
ಸತ್ಯ ಸೀರಿಯಲ್ ಮುಗಿದು ವರ್ಷವೇ ಕಳೆದಿದ್ದರೂ ಸೀರಿಯಲ್ ಪ್ರೇಮಿಗಳಿಗೆ ಈ ಸೀರಿಯಲ್ ಮನಸ್ಸಿನಲ್ಲಿ ಸದಾ ನೆಲೆಸಿರುತ್ತದೆ. ಅದಕ್ಕೆ ಸತ್ಯಳ ಅಕ್ಕನಾಗಿ, ನೆಗೆಟಿವ್ ರೋಲ್ ದಿವ್ಯಾಳ ಪಾತ್ರವನ್ನು ವಿಭಿನ್ನ ಶೇಡ್ಗಳಲ್ಲಿ ತೋರಿಸುತ್ತಲೇ ಎಲ್ಲರ ಮನಸ್ಸನ್ನು ಗೆದ್ದವರು ಪ್ರಿಯಾಂಕಾ ಶಿವಣ್ಣ. ಇವರು ತೆಲುಗು ಸೀರಿಯಲ್ಗಳಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡಿಗರಿಗೆ ಪರಿಚಯವಾದದ್ದು ಅಗ್ನಿಸಾಕ್ಷಿಯ ವಿಲನ್ ಪ್ರಿಯಾಂಕಾ ಮೂಲಕ. ಮೊದಲು ಈ ಪಾತ್ರದಲ್ಲಿ ನಟಿಸುತ್ತಿದ್ದಾಕೆ ಅರ್ಧಕ್ಕೆ ಬಿಟ್ಟಾಗ ಆ ಅವಕಾಶ ಪ್ರಿಯಾಂಕಾ ಅವರಿಗೆ ಒದಗಿ ಬಂತು. ಈ ಸೀರಿಯಲ್ನಲ್ಲಿ ನೆಗೆಟಿವ್ ರೋಲ್ ಮೂಲಕ ಎಲ್ಲರ ಮನೆ ಮಾತಾದರು ಪ್ರಿಯಾಂಕಾ. ಕೊನೆಗೆ ಸತ್ಯ ಸೀರಿಯಲ್ನಲ್ಲಿಯೂ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇಂತಿಪ್ಪ ನಟಿ ಪ್ರಿಯಾಂಕಾ ಈಗ ಮದುಮಗಳ ಲುಕ್ನಲ್ಲಿ ಮಿಂಚಿದ್ದಾರೆ. ವಿಡಿಯೋ ಒಂದನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ಏನೂ ಬರೆದಿಲ್ಲ. ಆದರೆ ಈ ವಿಡಿಯೋ ನೋಡಿದವರು, ಪ್ರಿಯಾಂಕಾ ಮದುವೆಯಾಗುತ್ತಿದೆ, ಎಂಗೇಜ್ಮೆಂಟ್ ಆಗುತ್ತಿದೆ ಎಂದೆಲ್ಲಾ ತಿಳಿದು ಕಮೆಂಟ್ಸ್ ಸುರಿಮಳೆಯನ್ನೇಗೈಯುತ್ತಿದ್ದಾರೆ. ಆದರೆ ಅಭಿಮಾನಿಗಳು ಇಷ್ಟೆಲ್ಲಾ ಕಮೆಂಟ್ಸ್ ಹಾಕಿದರೂ ನಟಿ ಪ್ರಿಯಾಂಕಾ ಮಾತ್ರ ಯಾರ ಕಮೆಂಟ್ಸ್ಗೂ ರಿಪ್ಲೈ ಮಾಡಲಿಲ್ಲ.
ಅಸಲಿಗೆ ಇದು ಪ್ರಿಯಾಂಕಾ ಅವರ ಮದುವೆ ಅಥವಾ ಎಂಗೇಜ್ಮೆಂಟ್ ವಿಡಿಯೋ ಇದ್ದಂತೆ ತೋರುತ್ತಿಲ್ಲ. ಅವರು ಇದಾಗಲೇ ಸಾಕಷ್ಟು ಪ್ರಮೋಷನ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕೂಡ ಜ್ಯುವೆಲ್ಲರಿ ಒಂದು ಪ್ರಮೋಷನ್ ಜಾಹೀರಾತು ಅಷ್ಟೇ. ಮದುವೆಗೆ ಆಭರಣ ಖರೀದಿ ಮಾಡಬೇಕು ಎಂದರೆ ಈ ಅಂಗಡಿಯಲ್ಲಿ ಖರೀದಿಸಿ, ಇಂತಿಷ್ಟು ಆಫರ್ ಇದೆ ಎಂದು ಇನ್ನೊಂದು ವಿಡಿಯೋ ಮಾಡಿದ್ದಾರೆ ನಟಿ. ಅದನ್ನು ನೋಡಿದವರಿಗೆ ಹಾಗೂ ನಟಿ ಏನೆಂದು ಹೇಳಿದ್ದಾರೆ ಎಂದು ಕೇಳಿಸಿಕೊಳ್ಳುವ ಪೇಷನ್ಸ್ ಇದ್ದವರಿಗೆ ಇದು ಕೇವಲ ಜಾಹೀರಾತು ಎಂದು ಗೊತ್ತಾಗುತ್ತದೆ. ಅಷ್ಟಕ್ಕೂ ಇನ್ಸ್ಟಾಗ್ರಾಮ್ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಬರುವ ಫೋಟೋಗಳನ್ನು, ವಿಡಿಯೋಗಳನ್ನು ಪೂರ್ತಿ ನೋಡಿ ಅದು ಏನು ಎಂದು ತಿಳಿದುಕೊಳ್ಳುವಷ್ಟು ತಾಳ್ಮೆ ಬಹಳ ಜನಕ್ಕಿಲ್ಲ. ಆದ್ದರಿಂದ ಫೋಟೋ ನೋಡಿದತಕ್ಷಣ, ಕಂಗ್ರಾಟ್ಸ್ ಎಂದು ಹಾಕಿಬಿಡುತ್ತಾರೆ. ಆದರೆ ಇಲ್ಲಿ ಅಸಲಿಯತ್ತೇ ಬೇರೆ ಇದೆ.
ಇನ್ನು ನಟಿ ಪ್ರಿಯಾಂಕಾ ಕುರಿತು ಹೇಳುವುದಾದರೆ, ಅಗ್ನಿಸಾಕ್ಷಿ, ತೆಲುಗಿನ ಕೃಷ್ಣ ತುಳಸಿ, ತಮಿಳಿನ ಪಿರಿಯಾದ್ ವರಂ ವೆಂಡಂ ಮುಂತಾದ ಸೀರಿಯಲ್ಗಳಲ್ಲಿ ನಟಿಸಿದ್ದು, ಜೂಮ್ ಹಾಗೂ ಫ್ಯಾಂಟಸಿ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 500ಕ್ಕೂ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ಇವರು ಮಾಡೆಲ್ ಕೂಡ. ಹಲವು ಪ್ರಸಿದ್ಧ ಬ್ರಾಂಡ್ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇನ್ನು ಇವರ ಶಿಕ್ಷಣದ ಕುರಿತು ಹೇಳುವುದಾದರೆ, ಬೆಂಗಳೂರಿನ ಕೇಂಬ್ರಿಡ್ಜ್ ಗಲ್ಸ್ ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬಳಿ ಅಳ್ವಾಸ್ ಕಾಲೇನಲ್ಲಿ ಓದಿರುವ ಪ್ರಿಯಾಂಕಾ, ಎಸ್ಡಿಎಂ ಕಾಲೇಜಿನಿಂದ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಇದರ ಜೊತೆಗೆ ಬಿಗ್ಬಾಸ್ ಕನ್ನಡ ಸೀಸನ್ 7ರಲ್ಲಿ ಸ್ಪರ್ಧಿಯಾಗಿಯೂ ಅವರು ಭಾಗವಹಿಸಿದ್ದರು. 2013ರಲ್ಲಿ ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಕಿರುತೆರೆ ಲೋಕಕ್ಕೆ ಕಾಲಿರಿಸಿದ ಇವರು ಇದೀಗ ಸೀರಿಯಲ್ಗಳಲ್ಲಿ ಸಕತ್ ಡಿಮಾಂಡ್ ಇರುವ ನಟಿ. 19 ವರ್ಷಕ್ಕೆ ಮಾಡೆಲಿಂಗ್ ಆರಂಭಿಸಿದ ಪ್ರಿಯಾಂಕಾಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಸೀರಿಯಲ್ ಒಳ್ಳೆ ಬ್ರೇಕ್ ನೀಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.