ಕ್ಯಾನ್ಸರ್ ಅಭಿಮಾನಿ ಸಹಾಯಕ್ಕೆ ಮುಂದಾದ ಕಿಚ್ಚ!

By Web DeskFirst Published Nov 23, 2018, 4:06 PM IST
Highlights

ಅಭಿಮಾನಿಗಳ ಸಂತೋಷ, ನೋವಿಗೆ ಸದಾ ಸ್ಪಂದಿಸುವ ಕಿಚ್ಚ ಸುದೀಪ್, ಇದೀಗ ಮತ್ತೆ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಹೇಗೆ? ಮಾಡಿದ್ದೇನು?

ಅಭಿಮಾನಿಗಳೇ ದೇವರೆಂದು ಕೊಳ್ಳುತ್ತಾರೆ ಸ್ಯಾಂಡಲ್‌ವುಡ್ ಸ್ಟಾರ್‌ಗಳು. ಅದರಲ್ಲಿಯೂ ಕಿಚ್ಚ ಸುದೀಪ್ ಅಭಿಮಾನಿಯ ಪ್ರತಿಯೊಂದೂ ಟ್ವೀಟಿಗೆ ರೆಸ್ಪಾನ್ಸ್ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದಾರೆ.

ಅಭಿಮಾನಿಯ ತಾಯಿಯೊಬ್ಬರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರ ನೆರವಿಗೂ ಕಿಚ್ಚ ಧಾವಿಸಿದ್ದಾರೆ. ಟ್ವಿಟರ್‌ನಲ್ಲಿ ಬಹಳ ಆ್ಯಕ್ಟಿವ್ ಆಗಿರೋ ಕಿಚ್ಚ, ಹೊಗಳಿಕೆಗೆ ಮಾತ್ರವಲ್ಲ, ಪ್ರತಿಯೊಬ್ಬರ ನೋವಿಗೂ ಸ್ಪಂದಿಸುತ್ತಾರೆ.

ತಮ್ಮ ಅಪ್ಪಟ ಅಭಿಮಾನಿಯೊಬ್ಬ ತನ್ನ ಟ್ವಿಟರ್ ಅಕೌಂಟ್‌ನಲ್ಲಿ ತಾಯಿ ಸ್ತನದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಧನ ಸಹಾಯ ಮಾಡಬೇಕಾಗಿ ವಿನಂತಿಸಿಕೊಂಡಿದ್ದರು. ಈಗಾಗಲೆ ಎರಡು ಸಲ ಆಪರೇಷನ್ ಮಾಡಿಸಿದ್ದು, ಮತ್ತೊಮ್ಮೆ ರೋಗ ಉಲ್ಬಣಿಸಿದೆ. ಮತ್ತೊಮ್ಮೆ ಆಪರೇಷನ್ ಮಾಡಿಸಲು ವೈದ್ಯರು ಹೇಳಿದ್ದಾರೆ. ಇದರ ವೆಚ್ಚದ ಬಗ್ಗೆ ಸಹಾಯ ಮಾಡಬೇಕೆಂದೂ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿಚ್ಚ, ‘ನನ್ನ ಸಾಮರ್ಥ್ಯಕ್ಕಾಗುವಷ್ಟು ಸಹಾಯ ಮಾಡುತ್ತೇನೆ. ಆಸ್ಪತ್ರೆ ವಿಳಾಸ ಕಳುಹಿಸಿದರೆ, ನನ್ನವರು ಆಸ್ಪತ್ರೆಯೊಂದಿಗೆ ಮಾತನಾಡುತ್ತಾರೆ,' ಎಂದು ಭರವಸೆ ನೀಡಿದ್ದಾರೆ. 'ಎಲ್ಲವೂ ಸರಿ ಹೋಗಿ, ಬೇಗ ಗುಣ ಮುಖರಾಗಲೆಂದು ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ,’ಎಂದು ಟ್ವೀಟ್ ಮಾಡಿದ್ದಾರೆ.

 

I Wil do my best my friend... Do lemme know the hospital n my people Wil contact.. My prayers for her recovery. https://t.co/stsZdU06ik

— Kichcha Sudeepa (@KicchaSudeep)

ಅಣ್ಣ ನಮ್ಮ ಅಮ್ಮಇವರು ಹೆಸರು ಮಂಗಳಮ್ಮ ವಯಸ್ಸು 40 ಇವರು 4 ವರ್ಷಗಳಿಂದ ಬಿರ್ಸ್ಟ್ ಕ್ಯಾನ್ಸರ್ ಎಂಬ ಕಾಯಿಲೆ ಇಂದ ಬಳಲುತ್ತಿದ್ದರೆ 2 ಸಲ ಆಪರೇಷನ್ ಆಗಿದೆ ಮತ್ತೆ ಕಾಯಿಲೆ ಜಾಸ್ತಿ ಆಗಿದೆ ಈಗ ಮತ್ತೆ ಆಪರೇಷನ್ ಮಾಡಿಸ್ಬೇಕು ಮತ್ತೆ ಆಪರೇಷನ್ ಅಂದ್ರೆ ನಾವು ತುಂಬಾ ತೊಂದ್ರೆಲಿ ಇದೀವಿ ಅದರಿಂದ ಸಹಾಯ ಅನಿವಾರ್ಯತೆ ಇದೆ pls ಅಣ್ಣ pic.twitter.com/c6vPR78BRI

— Kiccha Laxman Gowda (@LaxmanKiccha)
click me!