
ಅಂದಹಾಗೆ ಈ ಚಿತ್ರದ ಇಂಟರೆಸ್ಟಿಂಗ್ ಸಂಗತಿಗಳೇನು ಗೊತ್ತಾ?
1) ಧ್ರುವ ಸರ್ಜಾ ಈ ಚಿತ್ರಕ್ಕಾಗಿ 30 ಕೆಜಿಯಷ್ಟು ದೇಹದ ತೂಕ ಇಳಿಸಿಕೊಳ್ಳಲಿದ್ದಾರೆ. ಅದಕ್ಕಾಗಿಯೇ ಅವರು ಹೆಚ್ಚು ಕಡಿಮೆ ಒಂದೂವರೆ ತಿಂಗಳಿಂದ ಭರ್ಜರಿ ವರ್ಕೌಟ್ ಶುರು ಮಾಡಿದ್ದಾರೆ. ಹಾಗಂತ ವರ್ಕೌಟ್ ಅವರಿಗೆ ಹೊಸದಲ್ಲ. ಹೀರೋ ಆದ್ಮೇಲೆ ಕಟ್ಟು ಮಸ್ತಾಗಿ ದೇಹ ಹುರಿಗಟ್ಟಿಸಿಕೊಂಡಿರಬೇಕು ಅನ್ನೋ ಕಾರಣಕ್ಕೆ ಧ್ರುವ ಸರ್ಜಾ ಹೀರೋ ಆಗಿ ಬೆಳ್ಳಿತೆರೆಗೆ ಬರಬೇಕು ಅಂತ ನಿರ್ಧರಿಸಿದ ದಿನದಿಂದ ಜಿಮ್‌ಗೆ ಹೋಗುತ್ತಲೇ ಇದ್ದಾರೆ. ಆದರೆ ಈಗ ಅವರಿಗೆ ಇರುವ ಸವಾಲು 30 ಕೆಜಿಯಷ್ಟು ದೇಹದ ತೂಕ ಇಳಿಸಿಕೊಳ್ಳಬೇಕಾಗಿರುವುದು.
2) ‘ಭರ್ಜರಿ’ ತೆರೆ ಕಂಡ ಕ್ಷಣದಿಂದಲೇ ಪೊಗರು ಸುದ್ದಿ ಮಾಡುತ್ತಾ ಬಂದಿದೆ. ಅಂದಿನಿಂದಲೇ ಧ್ರುವ ಸರ್ಜಾ ಪಾತ್ರಕ್ಕಾಗಿ ಬದಲಾಗಲು ಶುರು ಮಾಡಿದ್ದರು. ಒಂದು ಮೂಲದ ಪ್ರಕಾರ ಚಿತ್ರದ ಪಾತ್ರಕ್ಕಾಗಿ ನಿರ್ದೇಶಕ ನಂದ ಕಿಶೋರ್ ಕೊಟ್ಟ ಟಾರ್ಗೆಟ್ ಪ್ರಕಾರ ಈಗಾಗಲೇ 10 ಕೆಜಿಯಷ್ಟು ತೂಕ ಇಳಿಸಿದ್ದಾರಂತೆ ಧ್ರುವ ಸರ್ಜಾ. ಉಳಿದಿದ್ದು 20 ಕೆಜಿ. ಇಷ್ಟರಲ್ಲಿಯೇ ಅದು ಕೂಡ ಕರಗಲಿದೆಯಂತೆ.
3) ನಿರ್ದೇಶಕ ನಂದ ಕಿಶೋರ್ ಸಿನಿಮಾ ಮೇಕಿಂಗ್ ಶೈಲಿ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಇದೇ ಮೊದಲು ಅವರು ಹೊಸದೊಂದು ಕತೆ ಹೇಳಲು ಹೊರಟಿದ್ದಾರಂತೆ. ಈ ಚಿತ್ರದಲ್ಲಿ ನಟ ಧ್ರುವ ಸರ್ಜಾ ಹೈಸ್ಕೂಲ್ ಮುಗಿಸಿ, ಕಾಲೇಜಿಗೆ ಕಾಲಿಟ್ಟ ಹುಡುಗ. ಆ ಪಾತ್ರಕ್ಕೆ ತಕ್ಕಂತೆ ಅವರ ಲುಕ್ ಇರಬೇಕು ಅನ್ನೋ ಕಾರಣಕ್ಕೆ ಬರೋಬ್ಬರಿ 30 ಕೆಜಿಯಷ್ಟು ದೇಹದ ತೂಕ ಇಳಿಸುವ ಕಸರತ್ತು ಶುರುವಾಗಿದೆ ಎನ್ನುತ್ತಿವೆ ಮೂಲಗಳು. ವಿಶೇಷ ಅಂದರೆ ಈ ಚಿತ್ರದ ನಾಯಕಿ ಪಾತ್ರಕ್ಕೆ ಶಾನ್ವಿ ಶ್ರೀವಾಸ್ತವ್ ಆಯ್ಕೆಯಾಗುವ ಸಾಧ್ಯತೆ ಇದೆ.
--
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.