
ಬೆಂಗಳೂರು (ಸೆ. 28): ಸಂಗೀತ ಪ್ರಿಯರ ನೆಚ್ಚಿನ ಮ್ಯೂಸಿಕಲ್ ರಿಯಾಲಿಟಿ ಶೋ ಸರಿಗಮಪ ಸೀಸನ್ 15 ಶುರುವಾಗಿದೆ. ನಿಮ್ಮ ಸಂಗೀತ ಪ್ರತಿಭೆಯನ್ನು ಅನಾವರಣಗೊಳಿಸಲು ಸದವಕಾಶ ಒದಗಿ ಬಂದಿದೆ. ಸಂಗೀತ ದಿಗ್ಗಜರೆಲ್ಲಾ ಒಂದಾಗಿದ್ದಾರೆ. ಸಂಭ್ರಮದ ವಾತಾವರಣ ಮನೆ ಮಾಡಿದೆ. ಸಂಗೀತ ದೇವಿಯ ಆರಾಧನೆ ಶುರುವಾಗುವುದೊಂದೇ ಬಾಕಿ ಉಳಿದಿದೆ.
ಗಾಯಕರಾದ ವಿಜಯ್ ಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಸಂಗೀತ ಮಾಂತ್ರಿಕ ಹಂಸಲೇಖ ಸಾರಥ್ಯ ವಹಿಸಲಿದ್ದಾರೆ. ಕಳೆದ ಸೀಸನ್ ನಲ್ಲಿ ಕಾಣೆಯಾಗಿದ್ದ ರಾಜೇಶ್ ಕೃಷ್ಣನ್ ಈ ಬಾರಿ ಆಗಮಿಸಿದ್ದಾರೆ. ರಾಜೇಶ್ ಕೃಷ್ಣನ್ ಆಗಮನ ಇನ್ನಷ್ಟು ಕಳೆ ತಂದಿದೆ. ಜೀ ಕನ್ನಡ ವಾಹಿನಿ ಈಗಾಗಲೇ ಪ್ರೋಮೋ ಬಿಟ್ಟಿದ್ದು ಸಿಕ್ಕಾಪಟ್ಟೆ ವ್ಯೂ ಆಗಿದೆ. ಪ್ರೋಮೋ ಝಲಕ್ ಇಲ್ಲಿದೆ ನೋಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.