
ಬೆಂಗಳೂರು[ಅ.1] ದಕ್ಷಿಣ ಭಾರತದ ಸಂಗೀತ ಮಾಂತ್ರಿಕ ಹಂಸಲೇಖ ಅವರೇ ಸ್ಥಳದಿಂದ ಎದ್ದು ನಿಂತು ತಾವು ಹಾಕಿಕೊಂಡಿದ್ದ ಶಾಖನ್ನು ಹನುಮಂತನಿಗೆ ಹಾಕಿ ಆತನ ಟವೆಲ್ ತಮ್ಮ ಹೆಗಲಿಗೆ ಹಾಕಿಕೊಂಡರು.
ಜಾನಪದ ಲೋಕದ ಜ್ಞಾನಿಗಳು ಕಂಡ ಕನಸು ನನಸಾಗುತ್ತಿದೆ. ದೂರದ ಹಳ್ಳಿಯಲ್ಲಿ ಕುರಿ ಮೇಯಿಸುತ್ತಿದ್ದವ ಇಂದು ಸಂಗೀತ ಸ್ಪರ್ಧೆತ ಆಡಿಷನ್ ನಲ್ಲಿ ಪಾಲ್ಗೊಂಡು ಆಯ್ಕೆ ಯಾಗುತ್ತಿರುವುದಕ್ಕಿಂತ ಇನ್ನೇನು ಬೇಕು ಎಂದರು?
ಗಾಯಕನ ಹೆಸರು ಹನುಮಂತ, ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರಬಡ್ನಿ ತಾಂಡಾದಿಂದ ಖಾಸಗಿ ವಾಹಿನಿ ನಡೆಸಿ ಕೊಡುತ್ತಿರುವ ರಿಯಾಲಿಟಿ ಶೋದಲ್ಲಿ ಭಾಗವಹಿಸಿಲು ಬಂದಿದ್ದಾರೆ. ಆತನ ಹಾಡನ್ನು ಮೆಚ್ಚಿ ಕಾರ್ಯಕ್ರಮದ ನಿರ್ಣಯಕಾರರು ಹೊಗಳುತ್ತಿದ್ದರೆ ಅಲ್ಲಿ ಏನಾಗುತ್ತಿದೆ ಎಂಬ ಅರಿವು ಇಲ್ಲದೇ ಹನುಮಂತ ನಿಂತಿದ್ದಾರೆ. ಅವರಿಗೆ ತಮ್ಮ ವಯಸ್ಸಿನ ಬಗ್ಗೆಯೂ ಸ್ಪಷ್ಟ ಕಲ್ಪನೆ ಇಲ್ಲ.. ಆಧುನಿಕ ಪ್ರಪಂಚದ ಗಲೀಜು ಸೋಕದ ಹೂವೊಂದು ಇದೀಗ ಸಂಗೀತ ವೇದಿಕೆಯನ್ನೇರಿದೆ ಎಂದಷ್ಟೆ ಹೇಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.