ತನ್ನ ಮತ್ತು ಭುವನ್ ನಿಶ್ಚಿತಾರ್ಥದ ಬಗ್ಗೆ ಮಾತನಾಡಿದ ಸಂಜನಾ

Published : Oct 21, 2017, 03:11 PM ISTUpdated : Apr 11, 2018, 12:35 PM IST
ತನ್ನ ಮತ್ತು ಭುವನ್ ನಿಶ್ಚಿತಾರ್ಥದ ಬಗ್ಗೆ ಮಾತನಾಡಿದ ಸಂಜನಾ

ಸಾರಾಂಶ

ನಟಿ ಸಂಜನಾ ಹಾಗೂ ಭುವನ್ ಮದುವೆ ಆಗುತ್ತಿದ್ದಾರೆ. ಮುಂದಿನ ತಿಂಗಳು 12ಕ್ಕೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆಂಬ ಸುದ್ದಿ ಸುಳ್ಳು ಎಂದು ಸ್ವತಃ ಸಂಜನಾ ಅವರೇ ಸ್ಪಷ್ಟಪಡಿಸಿದ್ದಾರೆ. ಇಬ್ಬರ ನಿಶ್ಚಿತಾರ್ಥ ಸುದ್ದಿ ಸೋಷಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿತ್ತು. ಅಹ್ವಾನ ಪತ್ರಿಕೆ ಸಮೇತ ಸುದ್ದಿಯಾಗುತ್ತಿತ್ತು. ಅಲ್ಲದೆ ಸಂಜನಾ ಅವರ ಇನ್ ಸ್ಟಗ್ರಾಮ್‌'ನಲ್ಲಿ ನಿಶ್ಚಿತಾರ್ಥ, ಜಾಗ, ಸಮಯ ಇತ್ಯಾದಿ ವಿವರಣೆಗಳನ್ನು ಒಳಗೊಂಡ ಅಹ್ವಾನ ಪತ್ರಿಕೆಯನ್ನು ಟ್ಯಾಗ್ ಮಾಡಿದ್ದರು. ಫೇಸ್‌'ಬುಕ್‌ನಲ್ಲೂ ಹಾಕಲಾಗಿತ್ತು. ಆದರೆ, ಇದು ಮಾಡಿದ್ದು ಯಾರು ಎಂಬುದು ಸ್ವತಃ ಸಂಜನಾ ಅವರಿಗೇ ಗೊತ್ತಿಲ್ಲವಂತೆ. ಆದರೂ ಅವರು ಇದನ್ನು ಸುಳ್ಳು ಸುದ್ದಿ ಎಂದು ಅವರೇ ಎಲ್ಲರಿಗೂ ಎಸ್‌ಎಂಎಸ್ ಮೂಲಕ ಸ್ಪಷ್ಟನೆ ನೀಡುತ್ತಿದ್ದಾರೆ.

ಅವರ ಸ್ಪಷ್ಟನೆ ಪ್ರಕಾರ ಹೀಗೆ ಸುದ್ದಿ ಹಬ್ಬಿಸುತ್ತಿರುವುದು ಯಾರೋ ಗೊತ್ತಿಲ್ಲ. ಆದರೆ, ಮಾಧ್ಯಮಗಳಿಗೆ ನನ್ನ ನಿಶ್ಚಿತಾರ್ಥದ ಅಹ್ವಾನ ಪತ್ರಿಕೆಗೆ ಸಿಕ್ಕಿದೆ. ಇದು ಸುಳ್ಳು. ನಾನು ಮತ್ತು ಭುವನ್ ಅವರು ಮದುವೆ ಆಗುವ ಯಾವ ಯೋಚನೆಗಳು ಇಲ್ಲ. ಆದರೂ ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ವೈಯಕ್ತಿಕ ಜೀವನಕ್ಕೆ ತೊಂದರೆ ಕೊಡುತ್ತಿದ್ದಾರೆ. ಆದರೆ, ಸೋಷಲ್ ಮೀಡಿಯಾಗಳನ್ನು ನಮ್ಮ ಕೈಯಲ್ಲಿ ಇಲ್ಲ. ಹೀಗಾಗಿ ಯಾರು ಏನು ಬೇಕಾದರೂ ಸುದ್ದಿ ಮಾಡುತ್ತಾರೆ ಮತ್ತು ಹಬ್ಬಿಸುತ್ತಾರೆ. ಈಗ ಅದಕ್ಕೆ ಆಹಾರವಾಗಿದ್ದೇನೆ ಎಂದು ಬೇಸರ ತೋಡಿಕೊಳ್ಳುತ್ತಾರೆ.

ಸದ್ಯಕ್ಕೆ ಬಿಗ್‌'ಬಾಸ್‌'ನಿಂದ ಬಂದ ಮೇಲೆ ಸಂಜನಾ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ತೆಲುಗು ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಬಂದಿದ್ದರೂ ಸದ್ಯಕ್ಕೆ ಒಪ್ಪಿಲ್ಲ. ಆದರೆ, ಈ ನಡುವೆ ಅವರ ನಿಶ್ಚಿತಾರ್ಥ ಕುರಿತು ಸುಳ್ಳು ಸುದ್ದಿಗಳು ಹಬ್ಬಿರುವುದರಿಂದ ಬೇಸರಗೊಂಡಿದ್ದಾರೆ. ಸಂಜನಾ, ಭುವನ್ ಪೊನ್ನಣ್ಣ ಮತ್ತು ಪ್ರಥಮ್ ಬಿಗ್‌'ಬಾಸ್ ಸೀಸನ್‌ 4ರಲ್ಲಿ ಭಾಗವಹಿಸಿದ್ದರು. ಅದಾದ ಮೇಲೆ ಈ ಮೂವರು ಅಭಿನಯಿಸಿದ ಸಂಜು ಮತ್ತು ನಾನು ಧಾರಾವಾಹಿ ಕೂಡ ಪ್ರಸಾರವಾಗಿತ್ತು. ಆ ಸಂದರ್ಭದಲ್ಲಿ ಪ್ರಥಮ್ ಮತ್ತು ಭುವನ್ ಜಗಳಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ವರದಿ: ಸಿನಿವಾರ್ತೆ, ಕನ್ನಡಪ್ರಭ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial: ಮೋಸಗಾತಿಯ ಬಲೆಗೆ ಬಿದ್ದ ನಿಧಿ Red Light ಏರಿಯಾದಲ್ಲಿ ಸಿಕ್ಕಾಕ್ಕೊಂಡ್ಲು! ಮುಂದೇನು?
ಗಂಡ-ಹೆಂಡ್ತಿ ಮಲಗಿದ್ರೂ ಬೆಡ್​ರೂಂ ಯಾವಾಗ್ಲೂ ಯಾಕೆ ಓಪನ್​ ಇರ್ಬೇಕು ಗೊತ್ತಾ? ಸೀರಿಯಲ್​ ಪ್ರೇಮಿಗಳು ಉತ್ತರಿಸ್ತಾರೆ ಕೇಳಿ!