
ಬೆಂಗಳೂರು(ಜು.24): ಕನ್ನಡ ಚಿತ್ರರಂಗದ ಅತಿ ದೊಡ್ಡ ಸಿನಿಮಾ 'ಕುರುಕ್ಷೇತ್ರ' ಸೆಟ್ಟೇರುತ್ತಿದೆ.ಜುಲೈ-30 ರಂದು ಚಿತ್ರಕ್ಕೆ ಅದ್ಧೂರಿ ಮುಹೂರ್ತ ನೆರವೇರಲಿದೆ. ಆದರೆ, ಈ ಚಿತ್ರದ ಕುರಿತು ಪಾತ್ರಧಾರಿಗಳ ಆಯ್ಕೆ ಬಗ್ಗೆ ಸಾಕಷ್ಟು ಕುತೂಹಲ ಇತ್ತು.ಯಾವ್ ಸ್ಟಾರ್ ಯಾವ್ ಪಾತ್ರ ಮಾಡ್ತಾರೆಂಬ ಪ್ರಶ್ನೆನೂ ಇತ್ತು. ಈಗ ಅದಕ್ಕೆ ತೆರೆ ಬಿದ್ದಿದೆ.
ನಿರ್ಮಾಪಕ ಮುನಿರತ್ನ ತಮ್ಮ ಈ ಕನಸಿನ ಚಿತ್ರವನ್ನ ಅದ್ದೂರಿಯಾಗಿಯೇ ತೆರೆಗೆ ತರಲಿದ್ದಾರೆ. ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ಗಳನ್ನ ಹಾಕಿಕೊಂಡೇ ಕನ್ನಡದ ಕ್ಯಾನ್ವಾಸ್ ಮೇಲೆ ಕುರುಕ್ಷೇತ್ರವನ್ನೆ ಸೃಷ್ಟಿ ಮಾಡಲು ಹೊರಟಿದ್ದಾರೆ.
ಅಂತಿಮಗೊಂಡ ಪಾತ್ರಗಳ ಪರಿಚಯ
ಚಾಲೆಂಜಿಂಗ್ ಸ್ಟಾರ್ ದರ್ಶನ್- ದುರ್ಯೋಧನ
ಕ್ರೇಜಿ ಸ್ಟಾರ್ ರವಿಚಂದ್ರನ್- ಕೃಷ್ಣ
ಅಂಬರೀಶ್- ಭೀಷ್ಮಾಚಾರ್ಯ
ನಿಖಿಲ್ ಕುಮಾರ್- ಅಭಿಮನ್ಯು
ಶ್ರೀನಾಥ್- ಧೃತರಾಷ್ಟ್ರ
ಶಶಿಕುಮಾರ್- ಧರ್ಮರಾಯ
ಶ್ರೀನಿವಾಸ್ ಮೂರ್ತಿ- ದ್ರೋಣಾಚಾರ್ಯ
ಅವಿನಾಶ್- ಗಾಂಧರ್ವ ರಾಜ
ಸ್ನೇಹಾ- ದ್ರೌಪತಿ
ಲಕ್ಷ್ಮೀ- ಕುಂತಿ
ಕುರುಕ್ಷೇತ್ರ ಚಿತ್ರದಲ್ಲಿ ಇಷ್ಟೆಲ್ಲ ಪಾತ್ರಗಳಿವೆ. ಕನ್ನಡದ ಹೆಸರಾಂತ ಕಲಾವಿದರೇ ಈ ಎಲ್ಲ ಪಾತ್ರಗಳನ್ನ ಮಾಡ್ತಿದ್ದಾರೆ. ಚಿತ್ರದ ನಿರ್ದೇಶಕ ನಾಗಣ್ಣ ಇದನ್ನ ಸುವರ್ಣ ನ್ಯೂಸ್ ಗೆ ಖಚಿತ ಪಡಿಸಿದ್ದಾರೆ. ಜುಲೈ 30 ಕ್ಕೆ ಅದ್ಧೂರಿಯಾಗಿಯೇ ಬೆಂಗಳೂರಿನ ಪ್ರಭಾಕರ್ ಕೋರಿ ಕನ್ವೆನ್ಷನ್ ಹಾಲ್'ನಲ್ಲಿ ಸಂಜೆ 6 ಗಂಟೆ ಮೇಲೆ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಚಿತ್ರದಲ್ಲಿ ನಟಿ ಹರಿಪ್ರಿಯಾ ಪ್ರಮುಖ ಪಾತ್ರ ಮಾಡ್ತಿದ್ದಾರೆ.ನಟಿ ರೆಜಿನಾ ನಟಿಸೋ ಸಾಧ್ಯತೆನೂ ಇದೆ.
ಈ ಚಿತ್ರದ ಬಗ್ಗೆ ಚಂದನವದಲ್ಲಿ ಭಾರೀ ಸದ್ದು ಇದೆ. ಸುದ್ದೀನೂ ಇದೆ.ಅಂತಹ ಈ ಚಿತ್ರಕ್ಕೆ ಜಯ್ ವಿನ್ಸೆಂಟ್ ಕ್ಯಾಮೆರಾ ವರ್ಕ್ ಮಾಡ್ತಿದ್ದಾರೆ. ಕನ್ನಡದ ಈ ಕುರುಕ್ಷೇತ್ರಕ್ಕೆ ಬಾಹುಬಲಿ ಖ್ಯಾತಿಯ ಕಿಂಗ್ ಸಾಲೋಮನ್ ಸಾಹಸ ನಿರ್ದೇಶನ ಕೌತುಕದ ರಣರಂಗವನ್ನೇ ಸೃಷ್ಠಿ ಮಾಡಲಿದೆ. ಕುರುಕ್ಷೇತ್ರಕ್ಕೆ ವಿ. ಹರಿಕೃಷ್ಣರ ಸಂಗೀತ ಮೊಳಗಲಿದೆ. ಜೋ.ನಿ.ಹರ್ಷಾ ಸಂಕಲನ ಮಾಡಲಿದ್ದಾರೆ. 100 ಕ್ಕೂ ಹೆಚ್ಚು ದಿನ ಒಂದೇ ಹಂತದಲ್ಲಿಯೇ ಇಡೀ ಕುರುಕ್ಷೇತ್ರ ಚಿತ್ರವನ್ನ ನಾಗಣ್ಣ ಚಿತ್ರಸಲಿದ್ದಾರೆ.ಕನ್ನಡದ ಈ ಕುರುಕ್ಷೇತ್ರ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ನಿರೀಕ್ಷೆಯನ್ನ ಈಗಲೇ ಹುಟ್ಟು ಹಾಕಿದೆ.
-ರೇವನ್ ಪಿ.ಜೇವೂರ್, ಸುವರ್ಣ ನ್ಯೂಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.