತಗೋಳೋದು ನಮ್ಮ ಕೈಯಲ್ಲಿದೆ. ನಾವು ಎಫರ್ಟ್ ಹಾಕದೇ ಹೋದ್ರೆ ಯಾರೂ ಸಹಾಯ ಮಾಡಲ್ಲ. ನೀವು ಹೇಗೆ ಇರ್ತಿರೋ ಜನ ಹಾಗೆ ಇರ್ತಾರೆ. ನಂಗೆ ಒಳ್ಳೆ ಟೀಂ, ಒಳ್ಳೆ ಬಿಗಿನಿಂಗ್ ಸಿಕ್ಕಿದೆ.
ಗುಬ್ಬಿಯವರು ಡಯಟ್ ಮಾಡ್ತಾರಾ?
ಇಲ್ಲ. ನಾನು ಡಯಟ್ ಏನೂ ಮಾಡಲ್ಲ. ಫುಡ್ಡಿ. ಜಂಕ್ ಫುಡ್ ಅವಾಯ್ಡ್ ಮಾಡ್ತೀನಿ. ಹೆಚ್ಚು ಹಣ್ಣು, ತರಕಾರಿ ತಿಂತೀನಿ.
ಯಾರಿಗಾದ್ರೂ ಥ್ಯಾಂಕ್ಸ್ ಹೇಳೋಕೆ ಇಷ್ಟಪಡ್ತೀರಾ?
ನನಗೆ ಅವಕಾಶ ಕೊಟ್ಟ ಕಲರ್ಸ್ ಕನ್ನಡಕ್ಕೆ ಬಿಗ್ ಥ್ಯಾಂಕ್ಸ್. ನನ್ನ ಫ್ಯಾಮಿಲಿ, ಫ್ರೆಂಡ್ಸ್, ಪ್ರೇಕ್ಷಕರಿಗೆ ಎಲ್ಲರಿಗೂ ಥ್ಯಾಂಕ್ಸ್ ಹೇಳೋಕೆ ಇಷ್ಟಪಡ್ತೀನಿ.
- ಶ್ರೀಲಕ್ಷ್ಮೀ ಎಚ್ ಎಲ್