
‘ರ‍್ಯಾಂಬೋ 2’ ನಂತರ ‘ವಿಕ್ಟರಿ 2’ ಸರದಿ. ಹಾಗಾಗಿ ಶರಣ್ ಖುಷಿಯಾಗಿದ್ದಾರೆ. ‘ವಿಕ್ಟರಿ 2’ ಚಿತ್ರದ ಹಾಡಿನ ಚಿತ್ರೀಕರಣಕ್ಕೆ ರಷ್ಯಾಗೂ ಹೋಗಿ ಬಂದಿದ್ದಾರೆ. ತರುಣ್ ಶಿವಪ್ಪ ನಿರ್ಮಾಣದ, ಹರಿ ಸಂತು ನಿರ್ದೇಶನದ, ಅಪೂರ್ವ ನಟನೆಯ ಚಿತ್ರದ ಕುರಿತು ಶರಣ್ ಹೇಳಿದ ಮಾತುಗಳು ಇಲ್ಲಿವೆ.
- ವಿದೇಶ ಪ್ರವಾಸಗಳ ಪೈಕಿ ರಷ್ಯಾ ಪ್ರವಾಸಕ್ಕೆ ಹೋಗಿದ್ದು ಇದೇ ಮೊದಲು. ಅದರಲ್ಲೂ ರಷ್ಯಾ ರಾಜಧಾನಿ ಮಾಸ್ಕೋದಿಂದ ಬಹು ದೂರದಲ್ಲಿರುವ ಬಕು ಒಂದು ಸುಂದರ ಪ್ರದೇಶ. ಅಲ್ಲಿನ ಪ್ರಕೃತಿ, ಬೃಹದಾಕಾರದ ಕಟ್ಟಡಗಳು, ಗುಡಿ ಗೋಪುರಗಳು, ನಗರದೊಳಗಿನ ರಸ್ತೆಗಳು ಎಲ್ಲವೂ ಮನಮೋಹಕ. ಅಂತಹ ತಾಣಗಳಲ್ಲಿ ಚಿತ್ರೀಕರಣ ನಡೆಸುವುದೇ ಆನಂದ. ಕನ್ನಡದ ಮಟ್ಟಿಗೆ ಇದುವರೆಗೂ ಅಲ್ಲಿ ಯಾವುದೇ ಕನ್ನಡ ಚಿತ್ರಗಳು ಚಿತ್ರೀಕರಣ ಗೊಂಡಿಲ್ಲ. ಅಂತಹ
ಜಾಗಗಳಲ್ಲಿ ಚಿತ್ರೀಕರಿಸಿದ್ದು ನಮಗೂ ಖುಷಿಯಿದೆ.
- ಸಕ್ಸಸ್ ಕಂಡ ಒಂದು ಸಿನಿಮಾದ ಟೈಟಲ್ ಮೂಲಕ ಮತ್ತೊಂದು ಸಿನಿಮಾ ಶುರುವಾಗುತ್ತಿದೆ ಅಂದಾಗ ಮೊದಲ ಚಿತ್ರಕ್ಕೂ, ಸೆಟ್ಟೇರಿದ ಹೊಸ ಚಿತ್ರಕ್ಕೂ ಲಿಂಕ್ ಇದ್ದೇ ಇರುತ್ತೆ, ಇರಲೇಬೇಕು ಕೂಡ. ಹಾಗೊಂದು ಕನೆಕ್ಷನ್ ಈ ಚಿತ್ರಕ್ಕೂ ಇದೆ. ನನ್ನ ಪ್ರಕಾರ ಈ ಸಿನಿಮಾ ‘ವಿಕ್ಟರಿ’ ಚಿತ್ರದ ಮುಂದುವರೆದ ಭಾಗವೇ. ಯಾಕಂದ್ರೆ, ಅದರ ಛಾಪು ಇಲ್ಲೂ ಇದೆ. ಅಲ್ಲಿನ ಪಾತ್ರಗಳು ಇಲ್ಲೂ ಇವೆ. ಕನೆಕ್ಷನ್ ಅನ್ನೋದು ಅಷ್ಟು ಮಾತ್ರ. ಅದು ಬಿಟ್ಟರೆ ಇದೊಂದು ಹೊಸ ಬಗೆಯ ಕತೆ. ಹೊಸ ತೆರನಾದ ಪಾತ್ರಗಳು. ಅದರ ಜತೆಗೆ ಹೊಸ ರೀತಿಯ ನಿರೂಪಣೆಯೂ ಇಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.