
ಅಪ್ಪ-ಅಮ್ಮಂಗೇ ಫ್ಯಾನ್ ಫಾಲೋಯರ್ಸ್ ಪಟ್ಟಿಯಲ್ಲಿ ಕಾಂಪಿಟೇಷನ್ ಕೊಡೋ ಮಟ್ಟಕ್ಕೆ ಫೇಮಸ್ ಆಗುತ್ತಿರುವ ಸ್ಯಾಂಡಲ್‌ವುಡ್ ಮಿನಿ ಸಿಂಡ್ರೆಲಾ ಐರಾ ಯಶ್ ಫೋಟೋಸ್ ಹಾಗೂ ವಿಡಿಯೋ ನೋಡಲು ಜನರು ಕಾತುರದಿಂದ ಕಾಯುತ್ತಿರುತ್ತಾರೆ.
ಕೆಜಿಎಫ್ ಚಿತ್ರದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ರಾಕಿ ಬಾಯ್ ಸಮಯ ಮಾಡಿಕೊಂಡು ಮಗಳಿಗಾಗಿ ಕಾಲ ಕಳೆಯುತ್ತಾರೆ. ಬಹಳ ವರ್ಷಗಳಾದರೂ ತಮಗಾಗಿ ಶಾಪಿಂಗ್ ಮಾಡ ಈ ಜೋಡಿ, ಮಗಳಿಗಾಗಿ ಬೊಂಬೆ ಕೊಳ್ಳಲು ತೆರಳಿದ್ದರು. ಶಾಪಿಂಗ್ ಮಾಲ್‌ನಲ್ಲಿ ಕಳೆದ ಕ್ಷಣಗಳನ್ನು ಅದ್ಭುತವೆಂದು ಅವರು ವರ್ಣಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋವನ್ನು ರಾಧಿಕಾ ಶೇರ್ ಮಾಡಿಕೊಂಡಿದ್ದಾರೆ.
‘ನಮಗಂಥ ಶಾಪಿಂಗ್ ಮಾಡಿ ವರ್ಷಗಳೇ ಆದವು. ಆದ್ರೆ ಐರಾಗೆ ಆಟದ ಸಾಮಾನು ತರಲು ಮಾಲ್‌ಗೆ ಬಂದಿದ್ದೀವಿ. ಜೀವನ ಹೇಗೆ ಬದಲಾಗುತ್ತೆ ಅಲ್ವಾ? ಟಾಯ್ ಶಾಪಿನಲ್ಲಿ ಕಳೆದ ಸಮಯ ನಮಗೆ ಖುಷಿ ತಂದಿದೆ...’ ಎಂದು ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಯಶ್ ಮಗಳೊಂದಿಗೆ ಆಟವಾಡುವಾಗ ಅಭಿಮಾನಿಗಳಿಗೆ ಹಾಯ್ ಹೇಳಿಸಿರುವ ವಿಡಿಯೋ ವೈರಲ್ ಆಗಿತ್ತು. ಮತ್ತೊಂದು ಹೊಸ ಅತಿಥಯ ಆಗಮನಕ್ಕೆ ಈ ಜೋಡಿ ಕಾತುರದಿಂದ ಕಾಯುತ್ತಿದೆ.
ಐರಾಳ ತೊದಲು ಮಾತು! ‘ಹಾಯ್’ ಹೇಳಿಸಿದ ರಾಕಿಂಗ್ ಸ್ಟಾರ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.